ಒಂದೊಳ್ಳೆ ಮಾತು

ರೂಪಾ ಗುರುರಾಜ್
ಒಬ್ಬ ಮಹಾ ಮುಂಗೋಪಿ. ಯಾರಾದರೂ ಅವನನ್ನು ಸ್ವಲ್ಪ ಕೆಣಕಿದರೂ,ಅಥವಾ ಯಾರಾದರೂ ಅವನ ವಿರುದ್ಧ ಸ್ವಲ್ಪ ಮಾತನಾಡಿದರೂ, ಆತ ಅವರ ಮೇಲೆರಗಿ ನಾಲ್ಕು ಬಾರಿಸಿಯೇ ಬಿಡುತ್ತಿದ್ದ. ಅವನ ಬಳಿ ಮಾತನಾಡಲು ಎಲ್ಲರೂ ಹಿಂಜರಿಯುತ್ತಿದ್ದರು. ಆತನೇನೂ ದುಷ್ಟನಲ್ಲ , ಒಳ್ಳೆಯ ಮನು ಷ್ಯನ ಆದರೆ ಬಹಳ ಬೇಗ ಕೋಪಗೊಳ್ಳು ತ್ತಿದ್ದ. ಮುಂಗೋಪಕ್ಕೆ ಗುಲಾಮನಾಗಿ ಬಿಟ್ಟಿದ್ದ. ಅದು ಒಳ್ಳೆಯದಲ್ಲ ಎಂದು ಅವನಿಗೆ ಗೊತ್ತಿದ್ದೂ, ಅದನ್ನು ನಿಯಂತ್ರಿಸಲಾರದವನಾಗಿದ್ದ.
ಒಮ್ಮೆ ಆತನಿದ್ದ ಊರಿಗೆ ಒಬ್ಬ ಸಾಧುಗಳು ಬಂದರು. ಆತ ಅವರಲ್ಲಿ ತನ್ನ ಕೋಪದ ಬಗೆ ವಿವರಿಸಿ ಹೇಳಿ,
ಹೇಗಾದರೂ ಮಾಡಿ ನನಗೆ ಇದರಿಂದ ಹೊರ ಬರುವಂತೆ ದಾರಿ ತೋರಿಸಿ ಎಂದು ಬೇಡಿಕೊಂಡ. ಆಗ ಸಾಧುಗಳು ಮುಂಗೋಪದ ದುಷ್ಪರಿಣಾಮ ಗಳ ಬಗ್ಗೆ ಅವನಿಗೆ ಚೆನ್ನಾಗಿ ವಿವರಿಸಿ, ಇನ್ನು ಮುಂದೆ ಯಾರ ಮೇಲೂ ಕೋಪ ಮಾಡಿಕೊಳ್ಳಬಾರದೆಂದೂ, ಯಾರ ಮೇಲೂ ಕೈ ಎತ್ತಲೂ ಬಾರದೆಂದೂ ಅವನಿಗೆ ತಿಳಿ ಹೇಳಿದರು. ಇನ್ನು ಮುಂದೆ ಈ ರೀತಿಯಾಗಿ ವರ್ತಿಸುವುದಿಲ್ಲವೆಂದು ಸಾಧುಗಳು ಅವನ ಬಳಿ ಪ್ರಮಾಣ ಮಾಡಿಸಿ ಸಂಕಲ್ಪವನ್ನೂ ಮಾಡಿಸಿದರು.
ಸಾಧುಗಳಲ್ಲಿ, ಇವನು ಮಾಡಿದ ಸಂಕಲ್ಪ, ಪ್ರಮಾಣದ ವಿಚಾರ ಊರವರಿಗೆಲ್ಲ ಗೊತ್ತಾಯ್ತು. ಮುಂಚೆ ಅವನಲ್ಲಿ
ಜಗಳವಾಡಲು ಹೋಗಿ ಪೆಟ್ಟು ತಿಂದವರು, ಬೈಸಿಕೊಂಡವರೂ, ಈಗ ಸೇಡು ತೀರಿಸಿಕೊಳ್ಳಲು ಅವನೊಡನೆ ವಿನಾಕಾರಣ ಜಗಳ ತೆಗೆದು, ಅವನ ಮೇಲೆ ಕೈ ಎತ್ತತೊಡಗಿದರು, ಬಾಯಿಗೆ ಬಂದಂತೆ ಅವನನ್ನು ಹೀಯಾಳಿಸತೊ ಡಗಿದರು. ಹೀಗೆ ಹಲವರಿಂದ ಹೀಯಾಳಿಸಿ ಕೊಂಡು, ಪೆಟ್ಟು ತಿಂದ ಈ ಮನುಷ್ಯನಿಗೆ ಬಹಳ ದುಃಖವಾಗು ತ್ತಿತ್ತು. ಏಕಾದರೂ ನಾನು ಸಾಧುಗಳ ಮಾತನ್ನು ನಂಬಿ, ಈ ರೀತಿಯ ಸಂಕಲ್ಪ ಪ್ರಮಾಣ ಮಾಡಿಕೊಂ ಡೆನೋ? ಈಗ ಎಲ್ಲರಿಂದ ಪೆಟ್ಟು ತಿನ್ನುವ ಹಾಗಾಯಿ ತಲ್ಲ ಎಂದು ಬಹಳವಾಗಿ ಪೇಚಾಡ ತೊಡಗಿದ. ಇದು ಹೀಗೇ ಆದರೆ ನಾನು ಗುರುಗಳಿಗೆ ಕೊಟ್ಟ ಮಾತನ್ನು ಮುರಿಯಬೇಕಾಗುತ್ತದೆ ಎಂದೆನಿಸಿ, ಅವರನ್ನು ಭೇಟಿಯಾಗಲು ತೀರ್ಮಾನಿಸಿದ.
ಮಾರನೇ ದಿನವೇ ಸಾಧುಗಳನ್ನು ಹುಡುಕಿಕೊಂಡು ಹೋಗಿ, ಇದಕ್ಕೆ ಈಗ ನೀವೇ ಪರಿಹಾರ ನೀಡಿ ಎಂದು ಬೇಡಿ ಕೊಂಡ. ಇವನ ವಿಚಾರವನ್ನು ತಿಳಿದ ಸಾಧುಗಳು ನಗುತ್ತಾ, ‘ಅ ಕಣಯ್ಯಾ, ಬೇರೆಯವರೂ ನಿನ್ನ ಮೇಲೆ ಕೈ ಮಾಡುವುದು ಸಹ ತಪ್ಪೇ.. ಒಂದು ವಿಷಯ ನೆನಪಿಟ್ಟುಕೋ ಹಾವು ವಿನಾಕಾರಣ ಕಚ್ಚುವುದು ತಪ್ಪು. ಆದರೆ ತನ್ನ
ರಕ್ಷಣೆಗಾಗಿ ಬುಸುಗುಡುವುದು ತಪ್ಪಲ್ಲ ಅಲ್ಲವೇ’ ಎಂದರು ಸೂಚ್ಯವಾಗಿ ನಗುತ್ತಾ. ಅವರ ಮಾತಿನ ಅಂತರಾರ್ಥ ಅವನಿಗೆ ಹೊಳೆದು ಧನ್ಯವಾದ ಹೇಳಿ ಹೊರಟನು. ಈಗ ಈ ವ್ಯಕ್ತಿ, ಅನಗತ್ಯವಾಗಿ ಇವನ ಹತ್ತಿರ ತರಲೆ ಮಾಡಲು ಬರುವವರ ವಿರುದ್ಧ ದನಿಯ ಎತ್ತರಿಸಿ ಮಾತನಾಡಿ ಕೋಪಗೊಂಡವನಂತೆ ನಟಿಸುತ್ತಾ, ಅವರ ವಿರುದ್ಧ ತಿರುಗಿ ಕೈ ಎತ್ತುವನಂತೆ ನಟಿಸತೊ ಡಗಿದ. ಈಗ ಜನ ಇವನ ಬಗ್ಗೆ ಹೆದರ ತೊಡಗಿದರು.
ಅನಗತ್ಯವಾಗಿ ಜಗಳಕ್ಕೆ ಬರುವುದನ್ನು ನಿಲ್ಲಿಸಿದರು. ಇದರಿಂದ ಅವನಿಗೆ ಸುಮ್ಮಸುಮ್ಮನೆ ಏಟುಗಳು ಬೀಳುವುದೂ ತಪ್ಪಿತು, ಅವನು ಮಾಡಿಕೊಂಡ ಸಂಕ ಲ್ಪವೂ ನೆರವೇರಿತು. ಜನ ಆತನನ್ನು ಕಂಡು ಹೆದರು ವುದರ ಬದಲು ಆತನಿಗೆ ಗೌರವ ನೀಡತೊಡಗಿದರು. ಈ ಪಾಠ ನಮ್ಮೆಲ್ಲರಿಗೂ ಅನ್ವಯಿಸುತ್ತದೆ. ಪ್ರಪಂಚದಲ್ಲಿ ಬದುಕಬೇಕೆಂದರೆ ಎಲ್ಲಾ ರೀತಿಯ ಗುಣಗಳನ್ನು ಕೂಡ ಆವಹಿಸಿಕೊಂಡು ಬದುಕಬೇಕಾ ಗುತ್ತದೆ. ಸದಾ ವಿನಯ ಒಳ್ಳೆಯತನ ಎಲ್ಲ ಕಡೆಯೂ ಸಲ್ಲುವುದಿಲ್ಲ.
ಕಲ್ಲು ಹೊಡೆಯದೆ ಕೆಲವೊಮ್ಮೆ ಮಾವಿನ ಹಣ್ಣು ಮರದಿಂದ ಬೀಳುವುದಿಲ್ಲ. ಅಂತೆಯೇ ಎಲ್ಲಿ ಮಾತಿನ ಅಗತ್ಯವಿದೆಯೋ ಅಲ್ಲಿ ಮಾತನಾ ಡುತ್ತಾ, ಎಲ್ಲಿ ಕೋಪದ ಅಗತ್ಯವಿದೆಯೋ ಅಲ್ಲಿ ಅದನ್ನು ಪ್ರದರ್ಶಿಸುತ್ತಾ ಕೆಲಸ ಸಾಽಸಬೇಕು. ಕೆಟ್ಟತ ನದಿಂದ ಹೇಗೆ ದೂರ ಇರಬೇಕೋ ಅತಿಯಾದ ಒಳ್ಳೆ ಯತನವೂ ಕೂಡ ನಮಗೆ ಮಾರಕವೇ.
ಜಾಣತನ ದಿಂದ ವ್ಯವಹರಿಸುವುದನ್ನು ಕಲಿಯಬೇಕು. ಈ ಸೂಕ್ಷ್ಮವನ್ನು ತಿಳಿದುಕೊಂಡು ಬದುಕನ್ನು ನಡೆಸುವ
ಹದ ಎಲ್ಲರಿಗೂ ಒಲಿದು ಬರಲಿ ಎನ್ನುವುದೇ ಇಂದಿನ ಒಂದೊಳ್ಳೆ ಮಾತಿನ ಆಶಯ.
ಇದನ್ನೂ ಓದಿ: #RoopaGururaj