Saturday, 10th May 2025

Ajith Kumar: ಕಾರ್ ರೇಸಿಂಗ್‌ಗಾಗಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ನಟ ಅಜಿತ್

Ajith Kumar

ನವದೆಹಲಿ: ರೇಸಿಂಗ್ ಸೀಸನ್ ಮುಗಿಯುವವರೆಗೆ ನಾನು ಯಾವುದೇ  ಸಿನಿಮಾಕ್ಕೆ ಸಹಿ ಹಾಕುವುದಿಲ್ಲ ಎಂದು ನಟ  ಅಜಿತ್ ಕುಮಾರ್ (Ajith Kumar) ಹೇಳಿಕೆ ‌ನೀಡಿದ್ದಾರೆ. ಪ್ರಸ್ತುತ ದುಬೈನಲ್ಲಿ ನಡೆಯಲಿರುವ 24 ಗಂಟೆಗಳ ಕಾರ್ ರೇಸ್‌ನಲ್ಲಿ ಭಾಗಿಯಾಗಲಿದ್ದು ಅಜಿತ್ ಕುಮಾರ್ ರೇಸಿಂಗ್ ಎನ್ನುವ ತಂಡದ ಮೂಲಕ ಭಾಗವಹಿಸಲು ಸಿದ್ಧರಾಗಿದ್ದಾರೆ.

ಈ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಬಂದಿರುವ ನಟನನ್ನು ನೀವು ಮುಂದಿನ ಸಿನಿಮಾ  ಒಪ್ಪಿಕೊಂಡಿದ್ದೀರಾ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅಜಿತ್ ಮುಂದಿನ ಪಂದ್ಯಗಳಲ್ಲಿ ಭಾಗವಹಿಸಲು ಸುಮಾರು 9 ತಿಂಗಳು ಸಮಯ ಬೇಕು. ಆದ್ದರಿಂದ ಈ 9 ತಿಂಗಳು ಯಾವುದೇ ಚಿತ್ರೀಕರಣದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ನಟನೆ, ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದರ ನಡುವೆ ಅಜಿತ್‌ ಮೋಟಾರ್‌ ಸ್ಪೋರ್ಟ್ಸ್‌ ಬಗ್ಗೆ ಹೆಚ್ಚು ಕ್ರೇಜ್ ಹೊಂದಿದ್ದಾರೆ‌. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ  ರಿಯಲ್‌ ಆಗಿ ರೇಸ್ ಆಸಕ್ತಿ ಹೊಂದಿದ್ದಾರೆ.

ಮೊನ್ನೆಯಷ್ಟೇ ದುಬೈನಲ್ಲಿ ನಡೆಯುತ್ತಿರುವ ರೇಸ್‌ ನ  ಅಭ್ಯಾಸ ಮಾಡುವ ವೇಳೆ ಅಜಿತ್ ಕುಮಾರ್ ಓಡಿಸುತ್ತಿದ್ದ ಕಾರು 180 ಕಿಮೀ ವೇಗದಲ್ಲಿ ಬಂದು ರೇಸ್ ಟ್ರಾಕ್ ಪಕ್ಕದಲ್ಲಿದ್ದ ತಡೆಗೋಡೆಗೆ ಗುದ್ದಿ ಅಜಿತ್ ಕಾರು ಅಪಘಾತಕ್ಕೀಡಾಗಿರೋದು ಆತಂಕಕ್ಕೆ ಕಾರಣವಾಗಿತ್ತು. ಆದರೆ ಯಾವುದೇ ಗಾಯಗಳಾಗಿರಲಿಲ್ಲ. ಈ ಅಪಘಾತದ ವಿಡಿಯೊ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇದೀಗ ಮುಂದಿನ ರೇಸ್ ಸರಣಿ ಮುಗಿಯುವವರೆಗೆ 9 ತಿಂಗಳು ಯಾವುದೇ ಸಿನಿಮಾದಲ್ಲಿ  ನಟಿಸುವುದಿಲ್ಲ ಎಂದು ಅಜಿತ್ ಹೇಳಿದ್ದಾರೆ.ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಸಿನಿಮಾ ಮಾಡುವುದಾಗಿ ನಟ ಹೇಳಿದ್ದಾರೆ.ಅಜಿತ್ ನಟಿಸಿದ ಗುಡ್ ಬ್ಯಾಡ್ ಅಗ್ಲಿ’ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.ಸದ್ಯ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ ಇವರು  ಸದ್ಯಕ್ಕೆ  ರೇಸ್‌ನಲ್ಲಿ ಬ್ಯುಸಿ ಇದ್ದಾರೆ.

ಈ ಸುದ್ದಿಯನ್ನೂ ಓದಿ:Golden Milk Benefits: ಗೋಲ್ಡನ್ ಮಿಲ್ಕ್‌ ಎಂದರೇನು? ಇದನ್ನು ಕುಡಿದರೆ ಆಗುವ ಪ್ರಯೋಜನಗಳೇನು?

Leave a Reply

Your email address will not be published. Required fields are marked *