Sunday, 11th May 2025

Viral News: ಜಪಾನ್‍ನಲ್ಲಿ ದಾಖಲೆ ಬೆಲೆಗೆ ಹರಾಜಾದ ಟ್ಯೂನಾ ಮೀನು; ದರ ಕೇಳಿದ್ರೆ ಶಾಕ್‌ ಆಗ್ತೀರಿ

Viral News

ಟೋಕಿಯೊ: ಸಾಮಾನ್ಯವಾಗಿ ನೀವು ಮಾರುಕಟ್ಟೆಯಲ್ಲಿ ಖರೀದಿಸುವ ಮೀನಿಗೆ 100-200 ರೂ.,  ಹೆಚ್ಚೆಂದರೆ 1,000 ರೂ. ಬೆಲೆ ಇರಬಹುದು. ಆದರೆ, ಜಪಾನ್‍ನಲ್ಲಿ ಮಾತ್ರ 276 ಕೆಜಿ ತೂಕದ ಬ್ಲೂಫಿನ್ ಟ್ಯೂನಾ ಮೀನು ಭಾರೀ ಬೆಲೆಗೆ ಮಾರಾಟವಾಗಿದೆ. ಟೋಕಿಯೊ ಮೀನು ಮಾರುಕಟ್ಟೆಯಲ್ಲಿ ಬೃಹತ್ ಗಾತ್ರದ ಮೀನನ್ನು ಹರಾಜು ಹಾಕುವ ಮೂಲಕ ದಾಖಲೆ ಸೃಷ್ಟಿಸಿದೆ. ಈ ಟ್ಯೂನ ಮೀನಿಗೆ  ಒನೊಡೆರಾ ಗ್ರೂಪ್ 11ಕೋಟಿಗೂ ಹೆಚ್ಚು ಹಣವನ್ನು ನೀಡಿ ಖರೀದಿಸಿದ್ದಾರಂತೆ. ಈ ಸುದ್ದಿ ಎಲ್ಲೆಡೆ ವೈರಲ್‌(Viral News) ಆಗಿದೆ.

ನಗರದ ಟೊಯೊಸು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ಅಲ್ಲಿ ಜನಪ್ರಿಯ ರೆಸ್ಟೋರೆಂಟ್‍ ಒಂದರಲ್ಲಿ ಈ ಟ್ಯೂನಾ ಮೀನನ್ನು ಬಿಡ್ ಮಾಡಲಾಗಿತ್ತು. ಮಿಚೆಲಿನ್ ಅಭಿನಯದ ಸುಶಿ ರೆಸ್ಟೋರೆಂಟ್ ಒನೊಡೆರಾ ಗ್ರೂಪ್ ಈ ಟ್ಯೂನ ಮೀನಿಗೆ 207 ಮಿಲಿಯನ್ ಯೆನ್ (1.3 ಮಿಲಿಯನ್ ಡಾಲರ್ ಅಥವಾ 11 ಕೋಟಿ ರೂ.) ಪಾವತಿಸಿದೆ. ಈ ಗ್ರೂಪ್ ಕಳೆದ ವರ್ಷ ಟ್ಯೂನ ಮೀನಿಗಾಗಿ 114 ಮಿಲಿಯನ್ ಯೆನ್ ಅನ್ನು ಖರ್ಚು ಮಾಡಿತು ಎನ್ನಲಾಗಿದೆ.

1999 ರಲ್ಲಿ ಟೋಕಿಯೊದಲ್ಲಿ ಇದೇ ರೀತಿಯ ಬಿಡ್ ನಡೆದು ಆಗ ಅತಿ ಹೆಚ್ಚು ಬೆಲೆಗೆ ಮೀನೊಂದು ಮಾರಾಟವಾಗಿತ್ತು. ಅದರ  ನಂತರ ಇದು ಎರಡನೇ ಅತಿ ಹೆಚ್ಚು ಬೆಲೆಯ ಮೀನು ಎಂದು ವರದಿಯಾಗಿದೆ.

ಒನೊಡೆರಾ ಅಧಿಕಾರಿ ಶಿಂಜಿ ನಾಗಾವೊ ಅವರು ದೊಡ್ಡ ಟ್ಯೂನ ಮೀನನ್ನು ಖರೀದಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, “ಇದನ್ನು ತಿಂದ ಜನರು ಇದನ್ನು ಈ ವರ್ಷದ ಅದ್ಭುತ ಎಂದುಕೊಳ್ಳಬೇಕು ಎಂಬುದು ನಮ್ಮ ಬಯಕೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:ಬೋರ್ಡಿಂಗ್ ಸಿಬ್ಬಂದಿ ಕ್ರೌರ್ಯಕ್ಕೆ ದೃಷ್ಟಿ ಕಳೆದುಕೊಂಡ ಶ್ವಾನ; FIR ದಾಖಲು- ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

2019 ರಲ್ಲಿ ಕೂಡ ಇಂಥದ್ದೇ ಒಂದು ಬ್ಲೂಫಿನ್ ಟ್ಯೂನಾ ಹರಾಜು ನಡೆದಿದ್ದು, ಇದರಲ್ಲಿ  333.6 ಮಿಲಿಯನ್ ಯೆನ್ (18 ಕೋಟಿ ರೂ.) ಗೆ ಮೀನು ಮಾರಾಟವಾಗಿತ್ತಂತೆ. ಇದು ಮೀನು ಮಾರುಕಟ್ಟೆಯಲ್ಲಿ ಇತ್ತೀಚೆಗೆ ಪ್ರದರ್ಶಿಸಲಾದ ಇತರ ಟ್ಯೂನ ಮೀನುಗಳಿಗಿಂತ ಹೆಚ್ಚು ತೂಕವನ್ನು ಹೊಂದಿತ್ತು. ಇದು  278 ಕೆಜಿ ತೂಕ ಇತ್ತು. ಈ ಸಂದರ್ಭದಲ್ಲಿ, ಜಪಾನ್‍ನ ಹೆಚ್ಚು ಫೇಮಸ್ ಆದ ಸುಶಿ ಜಾನ್ಮೈ ರೆಸ್ಟೋರೆಂಟ್‍ನ ಕಿಯೋಶಿ ಕಿಮುರಾ (‘ಟ್ಯೂನಾ ಕಿಂಗ್’ ಎಂದೂ ಕರೆಯಲ್ಪಡುವ ವ್ಯಕ್ತಿ) ಎಂಬ ಜನಪ್ರಿಯ ವ್ಯಕ್ತಿ ಟ್ಯೂನ ಮೀನನ್ನು ಖರೀದಿಸಿದ್ದಾರೆ.

Leave a Reply

Your email address will not be published. Required fields are marked *