Saturday, 10th May 2025

Physical Abuse: ಅಂಗನವಾಡಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ಸಹಾಯಕಿಯ ಗಂಡನಿಂದಲೇ ಹೀನ ಕೃತ್ಯ!

Physical Abuse

ಬೆಳಗಾವಿ: ಅಂಗನವಾಡಿಗೆ ನುಗ್ಗಿ ಶಿಕ್ಷಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ (Physical Abuse) ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿಯಲ್ಲಿ ಅಡುಗೆ ಮಾಡುವ ಮಹಿಳಾ ಸಹಾಯಕಿಯ ಗಂಡನೇ ಈ ಹೀನ ಕೃತ್ಯ ಎಸಗಿದ್ದಾನೆ.

ಅಂಗನವಾಡಿ ಕೇಂದ್ರದಲ್ಲಿರುವ ಅಡುಗೆ ಸಿಬ್ಬಂದಿಗೆ ಶೌಚಾಲಯ ಸ್ವಚ್ಛ ಮಾಡುವಂತೆ ಅಡುಗೆ ಮಾಡುವ ಮಹಿಳೆಗೆ ಶಿಕ್ಷಕಿ ಹೇಳಿದ್ದಾರೆ. ಈ ವಿಚಾರವನ್ನು ತನ್ನ ಗಂಡನಿಗೆ ಅಡುಗೆ ಸಿಬ್ಬಂದಿ ಸಾವಿತ್ರಿ ಕರ್ಲಟ್ಟಿ ಹೋಗಿ ಹೇಳಿದ್ದಾರೆ.
ಇದರಿಂದ ಕೋಪಗೊಂಡು ಅಂಗನವಾಡಿಗೆ ಆಗಮಿಸಿದ್ದ ಆರೋಪಿ ಸಿದ್ರಾಯಿ ಕರ್ಲಟ್ಟಿ, ತನ್ನ ಹೆಂಡತಿಗೆ ಶೌಚಾಲಯ ಕ್ಲೀನ್ ಮಾಡಲು ಹೇಳುತ್ತೀಯಾ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ.

ಇದೇ ವೇಳೆ ಶಿಕ್ಷಕಿ ಸೀರೆ ಎಳೆದು ಮಾನಭಂಗ ಮಾಡಲು ಆರೋಪಿ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಶಿಕ್ಷಕಿ ಬ್ರೈನ್ ಟ್ಯೂಮರ್‌ದಿಂದ ಬಳಲುತ್ತಿದ್ದು, ಮಾನಸಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | CM Siddaramaiah: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ; ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದ ಸಿಎಂ

ಕೂಲಿ ಅರಸಿ ಹೊರಟವರು ಮಸಣ ಸೇರಿದರು; ಲಾರಿಗೆ ಕ್ರೂಸರ್ ಡಿಕ್ಕಿಯಾಗಿ ಇಬ್ಬರ ದುರ್ಮರಣ

ಶಿರಾ: ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಲಾರಿಗೆ ಡಿಕ್ಕಿ ಆಗಿ, ಕ್ರೂಸರ್ ಚಾಲಕ ಸೇರಿ ಇಬ್ಬರು ಮೃತಪಟ್ಟು, ನಾಲ್ವರಿಗೆ ತೀವ್ರ ಗಾಯಗಳಾಗಿರುವ ಘಟನೆ (Road accident) ರಾಷ್ಟ್ರೀಯ ಹೆದ್ದಾರಿ 48 ರಲ್ಲಿರುವ ಎಮ್ಮೇರಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ.

ಚಾಲಕ ಬಸವರಾಜು (40), ಸುರೇಶ್ (28) ಮೃತ ದುರ್ದೈವಿಗಳು. ಮೃತರನ್ನು ರಾಯಚೂರು ಜಿಲ್ಲೆಯ ಮಾನ್ವಿ ಮೂಲದವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಆನಂದ್, ವೀರೇಶ್, ಆದೆಪ್ಪ, ನಾಗಮ್ಮ ತೀವ್ರ ಗಾಯಗೊಂಡಿದ್ದು, ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಕೂಲಿ ಕೆಲಸ ಮಾಡಲು ಬೆಂಗಳೂರಿನತ್ತ ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಯಿಂದ ಲಾರಿಗೆ ಕ್ರೂಸರ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ರೂಸರ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *