● ಡಾ. ನಿಶಾಂತ್ ಡೊಂಗರಿ, ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಪ್ಯೂರ್ ಇವಿ
ಸುಸ್ಥಿರ ಸಾರಿಗೆ ಪರಿಹಾರಗಳ ತುರ್ತು ಅಗತ್ಯದಿಂದ ಹುಟ್ಟಿಕೊಂಡ ಎಲೆಕ್ಟ್ರಿಕ್ ವಾಹನ (ಇವಿ) ಕ್ರಾಂತಿಯು ಜಾಗತಿಕವಾಗಿ ವೇಗ ಪಡೆಯುತ್ತಿದೆ. ಆದರೆ, ವ್ಯಾಪಕವಾದ ʻಇವಿʼ ಅಳವಡಿಕೆಗೆ ಅಡ್ಡಿಯಾಗಿರುವ ಪ್ರಮುಖ ಸವಾಲುಗಳಲ್ಲಿ ಒಂದೆಂದರೆ ಅದು ʻಲಿಥಿಯಂ-ಐಯಾನ್ʼ ಬ್ಯಾಟರಿಗಳ ಉಷ್ಣ ನಿರ್ವಹಣೆ. ಇದು ಪ್ರಮುಖ ಉಷ್ಣವಲಯದ ಪರಿಸ್ಥಿತಿಗಳಲ್ಲಿ ಅತಿಯಾದ ಶಾಖ ಮತ್ತು ಉಷ್ಣ ಹರಿವಿಗೆ ಇದು ಕಾರಣವಾಗುತ್ತದೆ.
ಹಂತ ಪರಿವರ್ತನೆ ಸಾಮಗ್ರಿಗಳ (ಫೇಸ್ ಚೇಂಜಿಂಗ್ ಮೆಟೀರಿಯಲ್ಸ್ -ಪಿಸಿಎಂ) ಪಾತ್ರ
ಈ ಅಧಿಕ ಉಷ್ಣತೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಲಭ್ಯವಿರುವ ಭರವಸೆಯ ಪರಿಹಾರಗಳಲ್ಲಿ ಹಂತ ಪರಿವರ್ತನೆ ಸಾಮಗ್ರಿಗಳು ಅಥವಾ ʻಫೇಸ್ ಚೇಂಜ್ ಮೆಟೀರಿಯಲ್ಸ್ʼ(ಪಿಸಿಎಂ) ಒಂದೆನಿಸಿದೆ. ʻಪಿಸಿಎಂʼಗಳು ಹಂತ ಪರಿವರ್ತನೆಯ ಸಮಯದಲ್ಲಿ ಸುಪ್ತ ಶಾಖವನ್ನು ಹೀರಿಕೊಳ್ಳುತ್ತವೆ ಮತ್ತು ಬಿಡುಗಡೆ ಮಾಡುತ್ತವೆ, ತಾಪಮಾನದ ಏರಿಳಿತಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತವೆ. ಆದರೆ, ಸಾಂಪ್ರದಾಯಿಕ ʻಪಿಸಿಎಂʼಗಳು ಸಾಮಾನ್ಯವಾಗಿ ಕಡಿಮೆ ಉಷ್ಣ ವಾಹಕತೆಯನ್ನು ಹೊಂದಿರುತ್ತವೆ. ಹೀಗಾಗಿ ಶಾಖವನ್ನು ವೇಗವಾಗಿ ಚದುರಿಸುವಲ್ಲಿ ಅವುಗಳ ಪರಿಣಾಮಕಾರಿತ್ವವು ಮಿತಿಗೆ ಒಳಪಟ್ಟಿರುತ್ತದೆ.
ನ್ಯಾನೊ-ಕಣ ಆಧಾರಿತ ಪಿಸಿಎಂ: ಒಂದು ಕ್ರಾಂತಿಕಾರಿ ವಿಧಾನ
ಈ ಮಿತಿಯನ್ನು ನಿವಾರಿಸಲು, ʻಪ್ಯೂರ್ ಇವಿʼಯ ಸಂಶೋಧಕರು ಅದ್ಭುತ ಆವಿಷ್ಕಾರವನ್ನು ಅಭಿವೃದ್ಧಿಪಡಿಸಿ ದ್ದಾರೆ. ಅದೇ ʻನ್ಯಾನೊ-ಕಣ ಆಧಾರಿತ ಪಿಸಿಎಂʼ. ಕಾರ್ಬನ್ ನ್ಯಾನೊಟ್ಯೂಬ್ಗಳು, ʻಗ್ರ್ಯಾಫೀನ್ʼ ಅಥವಾ ಲೋಹದ ಆಕ್ಸೈಡ್ಗಳಂತಹ ನ್ಯಾನೊ-ಕಣಗಳನ್ನು ʻಪಿಸಿಎಂ ಮ್ಯಾಟ್ರಿಕ್ಸ್ʼನಲ್ಲಿ ಸೇರಿಸುವ ಮೂಲಕ, ಉಷ್ಣ ವಾಹಕತೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗುತ್ತದೆ. ಇದು ಹೆಚ್ಚು ಪರಿಣಾಮಕಾರಿ ಶಾಖ ವರ್ಗಾವಣೆಗೆ ಅನುವು ಮಾಡಿಕೊಡು ತ್ತದೆ, ʻಪಿಸಿಎಂʼಗಳು ಶಾಖವನ್ನು ವೇಗವಾಗಿ ಹೀರಿಕೊಳ್ಳಲು ಮತ್ತು ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ, ಆ ಮೂಲಕ ಸೂಕ್ತ ಬ್ಯಾಟರಿ ತಾಪಮಾನ ನಿರ್ವಹಣೆಯು ಸಾಧ್ಯವಾಗುತ್ತದೆ.
ನ್ಯಾನೊ-ಕಣ ಆಧಾರಿತ ʻಪಿಸಿಎಂʼನ ಪ್ರಮುಖ ಪ್ರಯೋಜನಗಳು:
● ಹೆಚ್ಚಿನ ಉಷ್ಣ ನಿರ್ವಹಣೆ: ನ್ಯಾನೊ-ಕಣ ಆಧಾರಿತ ಪಿಸಿಎಂ ತಾಪಮಾನದ ಏರಿಳಿತಗಳನ್ನು ಪರಿಣಾಮಕಾರಿ ಯಾಗಿ ನಿಯಂತ್ರಿಸುತ್ತದೆ, ಅತಿಯಾದ ಶಾಖ ಮತ್ತು ಉಷ್ಣ ಹರಿದುಹೋಗದಂತೆ ತಡೆಯುತ್ತದೆ.
● ಸುಧಾರಿತ ಬ್ಯಾಟರಿ ಬಾಳಿಕೆ: ಸೂಕ್ತ ನಿರ್ವಹಣಾ ತಾಪಮಾನವನ್ನು ಕಾಯ್ದುಕೊಳ್ಳುವ ಮೂಲಕ, ಬ್ಯಾಟರಿ ಘಟಕಗಳ ಮೇಲಿನ ಒತ್ತಡವನ್ನು ʻನ್ಯಾನೊ-ಪಿಸಿಎಂʼ ಕಡಿಮೆ ಮಾಡುತ್ತದೆ, ಇದು ಬ್ಯಾಟರಿಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
● ಹೆಚ್ಚಿನ ಸುರಕ್ಷತೆ: ʻನ್ಯಾನೊ-ಪಿಸಿಎಂʼ ಹೆಚ್ಚುವರಿ ರಕ್ಷಣಾ ಪದರವನ್ನು ಒದಗಿಸುತ್ತದೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸುತ್ತದೆ.
● ಅಗಾಧತೆ ಮತ್ತು ಬಹುಮುಖತೆ: ʻನ್ಯಾನೊ-ಪಿಸಿಎಂʼ ಅನ್ನು ಅಸ್ತಿತ್ವದಲ್ಲಿರುವ ಬ್ಯಾಟರಿ ವಿನ್ಯಾಸಗಳಲ್ಲಿ ಕನಿಷ್ಠ ಮಾರ್ಪಾಡುಗಳೊಂದಿಗೆ ಸುಲಭವಾಗಿ ಸಂಯೋಜಿಸಬಹುದು, ಹಾಗಾಗಿ ಹಾಲಿ ಸಮಸ್ಯೆಗಳಿಗೆ ಇದೊಂದು ಬಹುಮುಖಿ ಪರಿಹಾರವಾಗಿದೆ.
ಕಠಿಣ ಪರೀಕ್ಷೆ ಮತ್ತು ಪ್ರಮಾಣೀಕರಣ:
ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಅತ್ಯುನ್ನತ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು, ʻಪ್ಯೂರ್ ಇವಿʼಯ ನ್ಯಾನೊ-ಕಣ ಆಧಾರಿತ ಪಿಸಿಎಂ ತಂತ್ರಜ್ಞಾನವನ್ನು ಕಠಿಣ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಒಳಪಡಿಸಲಾಗಿದೆ:
● ತಾಪಮಾನ ನಿಗಾ: ಆಯಕಟ್ಟಿನ ಸ್ಥಳದಲ್ಲಿ ಸಂವೇದಕಗಳನ್ನು ಇರಿಸುವ ಮೂಲಕ ಬ್ಯಾಟರಿ ಪ್ಯಾಕ್ ನೊಳಗಿನ ತಾಪಮಾನ ವ್ಯತ್ಯಾಸಗಳನ್ನು ಮೇಲ್ವಿಚಾರಣೆ ಮಾಡಲಾಯಿತು, ಇದು ಶಾಖದ ಚಲನವಲನದ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಒದಗಿಸುತ್ತದೆ.
● ಥರ್ಮಲ್ ಸೈಕ್ಲಿಂಗ್ ಪರೀಕ್ಷೆಗಳು: ಪುನರಾವರ್ತಿತ ತಾಪಮಾನ ಹೆಚ್ಚಳ ಮತ್ತು ತಂಪಾಗಿಸುವ ಚಕ್ರಗಳು ನೈಜ-ಪ್ರಪಂಚದ ಪರಿಸ್ಥಿತಿಗಳಲ್ಲಿ ʻಪಿಸಿಎಂʼನ ಬಾಳಿಕೆಯನ್ನು ನಿರ್ಣಯಿಸುತ್ತವೆ.
● ಉಷ್ಣ ಚಲನೆ ಪರೀಕ್ಷೆಗಳು: ಉದ್ದೇಶಪೂರ್ವಕವಾಗಿ ಅತಿಯಾದ ತಾಪಮಾನದ ಸನ್ನಿವೇಶಗಳನ್ನು ಸೃಷ್ಟಿಸಿ, ಉಷ್ಣಾಂಶವು ಪಸರಿಸುವ ಅಪಾಯಗಳನ್ನು ತಗ್ಗಿಸುವ ನಿಟ್ಟಿನಲ್ಲಿ ʻಪಿಸಿಎಂʼನ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗುತ್ತದೆ.
● ಕಾರ್ಯಕ್ಷಮತೆ ಪರೀಕ್ಷೆ: ಬ್ಯಾಟರಿ ದಕ್ಷತೆ, ಸಾಮರ್ಥ್ಯ ಮತ್ತು ಜೀವಿತಾವಧಿಯ ಮೇಲೆ ʻನ್ಯಾನೊ-ಕಣ ಆಧಾರಿತ ಪಿಸಿಎಂʼನ ಪರಿಣಾಮವನ್ನು ಕಟ್ಟುನಿಟ್ಟಾಗಿ ನಿರ್ಣಯಿಸಲಾಗುತ್ತದೆ.
● ಅನುಸರಣೆ ಪರೀಕ್ಷೆ: ಉದ್ಯಮದ ಮಾನದಂಡಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ಈ ತಂತ್ರಜ್ಞಾನ ವನ್ನು ಕಠಿಣ ಅನುಸರಣೆ ತಪಾಸಣೆಗೆ ಒಳಪಡಿಸಲಾಗುತ್ತದೆ.
ಇವಿ ತಂತ್ರಜ್ಞಾನಕ್ಕೆ ಉಜ್ವಲ ಭವಿಷ್ಯ
ʻನ್ಯಾನೊ-ಕಣ ಆಧಾರಿತ ಪಿಸಿಎಂʼ ತಂತ್ರಜ್ಞಾನವು ಬ್ಯಾಟರಿ ಉಷ್ಣ ನಿರ್ವಹಣೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ, ನಿರ್ಣಾಯಕ ಸವಾಲುಗಳನ್ನು ಎದುರಿಸಲು ಮತ್ತು ಹೆಚ್ಚು ಸುಸ್ಥಿರ ಹಾಗೂ ಪರಿಣಾಮಕಾರಿ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ಬ್ಯಾಟರಿ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವ ಮೂಲಕ, ಸುರಕ್ಷತೆಯನ್ನು ಹೆಚ್ಚಿಸುವ ಮೂಲಕ ಮತ್ತು ಬ್ಯಾಟರಿ ಬಾಳಿಕೆಯನ್ನು ವಿಸ್ತರಿಸುವ ಮೂಲಕ, ಈ ನವೀನ ತಂತ್ರಜ್ಞಾನವು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೇಗಗೊಳಿಸಲು ಮತ್ತು ಹಸಿರು ಭೂಗ್ರಹಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಜ್ಜಾಗಿದೆ