ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಘಟನೆ
ಗೌರಿಬಿದನೂರು: ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಘಟನೆ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಬೆಳಚಿಕ್ಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಈ ಸಂಬಂಧ ಗೋಪಾಲಪ್ಪ ಮಂಚೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಹೇಳಿರು ವಂತೆ ಗೋಪಾಲಪ್ಪ, ವೈಕುಂಠ ಏಕಾದಶಿಯಂದು ಗ್ರಾಮದ ವೆಂಕಟರಮಣಸ್ವಾಮಿ ದೇವಾ ಲಯಕ್ಕೆ ಪೂಜೆಗೆಂದು ಹೋಗಿದ್ದರು. ಆಗ ದೇವಾಲಯದ ಬಾಗಿಲಿನಲ್ಲೇ, ನಿಂತಿದ್ದ ಬೆಳಚಿಕ್ಕನಹಳ್ಳಿಯ ಗ್ರಾಮದ ತಿಮ್ಮಾರೆಡ್ಡಿ, ಭಾಸ್ಕರ್ ರೆಡ್ಡಿ, ಬಿ.ವಿ.ವೆಂಕಟೇಶರೆಡ್ಡಿ, ಮತ್ತು ಪಿಂಜರ್ಲಹಳ್ಳಿಯ ಶ್ರೀನಿವಾಸರೆಡ್ಡಿ ನೀನು ಮಾದಿಗ ಜಾತಿಗೆ ಸೇರಿದವನಾಗಿರುವು ದರಿಂದ ದೇವಾಲಯದ ಒಳಗೆ ಹೋಗಬಾರದು, ಎಂದು ಅವಾಚ್ಯ ಶಬ್ದಗಳಿಂದ ಸಾರ್ವಜನಿಕವಾಗಿ ನಿಂದಿಸಿದ್ದಲ್ಲದೆ, ಕೊರಳ ಪಟ್ಟಿಯನ್ನು ಹಿಡಿದುಕೊಂಡು ದೇವಾಲಯದ ಆವರಣದಿಂದ ಆಚೆ ದೂಡಿದ್ದಾರೆ. ಇವರ ಮೇಲೆ ಕ್ರಮ ವಹಿಸಬೇಕು ಎಂದು ದೂದು ನೀಡಿದ್ದಾರೆ.
ಈ ಘಟನೆ ವೈರಲ್ ಆಗುತ್ತಿದ್ದಂತೆ ಈ ಘಟನೆಗೆ ಕಾರಣವಾಗಿದ್ದಾರೆ ಎನ್ನಲಾದ ಎಲ್ಲರೂ ತಲೆಮರೆಸಿಕೊಂಡಿದ್ದು, ದೂರಿನ ಹಿನ್ನೆಯಲ್ಲಿ ಶನಿವಾರ ಬೆಳಚಿಕ್ಕನಹಳ್ಳಿಯ ಗ್ರಾಮದ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್, ತಹಶೀ ಲ್ದಾರ್ ಮಹೇಶ್ ಪತ್ರಿ ಮತ್ತು ವೃತ್ತ ನಿರೀಕ್ಷಕ, ಕೆ.ಪಿ.ಸತ್ಯನಾರಾಯಣ್ ಭೇಟಿ ನೀಡಿದ್ದುೆ ದಲಿತ ಮುಖಂಡರು ಮತ್ತು ಗ್ರಾಮಸ್ಥರ ಜತೆ ಶಾಂತಿ ಸಭೆ ನಡೆಸಿದ್ದಲ್ಲದೆ ಎಲ್ಲರ ಸಮ್ಮುಖದಲ್ಲಿ ದಲಿತ ಯುವಕ ಗೋಪಾಲಪ್ಪನನ್ನು ದೇವ ಸ್ಥಾನದ ಒಳಗೆ ಪ್ರವೇಶ ಮಾಡಿಸಿದ್ದಾರೆ.
ಈ ವೇಳೆ ಮಾತನಾಡಿದ ಡಿವೈಎಸ್ಪಿ ಶಿವಕುಮಾರ್, ಯಾವುದೊ ಒಂದು ಕೆಟ್ಟ ಸಮಯದಲ್ಲಿ ಈ ಒಂದು ಅಹಿತಕರ ಘಟನೆ ನಡೆದಿದೆ. ಗ್ರಾಮಸ್ಥರು, ಯಾವುದೇ ಪ್ರಚೋದನೆಗೆ ಒಳಗಾಗದೆ, ಶಾಂತಿ ಸೌಹಾರ್ದತೆಯಿಂದ ಬಾಳ್ವೆ ನಡೆಸ ಬೇಕು. ದೇಶ ಆಭಿವೃದ್ಧಿಯತ್ತ ಸಾಗುತ್ತಿರುವ ಈ ಯುಗದಲ್ಲೂ ಜಾತಿ ಪದ್ಧತಿ ಮಾಡುವುದು, ಕೆಟ್ಟ ಬೆಳವಣಿಗೆಯೇ ಸರಿ. ಕಾನೂನಿನಲ್ಲಿ ಇಂತಹ ಬೆಳವಣಿಗೆಗಳಿಗೆ ಅವಕಾಶವಿಲ್ಲ. ಜಾತಿ ಆಚರಣೆ ಮಾಡಿದರೆ ಕಾನೂನಿನಲ್ಲಿ ಕಠಿಣ ಶಿಕ್ಷೆಗಳಿವೆ, ಯುವಕರು ಅಭಿವೃದ್ಧಿಯ ಕಡೆ ಗಮನ ಹರಿಸಬೇಕು, ತಮ್ಮ ನಡತೆ ಮತ್ತು ಹಾವ ಭಾವಗಳನ್ನು ಬದಲಾವಣೆ ಮಾಡಿಕೊಳ್ಳಬೇಕು ಗ್ರಾಮದ ಎಲ್ಲರೂ ಒಮ್ಮತದಿಂದ ಸಹಬಾಳ್ವೆ ನಡೆಸಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ಈ ಗ್ರಾಮದಲ್ಲಿ ಉನ್ನತ ವಿದ್ಯಾಭ್ಯಾಸ ಮಾಡಿ ಉತ್ತಮ ಉದ್ಯೋಗ ದಲ್ಲಿರುವವರ ಸಂಖ್ಯೆ ಹೆಚ್ಚಿದೆ. ಕೆಲವರು ವಿದೇಶಗಳಲ್ಲೂ ನೆಲೆಸಿದ್ದಾರೆ. ಇಂತಹ ಮುಂದುವರೆದ ಹಳ್ಳಿಯಲ್ಲಿ ಯಾವುದೋ ಒಬ್ಬ ವ್ಯಕ್ತಿ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪು ಮಾಡಿದ್ದಾನೆ. ಇದನ್ನು ಗ್ರಾಮಸ್ಥರು ಸಹ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಯಾರೋ ಒಬ್ಬ ವ್ಯಕ್ತಿಯ ಆಚಾತುರ್ಯದಿಂದ ಈ ಘಟನೆ ನಡೆದಿದೆ. ಅವರಿಗೆ ಗ್ರಾಮಸ್ಥರು ಬುದ್ದಿವಾದ ಹೇಳಿದ್ದಾರೆ. ಈ ಘಟನೆಯನ್ನು ಮರೆತು, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಅನ್ಯೋನ್ಯ ದಿಂದ ಬಾಳಬೇಕು ಎಂದರು.
ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ಮಾತನಾಡಿ, ಕಳೆದ ಹಲವು ವರ್ಷಗಳಲ್ಲಿ ಇಂತಹ ಘಟನೆ, ಈ ಭಾಗದಲ್ಲಿ ನಡೆದಿಲ್ಲ, ದೇಶ ವಿದೇಶಗಳಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಿರುವ ಇಂದಿನ ಕಾಲದಲ್ಲಿ, ಇನ್ನು ಹಳ್ಳಿಗಳಲ್ಲಿ ಜಾತಿ ಪದ್ಧತಿಗೋಸ್ಕರ ಹೊಡೆದಾಡುತ್ತಿರುವುದು ವಿಷಾದನೀಯ.ದೇಶದಲ್ಲಿ ಕಾನೂನು ತುಂಬಾ ಪ್ರಬಲವಾಗಿದ್ದು, ಯಾರು ಕಾನೂನನ್ನು ಉಲ್ಲಂಘನೆ ಮಾಡಿ,ಕಾನೂನು ಕೈಗೆತ್ತಿಕೊಳ್ಳುತ್ತಾರೋ, ಅಂತಹವರಿಗೆ ಕಾನೂನು ತಕ್ಕ ಪಾಠ ಕಲಿಸು ತ್ತದೆ. ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡಲು ಯಾರಾದರೂ ಪ್ರಯತ್ನಿಸಿದರೆ, ಅವರಿಗೆ ಕಠಿಣ ಶಿಕ್ಷೆ ಗ್ಯಾರಂಟಿ, ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ಮದ್ಯೆ ವೈಷ್ಣಮ್ಯ ಮೂಡಿಸುವವರ ಮೇಲೆ ಜಾತಿನಿಂ dನೆ ಪ್ರಕಾರಣ, ಗೂಂಡಾ ಕಾಯ್ದೆಯಡಿ ಮೊಕದ್ದಮ್ಮೆ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ, ಮಂಚೇನಹಳ್ಳಿ ಪಿ.ಎಸ್.ಐ.ಮೂರ್ತಿ, ಕೋಚಿಮುಲ್ ನಿರ್ದೇಶಕ ಕಾಂತರಾಜು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀರಾಮ ರೆಡ್ಡಿ, ಗಿರೀಶ್ ರೆಡ್ಡಿ, ದಲಿತ ಮುಖಂಡರಾದ ಮಲ್ಲಸಂದ್ರ ಗಂಗಾಧರಪ್ಪ, ಬಾಲಕುಂಟಹಳ್ಳಿ ಗಂಗಾಧರಪ್ಪ, ಮುನಿಯಪ್ಪ, ನಾಗಾರ್ಜುನ, ನರಸಿಂಹ ಮೂರ್ತಿ, ರವಿಕುಮಾರ್, ಪೃಥ್ವಿ, ಸೋಮಯ್ಯ, ಚಿಕ್ಕನರಸಿಂಹಯ್ಯ, ಜಯರಾಮ್ ಮತ್ತಿತರ ಮುಖಂಡರು ಹಾಜರಿದ್ದರು.
ದಲಿತ ಗೋಪಾಲಪ್ಪ ಹೇಳಿಕೆ
ವೈಕುಂಠ ಏಕಾದಶಿ ಪ್ರಯುಕ್ತ ದೇವರ ಪೂಜೆಗೆ ಬಂದ ಸಂದರ್ಭದಲ್ಲಿ, ಸವರ್ಣಿಯರು, ನೀನು ಮಾದಿಗ ಜನಾಂಗ ದವನು ಒಳಗೆ ಬರಬಾರದು ಎಂದು, ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಈ ಕುರಿತು ಮಂಚೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನನಗೂ ಮತ್ತು ನಮ್ಮ ಜಾತಿಗೆ ಅವಮಾನ ವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಒದಗಿಸಿಕೊಡಬೇಕು ಎಂದು ಗೋಪಾಲಪ್ಪ ಮನವಿ ಮಾಡಿದ್ದಾರೆ.
ಇದನ್ನೂ ಓದಿ: chikkaballapurnews