ವೆಲಿಂಗ್ಟನ್: ಮುಂದಿನ ತಿಂಗಳು ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿರುವ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ(Champions Trophy) ನ್ಯೂಜಿಲ್ಯಾಂಡ್ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ನೂತನ ಕಪ್ತಾನ ಮಿಚೆಲ್ ಸ್ಯಾಂಟ್ನರ್ ಮೊದಲ ಬಾರಿಗೆ ಐಸಿಸಿ ಕೂಟದಲ್ಲಿ ತಂಡ ಮುನ್ನಡೆಸಲಿದ್ದಾರೆ.
ಅನುಭವಿ ಆಟಗಾರರಾದ ಕೇನ್ ವಿಲಿಯಮ್ಸನ್, ಡೆವೊನ್ ಕಾನ್ವೇ ಮತ್ತು ಲಾಕಿ ಫರ್ಗುಸನ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಇತ್ತೀಚೆಗೆ ಮುಗಿದ ಶ್ರೀಲಂಕಾ ವಿರುದ್ದದ ತವರಿನ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿರಲಿಲ್ಲ. ಹೀಗಾಗಿ ಇವರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿತ್ತು. ಆದರೆ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವೇಗಿಗಳಾದ ವಿಲ್.ರೂರ್ಕ್ ಮತ್ತು ನಾಥನ್ ಸ್ಮಿತ್ ಗೆ ಮೊದಲ ಐಸಿಸಿ ಟೂರ್ನಮೆಂಟ್ ಇದಾಗಿದೆ. ಫೆಬ್ರವರಿ 19 ರಂದು ಕರಾಚಿಯಲ್ಲಿ ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಆಡಲಿದೆ. ನಂತರ ಬಾಂಗ್ಲಾದೇಶ ಮತ್ತು ಭಾರತದ ವಿರುದ್ಧದ ಪೂಲ್ ಪಂದ್ಯಗಳು ನಡೆಯಲಿವೆ.
19 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಭಾರತ ಒಳಗೊಂಡ 3 ಲೀಗ್ ಪಂದ್ಯಗಳು ಮತ್ತು ಒಂದು ಸೆಮಿಫೈನಲ್ ಪಂದ್ಯ ದುಬೈನಲ್ಲಿ ನಿಗದಿಯಾಗಿದೆ. ಟೂರ್ನಿಯ ಉಳಿದ 9 ಲೀಗ್ ಮತ್ತು ಇನ್ನೊಂದು ಸೆಮಿಫೈನಲ್ ಪಂದ್ಯ ಪಾಕಿಸ್ತಾನದ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ. 2ನೇ ಸೆಮಿಫೈನಲ್ ಮಾರ್ಚ್ 2ರಂದು ಲಾಹೋರ್ನಲ್ಲಿ ನಿಗದಿಯಾಗಿದೆ. ಟೂರ್ನಿಯಲ್ಲಿ ಆಡುವ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್ ರಾಬಿನ್ ಲೀಗ್ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೆಮಿಫೈನಲ್ಗೇರಲಿವೆ.
ನ್ಯೂಜಿಲ್ಯಾಂಡ್: ಮಿಚೆಲ್ ಸ್ಯಾಂಟ್ನರ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೇ, ರಾಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಮಾರ್ಕ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಬೆನ್ ಸಿಯರ್ಸ್, ವಿಲ್ ಒ ರೂರ್ಕ್.
ವೇಳಾಪಟ್ಟಿ
ಫೆ.19 ಪಾಕಿಸ್ತಾನ-ನ್ಯೂಜಿಲ್ಯಾಂಡ್, ಸ್ಥಳ: ಕರಾಚಿ
ಫೆ. 20 ಬಾಂಗ್ಲಾದೇಶ-ಭಾರತ, ಸ್ಥಳ: ದುಬೈ
ಫೆ. 21 ಅಫ್ಘಾನಿಸ್ತಾನ-ದ. ಆಫ್ರಿಕಾ, ಸ್ಥಳ: ಕರಾಚಿ
ಫೆ. 22 ಆಸ್ಟ್ರೆಲಿಯಾ-ಇಂಗ್ಲೆಂಡ್, ಸ್ಥಳ: ಲಾಹೋರ್
ಫೆ. 23 ಭಾರತ-ಪಾಕಿಸ್ತಾನ,ಸ್ಥಳ: ದುಬೈ
ಫೆ. 24 ಬಾಂಗ್ಲಾದೇಶ-ನ್ಯೂಜಿಲ್ಯಾಂಡ್, ಸ್ಥಳ: ರಾವಲ್ಪಿಂಡಿ
ಫೆ. 25 ಅಸ್ಟ್ರೆಲಿಯಾ-ದ. ಆಫ್ರಿಕಾ,ಸ್ಥಳ: ರಾವಲ್ಪಿಂಡಿ
ಫೆ. 26 ಅಫ್ಘಾನಿಸ್ತಾನ-ಇಂಗ್ಲೆಂಡ್,ಸ್ಥಳ: ಲಾಹೋರ್
ಫೆ. 27 ಪಾಕಿಸ್ತಾನ-ಬಾಂಗ್ಲಾದೇಶ,ಸ್ಥಳ: ರಾವಲ್ಪಿಂಡಿ
ಫೆ. 28 ಅಫ್ಘಾನಿಸ್ತಾನ-ಆಸ್ಟ್ರೆಲಿಯಾ,ಸ್ಥಳ: ಲಾಹೋರ್
ಮಾ. 1 ದಣ ಆಫ್ರಿಕಾ-ಇಂಗ್ಲೆಂಡ್,ಸ್ಥಳ: ಕರಾಚಿ
ಮಾ. 2 ಭಾರತ-ನ್ಯೂಜಿಲ್ಯಾಂಡ್, ಸ್ಥಳ: ದುಬೈ
ಮಾ. 4 ಸೆಮಿಫೈನಲ್-1, ಸ್ಥಳ: ದುಬೈ
ಮಾ. 5 ಸೆಮಿಫೈನಲ್-2, ಸ್ಥಳ: ಲಾಹೋರ್