Saturday, 10th May 2025

BBK 11: ಕೊಟ್ಟ ಮಾತಿನಂತೆ ಧನರಾಜ್ ಮನೆಗೆ ತೆರಳಿ ತೊಟ್ಟಿಲು ಗಿಫ್ಟ್ ಕೊಟ್ಟ ಗೋಲ್ಡ್ ಸುರೇಶ್

Dhanraj Family and Gold Suresh

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಯಶಸ್ವಿಯಾಗಿ 100ನೇ ದಿನದತ್ತ ಮುನ್ನುಗ್ಗುತ್ತಿದೆ. ಫಿನಾಲೆ ವೀಕ್ ಹತ್ತಿರವಾಗುತ್ತಿದ್ದು ಸದ್ಯ ಮನೆಯಲ್ಲಿರುವ ಒಂಬತ್ತು ಸ್ಪರ್ಧಿಗಳಲ್ಲಿ ಯಾರೆಲ್ಲ ಟಾಪ್ 5ಗೆ ಬರಬಹುದು ಎಂಬ ಲೆಕ್ಕಚಾರ ನಡೆಯುತ್ತಿದೆ. ಈ ಬಾರಿಯ ಸೀಸನ್​ನಲ್ಲಿ ಎಲಿಮಿನೇಟ್ ಆದವರ ಜೊತೆಗೆ ಬೇರೆಬೇರೆ ಕಾರಣಗಳಿಂದ ಬಿಗ್ ಬಾಸ್ ಅನ್ನು ಅರ್ಧದಲ್ಲಿ ತೊರೆದವರು ಕೂಡ ಇದ್ದಾರೆ. ಇದರಲ್ಲಿ ಗೋಲ್ಡ್ ಸುರೇಸ್ ಕೂಡ ಒಬ್ಬರ.

ಚೆನ್ನಾಗಿ ಆಡುತ್ತಿದ್ದ ಗೋಲ್ಡ್ ಸುರೇಶ್ ವೈಯಕ್ತಿಕ ಕಾರಣಗಳಿಂದ ದೊಡ್ಮನೆಯನ್ನು ಅರ್ಧಕ್ಕೆ ತೊರೆಯಬೇಕಾಯಿತು. ಮನೆಯೊಳಗೆ ಇದ್ದಾಗ ಎಲ್ಲ ಸ್ಪರ್ಧಿಗಳ ಜೊತೆ ನಗುತ್ತಾ ಖುಷಿ ಖುಷಿಯಲ್ಲಿದ್ದರು. ಅದರಲ್ಲೂ ಧನರಾಜ್ ಆಚಾರ್ ಜೊತೆ ಇವರ ಆಪ್ತತೆ ಕೊಂಚ ಅಧಿಕವೇ ಇತ್ತು. ಇಬ್ಬರೂ ಜೊತೆಯಾಗಿ ಮನೆಯೊಳಗೆ ಅನೇಕ ಸಮಯವನ್ನು ಕಳೆದಿದ್ದಾರೆ.

ಬಿಗ್ ಬಾಸ್​ನಲ್ಲಿ ಇರುವಾಗ ಸುರೇಶ್ ಅವರು ಧನರಾಜ್ ಮಗಳಿಗೆ ತೊಟ್ಟಿಲು ಉಡುಗೊರೆ ಕೊಡುವುದಾಗಿ ಹೇಳಿದ್ದರು. ಅದರಂತೆ ಇದೀಗ ಬಿಗ್ ​ಬಾಸ್ ಮನೆಯಿಂದ ಹೊರಗೆ ಹೋಗಿರುವ ಸುರೇಶ್ ಕೊಟ್ಟ ಮಾತನ್ನು ನೆರವೇರಿಸಿದ್ದಾರೆ. ಧನರಾಜ್-ಪ್ರಜ್ಞಾ ದಂಪತಿಗೆ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗು ಜನಿಸಿತ್ತು. ಇದಾದ ಬಳಿಕ ಧನರಾಜ್‌ ಬಿಗ್‌ಬಾಸ್‌ ಮನೆ ಸೇರಿಕೊಂಡಿದ್ದರು. ಆಗಾಗ ತನ್ನ ಪಾಪುವನ್ನು ಧನರಾಜ್‌ ನೆನೆಯುತ್ತಲೇ ಇದ್ದರು. ಈ ವೇಳೆ ಸ್ನೇಹಿತ ಗೋಲ್ಡ್‌ ಸುರೇಶ್‌ ಅವರು ಧನರಾಜ್‌ ಮಗಳಿಗೆ ಗಿಫ್ಟ್‌ ನೀಡುವುದಾಗಿ ಭರವಸೆ ಕೊಟ್ಟಿದ್ದರು.

ಅದರಂತೆ ಗೋಲ್ಡ್‌ ಸುರೇಶ್‌ ಅವರು ಧನರಾಜ್‌ ಅವರ ನಿವಾಸಕ್ಕೆ ಭೇಟಿ ನೀಡಿ, ಪಾಪುವನ್ನು ಮುದ್ದಾಡಿದ್ದಾರೆ. ಕೊಟ್ಟ ಮಾತಿನಂತೆ ಧನರಾಜ್‌ ಮಗಳಿಗೆ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ ಧನರಾಜ. ಮನೆಗೆ ಹೋಗ್ತೀನಿ ಅಂತಾ ಹೇಳಿದ್ದೆ. ಬಂದಿದ್ದೇನೆ ಎಂದು ಗೋಲ್ಡ್​ ಸುರೇಶ್​ ಹೇಳಿದ್ದಾರೆ.

ಧನರಾಜ್​ ಮನೆಯವರೊಂದಿಗೆ ಮಾತನಾಡುತ್ತಾ, ಅವನು ತೊಟ್ಟಿಲನ್ನು ಸೋದರಮಾವ ಕೊಡಬೇಕೆಂದು ತಿಳಿಸಿದ್ದ. ನಿನಗೆ ಕೊಡಕ್ಕೆ ಬರುತ್ತೋ ಇಲ್ವೋ ಎಂಬುದನ್ನು ನೋಡು ಎಂದೂ ಕೂಡಾ ಹೇಳಿದ್ದ. ಅದಕ್ಕೆ ನಾನೇ ಸೋದರ ಮಾವ ಆಗುತ್ತೇನೆಂದು ಹೇಳ್ಬಿಟ್ಟು ಬಂದಿದ್ದೆ ಎಂದು ತಿಳಿಸಿದ್ದಾರೆ. ಇದು ಮಾವನ ಕಡೆಯಿಂದ ಧನರಾಜ್‌ ಮಗಳಿಗೆ ಪುಟ್ಟ ಉಡುಗೊರೆ ಎಂದು ಸುರೇಶ್ ಅವರು ತೊಟ್ಟಿಲು ನೀಡಿದ್ದಾರೆ.

BBK 11: ಚೈತ್ರಾಗೆ ಜೋಕರ್ ಪಟ್ಟ ಕಟ್ಟಿದ ಮನೆಮಂದಿ: ರಜತ್ ಹೇಳಿದ್ದೇನು?

Leave a Reply

Your email address will not be published. Required fields are marked *