ಚಿಂತಾಮಣಿ: ತಾಲ್ಲೂಕಿನ ಪುರಾಣ ಪ್ರಸಿದ್ದ ಯಾತ್ರಸ್ಥಳ ಆಲಂಬಗಿರಿ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾ ಲಯದಲ್ಲಿ ಮುಕ್ಕೋಟಿ ದ್ವಾದಶಿ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು.
ಘಂಟನಾದ, ಸುಪ್ರಭಾತದೊಂದಿಗೆ, ಗೋಪೂಜೆ ಸಲ್ಲಿಸಲಾಯಿತು. ನಂತರ ರಥಬೀದಿಯಲ್ಲಿ ಗರುಡೋತ್ಸವನ್ನು ನೆರವೇರಿಸಲಾಯಿತು.
ಮುಕ್ಕೋಟಿ ದ್ವಾದಶಿ ಸಂದರ್ಭದಲ್ಲಿ ದೇವರಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಏಕಾದಶಿಯಂದು ಉತ್ಸವ ಮೂರ್ತಿಗೆ ಸೂರ್ಯಪ್ರಭಾ ವಾಹನದಲ್ಲಿವೇಣುಗೋಪಾಲಸ್ವಾಮಿ ಅಲಂಕಾರವನ್ನು ಮಾಡಲಾಗಿತ್ತು. ಉತ್ಸವಕ್ಕೆ ಗರುಡವಾಹನವನ್ನು ಸರ್ವಾಲಂಕೃತವಾಗಿ ಸಿದ್ಧಗೊಳಿಸಲಾಗಿತ್ತು. ಗರುಡವಾಹನದಲ್ಲಿ ಶ್ರೀದೇವಿ ಭೂದೇವಿ ಸಮೇತ ವೆಂಕಟರಮಣಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಅಷ್ಟೋತ್ತರ ಸಹಿತ ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಆಲಂಬಗಿರಿಯ ರಥಬೀದಿಯಲ್ಲಿ ಗರುಡೋತ್ಸವವನ್ನು ಮಾಡಲಾಯಿತು.
ಉತ್ಸವದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರ ನೇತೃತ್ವದಲ್ಲಿ ಭಜನಾ ತಂಡಗಳು ತಂಡೋಪತಂಡವಾಗಿ ಭಾಗವಹಿಸಿ ಉತ್ಸವದುದ್ದಕ್ಕೂ ಭಜನೆ ಮಾಡುತ್ತ ಸಾಗಿದ ದೃಶ್ಯ ಮನಮೋಹಕ ವಾಗಿತ್ತು. ಪ್ರತ್ಯಕ್ಷ ಗರುಡಪಕ್ಷಿಯ ದರ್ಶನವನ್ನು ಕಂಡ ಭಕ್ತಜನ ಗೋವಿಂದ ನಾಮದ ಜಯಘೋಷವನ್ನು ಮಾಡಿ ದರು. ಉತ್ಸವವು ಭಕ್ತಿಭಾವದ ಸಂಚಲವನ್ನುAಟುಮಾಡಿತು. ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ವನ್ನು ಪಡೆದರು. ನಾದಸ್ವರ ವಿದ್ವಾನ್ ಆಲಂಬಗಿರಿ ಶ್ರೀನಿವಾಸ್ ರವರ ಮುಂದಾಳತ್ವದಲ್ಲಿ ನಾದಸ್ವರ ವಾದನ ಮೂಡಿಬಂದಿತು. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಮುಕ್ಕೋಟಿ ದ್ವಾದಶಿ ಕಾರ್ಯಕ್ರಮದ ಅಂಗವಾಗಿ ಗ್ರಾಮಸ್ಥರಿಂದ ಭಜನೆಯನ್ನು ಏರ್ಪಡಿಸಲಾಗಿತ್ತು. ಭಕ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: chikkaballapurnews