ಬೆಂಗಳೂರು: ಇದೇ ಜನವರಿ 11ರಂದು ಶನಿವಾರ ನಗರದ ಜೆ.ಸಿ.ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಸಂಜೆ 5.15 ರ ವೇಳೆಗೆ ಗುರು ಶ್ರೀಮತಿ ರಾಜೇಶ್ವರೀ ಎಂ ಅವರ ಶಿಷ್ಯೆ ಮಹತಿ ಎಚ್.ಬೆಳವಾಡಿ ಅವರಿಂದ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗುರು ಶ್ರೀ ಡಾ ಕೃಪಾ ಫಡ್ಕೆ, ಗುರು ಶ್ರೀಮತಿ ವಿದ್ಯಾ ರವಿಶಂಕರ್, ಗುರು ಶ್ರೀಮತಿ ರಾಧಿಕಾ ಶೆಟ್ಟಿ ಹಾಗೂ ಶ್ರೀ ಸತೀಶ್ ಪುರಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮ ಸುಗಮವಾಗಿ ನೆರವೇರಲು ಗುರು ಶ್ರೀಮತಿ ರಾಜೇಶ್ವರೀ ಎಂ, ವಿದ್ವಾನ್ ರೋಹಿತ್ ಭಟ್ ಉಪ್ಪೂರು, ವಿದ್ವಾನ್ ಸಾಯಿ ವಂಶಿ, ವಿದ್ವಾನ್ ನಿತೀಶ್ ಅಮ್ಮಣ್ಣಾಯ ಹಾಗೂ ವಿದ್ವಾನ್ ವಿಭುದೇಂದ್ರ ಸಿಂಹ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆ ಭಾಗವಾಗಿ ಪ್ರಾರ್ಥನಾ ಕಾಸ್ಟ್ಯೂಮ್ಸ್, ಡಾ. ಲಕ್ಷ್ಮೀ ರೇಖಾ ಅರುಣ್, ಶ್ರೀ ನಿಶಾಂತ್ ಅರವಿಂದಾಕ್ಷಣ್, ಶ್ರೀ ಮಂಜು ಮಡಿಕೇರಿ ಮತ್ತು ಯೂನಿವರ್ಸಲ್ ರಸಿಕಾಸ್ ಮುಂತಾದವರು ಕಾರ್ಯ ನಿರ್ವಹಿಸಲಿದ್ದಾರೆ.
ಧರಿತ್ರಿ ಕಲಾಲಯ ಮತ್ತು ಶ್ರೀಮತಿ ರಮ್ಯ ಹೃಷಿಕೇಶ ಹಾಗೂ ಶ್ರೀ ಹೇಷಿಕೇಶ ವಿ.ಬೆಳವಾಡಿ ಅವರು ಆಹ್ವಾನಿಸಿ ರುತ್ತಾರೆ.