Wednesday, 14th May 2025

CEPT: ಭಾರತದ ವಾಸ್ತುಶಿಲ್ಪ ಆವಿಷ್ಕರಿಸಿ: ಸಿಇಪಿಟಿ ಯಿಂದ ಬೆಂಗಳೂರು ಮತ್ತು ಹಂಪಿಯಲ್ಲಿ ಹೊಸ ಕಾರ್ಯಕ್ರಮಗಳಿಗೆ ಚಾಲನೆ

ಜನವರಿ 15, 2025ರವರೆಗೆ ಶುಲ್ಕಕ್ಕೆ ರಿಯಾಯಿತಿ

ಬೆಂಗಳೂರು: ಉದ್ಯಮಕ್ಕೆ ಸಜ್ಜುಗೊಳಿಸುವ ಸಿಇಪಿಟಿ ವಿಶ್ವವಿದ್ಯಾಲಯದ ಉಪಕ್ರಮ ಸಿಇಪಿಟಿ(CEPT) ಪ್ರೊಫೆಷ ನಲ್ ಪ್ರೋಗ್ರಾಮ್ (CPP) ವೃತ್ತಿನಿರತರಿಗೆ ಉದ್ಯಮಕ್ಕೆ ಸನ್ನದ್ಧಗೊಳಿಸುವ ತರಬೇತಿ ಕಾರ್ಯಕ್ರಮವಾಗಿದ್ದು ಬೆಂಗಳೂರಿನಲ್ಲಿ ಹೊಚ್ಚಹೊಸ ಎರಡು ವೃತ್ತಿಪರ ಸರ್ಟಿಫಿಕೇಟ್ ಪ್ರೋಗ್ರಾಮ್ ಗಳಿಗೆ ಅರ್ಜಿ ಆಹ್ವಾನಿಸಿದೆ.

ಪ್ರೊಫೆಷನಲ್ ಸರ್ಟಿಫಿಕೇಟ್ ಪ್ರೋಗ್ರಾಮ್ ಆನ್ `ಡಿಸೈನ್ ಪ್ರಾಕ್ಟೀಸಸ್ ಇನ್ ಬೆಂಗಳೂರು’ ಜನವರಿ 30ರಿಂದ ಫೆಬ್ರವರಿ 02, 2025ರವರೆಗೆ ನಡೆಯುತ್ತಿದೆ.

`ಡಿಸೈನ್ ಪ್ರಾಕ್ಟೀಸಸ್ ಇನ್ ಬೆಂಗಳೂರು’ ಕಾರ್ಯಕ್ರಮವನ್ನು ವಾಸ್ತುಶಿಲ್ಪಿಗಳು, ಡಿನೈನ್ ವೃತ್ತಿಪರರು, ರಿಯಲ್ ಎಸ್ಟೇಟ್ ಮತ್ತು ಪ್ಲಾನಿಂಗ್ ವೃತ್ತಿಪರರು, ವಿನ್ಯಾಸದ ಆಸಕ್ತರಿಗೆ ರೂಪಿಸಲಾಗಿದ್ದು ಭಾಗವಹಿಸುವವರಿಗೆ ಬೆಂಗಳೂರು ನಗರದಲ್ಲಿರುವ ಅಸಾಧಾರಣ ವಿನ್ಯಾಸದ ಇಕೊಸಿಸ್ಟಂನಲ್ಲಿ ಭಾಗವಹಿಸುವ ಅವಕಾಶ ನೀಡುತ್ತದೆ ಮತ್ತು ಅವರಿಗೆ ವಿಸ್ತಾರವಾಗಿ ಮಾನ್ಯತೆ ಪಡೆದ ಪ್ರಾಜೆಕ್ಟ್ ಗಳು ಮತ್ತು ಅವುಗಳ ಹಿಂದಿರುವ ಜನರನ್ನು ಪರಿಚಯಿಸುತ್ತದೆ.

ಈ ಕೋರ್ಸ್ ಅನ್ನು ಜನವರಿ 30ರಿಂದ ಫೆಬ್ರವರಿ 02, 2025ರವರೆಗೆ ಬೆಂಗಳೂರಿನಲ್ಲಿ ನೀಡಲಾಗುತ್ತದೆ. ಈ ನಾಲ್ಕು ದಿನಗಳ ಕಾರ್ಯಕ್ರಮವು ಬೆಂಗಳೂರಿನ ಪ್ರಮುಖ ಪ್ರಾಜೆಕ್ಟ್ ಗಳಿಗೆ ವಾಕಿಂಗ್ ಟೂರ್ ಗಳು ಮತ್ತು ಭೇಟಿಗಳನ್ನು ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸಲು ಜನವರಿ 21, 2025 ಕೊನೆಯ ದಿನಾಂಕ. ಈ ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ, ಅರ್ಜಿ ಪ್ರಕ್ರಿಯೆ ಮತ್ತು ಶುಲ್ಕಕ್ಕೆ https://cpp.cept.ac.in/program/details/design-practices-in-bengaluru ಇಲ್ಲಿ ಕ್ಲಿಕ್ ಮಾಡಿರಿ.

ಪ್ರೊಫೆಷನಲ್ ಸರ್ಟಿಫಿಕೇಟ್ ಪ್ರೋಗ್ರಾಮ್ ಇನ್ `ಹಂಪಿ’: ಪ್ರೋಗ್ರಾಮ್ ಇನ್ ಆರ್ಕಿಟೆಕ್ಚರಲ್ ಹಿಸ್ಟರಿ ಅಂಡ್ ಹೆರಿಟೇಜ್, ಫೆಬ್ರವರಿ 13ರಿಂದ 16, 2025ರವರೆಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಹಂಪಿಯಲ್ಲಿ.

ಈ ಕಾರ್ಯಕ್ರಮವನ್ನು ಫೆಬ್ರವರಿ 13ರಿಂದ 16, 2025ರವರೆಗೆ ಯುನೆಸ್ಕೋ ವಿಶ್ವ ಪರಂಪರೆಯ ತಾಣ ಹಂಪಿಯಲ್ಲಿ ನೀಡಲಾಗುತ್ತಿದ್ದು ವಾಸ್ತುಶಿಲ್ಪಿಗಳು, ನಗರ ವಿನ್ಯಾಸಕರು, ಪರಂಪರೆ ಸಂರಕ್ಷಕರು, ಇತಿಹಾಸ ತಜ್ಞರು ಮತ್ತು ಇತಿಹಾಸ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಆಸಕ್ತಿ ಹೊಂದಿರುವವರೂ ಭಾಗವಹಿಸಬಹುದು.

ಹಂಪಿಯ ವಿಶಿಷ್ಟ ವಾಸ್ತುಶಿಲ್ಪದ ಹಿಂದೆ, ಸ್ಥಳದಲ್ಲಿನ ಉಪನ್ಯಾಸಗಳಲ್ಲಿ ಭಾಗವಹಿಸುವುದು ಮತ್ತು ಸಂಜೆಯ ಚರ್ಚೆಗಳಲ್ಲಿ ಭಾಗವಹಿಸಬಹುದು.ಈ ಕಾರ್ಯಕ್ರಮಗಳಲ್ಲಿ ಪರಂಪರೆ ನಿರ್ವಹಣೆ ಮತ್ತು ಸಂರಕ್ಷಣೆಯ ಸವಾಲು ಗಳು ಒಳಗೊಂಡಿರುತ್ತವೆ.

ಈ ಕಾರ್ಯಕ್ರಮವು ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಉತ್ಸಾಹಿಗಳಿಗೆ ಮತ್ತು ಅಭ್ಯಾಸ ಮಾಡುವವರಿಗೆ ವಾಸ್ತುಶಿಲ್ಪವನ್ನು ಶ್ಲಾಘಿಸುವುದೇ ಅಲ್ಲದೆ ಪರಂಪರೆ ಸಂರಕ್ಷಣೆಯ ವಿಶಿಷ್ಟ ಸವಾಲುಗಳನ್ನು ಗುರುತಿಸಲು ಅವಕಾಶ ನೀಡುತ್ತದೆ.

ಈ ಹೊಸ ಕಾರ್ಯಕ್ರಮಗಳ ಕುರಿತು ಸಿಇಪಿಟಿ ಯೂನಿವರ್ಸಿಟಿಯ ಸಿಪಿಪಿ ಮುಖ್ಯಸ್ಥ ಡಾ.ಸುಭ್ರಂಗ್ಸು ಗೋಸ್ವಾಮಿ, “ಬೆಂಗಳೂರು ಕಾರ್ಯಕ್ರಮವು ಭಾಗವಹಿಸುವವರನ್ನು ನಗರದ ಉಜ್ವಲ ಡಿಸೈನ್ ಇಕೊಸಿಸ್ಟಂನಲ್ಲಿ ತಲ್ಲೀನ ಗೊಳಿಸುವ ಅವಕಾಶ ನೀಡುತ್ತದೆ, ಐತಿಹಾಸಿಕ ಕಟ್ಟಡಗಳಿಂದ ಕಾರ್ಪೊರೇಟ್ ಕ್ಯಾಂಪಸ್ ಗಳವರೆಗೆ ಹಾಗೂ ಬೃಹತ್ತಾದ ಗೃಹ ಯೋಜನೆಗಳವರೆಗೆ ಆವಿಷ್ಕರಿಸುವ ಅವಕಾಶ ನೀಡುತ್ತದೆ. ಹಂಪಿಯ ಕಾರ್ಯಕ್ರಮವು ವಿಜಯ ನಗರ ಕಾಲಘಟ್ಟದ ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಕಾಣಲು ಅವಕಾಶ ನೀಡುತ್ತದೆ. ಎರಡೂ ಕಾರ್ಯಕ್ರಮಗಳು ತಲ್ಲೀನಗೊಳಿಸುವ ಆವಿಷ್ಕಾರ, ಪರಿಣಿತರ ಸಂವಹನ ಮತ್ತು ಸಹಯೋಗದ ಚರ್ಚೆಗಳಿಗೆ ಆದ್ಯತೆ ನೀಡುತ್ತದೆ” ಎಂದರು.

ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಜನವರಿ 31, 2025. ಈ ಕಾರ್ಯಕ್ರಮದ ಅರ್ಜಿ, ಶುಲ್ಕಗಳ ಕುರಿತು ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ.

Leave a Reply

Your email address will not be published. Required fields are marked *