ರಾಮದುರ್ಗ: ಜನೇವರಿ ೧೨-೧೩ ರಂದು ಬೈಲಹೊಂಗಲ ತಾಲೂಕಿನ ಸಂಗೋಳ್ಳಿ ಗ್ರಾಮದಲ್ಲಿ ನಡೆಯಲಿರುವ ಸಂಗೋಳ್ಳಿ ರಾಯಣ್ಣ ಉತ್ಸವದ ಪ್ರಯುಕ್ತ ಕಾರ್ಯಕ್ರಮದ ಕುರಿತು ನಡೆಯುವ ಜಾಗೃತಿ ಜ್ಯೋತಿಯಾತ್ರೆ ಪಟ್ಟಣದ ಸಂಗೋಳ್ಳಿ ರಾಯಣ್ಣ ಸರ್ಕಲ್‌ಗೆ ಆಗಮಿಸುತ್ತಿದ್ದಂತೆ ತಾಲೂಕಾಡಳಿತ ನೇತೃತ್ವದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೂಮಾಲೆ ಹಾಕುವ ಮೂಲಕ ಕ್ರಾಂತಿವೀರ ರಾಯಣ್ಣ ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ ಕೋರಿದರು. ನಂತರ ಡೊಳ್ಳು ಕುಣಿತದೊಂದಿಗೆ ಪ್ರಾರಂಭಗೊಂಡ ಜ್ಯೋತಿ ಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿತು.
ಈ ಸಂದರ್ಭದಲ್ಲಿ ತಾಲೂಕಿನ ಲಖನಾಯ್ಕನಕೊಪ್ಪದ ಪೂರ್ಣಾನಂದ ಮಠದ ಶ್ರೀ ಕೃಷ್ಣಾನಂದ ಸ್ವಾಮೀಜಿ, ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಪ್ರದೇಶ ಕುರುಬರ ಸಂಘದ ತಾಲೂಕಾಧ್ಯಕ್ಷ ಪಡಿಯಪ್ಪ ಕ್ವಾರಿ, ಮುಖಂಡರಾದ ರೇಣಪ್ಪ ಸೋಮಗೊಂಡ, ಅಶೋಕ ಮೆಟಗುಡ್ಡ, ಪುರಸಭೆ ಸದಸ್ಯರಾದ ರಾಜೇಶ್ವರಿ ಮೆಟಗುಡ್ಡ, ಸಂಗೀತಾ ರಾಯಭಾಗ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಸಮಾಜದ ಮುಖಂಡರಾದ ಮಲ್ಲಪ್ಪ ಸೋಮಗೊಂಡ, ಸಿದ್ದು ಮೋಟೆ, ಸಿದ್ದಪ್ಪ ಮಕ್ಕನ್ನವರ, ಎಚ್.ಬಿ. ಕಿತ್ತೂರ, ಬಸವರಾಜ ಕರಿಗಾರ, ಫಕೀರಪ್ಪ ಕೊಂಗವಾಡ ಸೇರಿದಂತೆ ಇತರರಿದ್ದರು.