ಪಟನಾ: ನಾಯಿಯೊಂದನ್ನು ಮರಕ್ಕೆ ಕಟ್ಟಿ ಹಿಂಸೆ ನೀಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಈ ವಿಡಿಯೊ ನೋಡಿದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಅಕ್ರೋಶ ಹೊರಹಾಕಿದ್ದಾರೆ. ಈ ರೀತಿ ಪ್ರಾಣಿ ಹಿಂಸೆ ಮಾಡುವ ಈತನನ್ನು ಇದೇ ರೀತಿ ಕಟ್ಟಿಹಾಕಿ ಸರಿಯಾಗಿ ಬಾರಿಸ ಬೇಕೆಂದು ಬಳಕೆದಾರರು ಆಗ್ರಹಿಸಿದ್ದಾರೆ (Viral Video).
ನಾಯಿಯನ್ನು ಮರದ ಮೇಲೆ ತಲೆಕೆಳಗಾಗಿ ಕಟ್ಟಿ ಅದಕ್ಕೆ ಚಿತ್ರಹಿಂಸೆ ನೀಡಿರುವ ಈತನಿಗೆ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಬಿಹಾರ ಮೂಲದ ಮೊಹಮ್ಮದ್ ಆಲಂ ಎನ್ನುವ ಕಂಟೆಂಟ್ ಕ್ರಿಯೇಟರ್ ಆಗಿರುವ ಈತ ಸೋಶಿಯಲ್ ಮೀಡಿಯಾದ ರೀಲ್ಸ್ ಕ್ರೇಜ್‌ಗಾಗಿ ಹೆಚ್ಚಿನ ವೀವ್ಸ್ ಪಡೆಯುವುದಕ್ಕಾಗಿ ನಾಯಿಗೆ ಹೃದಯ ಹೀನಾಯವಾಗಿ ಒದೆಯುತ್ತಿರುವ ದೃಶ್ಯ ಕಂಡುಬಂದಿದೆ.
ವಿಡಿಯೊದಲ್ಲಿ ಏನಿದೆ?
ನಾಯಿಯನ್ನು ಮರಕ್ಕೆ ಕಟ್ಟಿದ ನಂತರ ವ್ಯಕ್ತಿ ಪದೇ ಪದೆ ನಾಯಿಗೆ ಒದೆಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಇನ್ನೊಂದು ಕ್ಲಿಪ್‌ನಲ್ಲಿ ಅವನು ಮರದ ಕೊಂಬೆಯ ಮೇಲೆ ನಿಂತು ನಾಯಿಯ ಬಾಲವನ್ನು ಹಿಮ್ಮುಖವಾಗಿ ಹಿಡಿದು ಬೀಸುತ್ತಿರುವುದನ್ನು ಕಾಣಬಹುದು. ಆಲಂ ಎನ್ನುವ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇಂತಹ ಅನೇಕ ರೀಲ್‌ಗಳು ಕಂಡು ಬಂದಿದ್ದು ಪ್ರಾಣಿಗಳಿಗೆ ಈ ರೀತಿ ಹಿಂಸೆ ನೀಡುವ ದೃಶ್ಯ ಕಂಡು ನೋಡುಗರು ಆಕ್ರೋಶ ಹೊರಹಾಕಿದ್ದಾರೆ. ಬಾಯಿ ಬಾರದ ಜೀವಿಯನ್ನು ವೈರಲ್ ಆಗುವ ಹುಚ್ಚಿಗೋಸ್ಕರ ಈ ರೀತಿ ಬಳಸಿಕೊಳ್ಳುವುದು ಸರಿಯಲ್ಲ ಈತನ ವಿರುದ್ಧ ಕಠಿಣ ಕ್ರಮಕ್ಕೆ ಪ್ರಾಣಿಪ್ರಿಯರು ಒತ್ತಾಯಿಸಿದ್ದಾರೆ.
ಇದೀಗ ಈ ವಿಡಿಯೊವನ್ನು ಪ್ರಾಣಿಪ್ರಿಯರು ಸೇರಿದಂತೆ ಅನೇಕರು ಈ ವಿಡಿಯೊವನ್ನು ಹೆಚ್ಚಿನ ಪ್ರಮಾಣದಲ್ಲಿ ಶೇರ್ ಮಾಡಿದ್ದಾರೆ. ನಾಯಿಯನ್ನು ಮರಕ್ಕೆ ಕಟ್ಟಿಹಾಕಿ ಕೆಟ್ಟದಾಗಿ ನಡೆಸಿಕೊಂಡ ವ್ಯಕ್ತಿಯನ್ನು ಶಿಕ್ಷಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ ತರುಣ್ ಅಗರ್ವಾಲ್ ಎನ್ನುವ ವ್ಯಕ್ತಿ ಈ ರೀಲ್‌ಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡು ಈ ಬಗ್ಗೆ ಪರಿಶೀಲಿಸಲು ಸ್ಥಳೀಯ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಮುಂಬೈಯ ಪೊಲೀಸ್ ಮತ್ತು ಪ್ರಾಣಿ ರಕ್ಷಕ ಸುಧೀರ್ ಕುಡಾಲ್ಕರ್ ಕೂಡ ವಿಡಿಯೊವನ್ನು ಮರು ಪೋಸ್ಟ್ ಮಾಡಿ ಈ ಹಿಂಸೆಯನ್ನು ಖಂಡಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಪೊಲೀಸ್ ಅಧಿಕಾರಿ ಈ ರೀತಿ ಬರೆದಿದ್ದಾರೆ “ಕೆಲವು ವ್ಯಕ್ತಿಗಳು ಸೋಶಿಯಲ್ ಮೀಡಿಯಾದ ವೀವ್ಸ್ ಗೋಸ್ಕರ ಸಾಕು ಪ್ರಾಣಿಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ನೋಡುವುದು ನಿಜವಾಗಿಯೂ ಹಿಂಸೆ ಎನಿಸುತ್ತಿದೆ. ಇದನ್ನು ನೋಡುವಾಗ ಸಂಕಟವಾಗುತ್ತಿದೆʼʼ ಎಂದು ಬರೆದುಕೊಂಡಿದ್ದಾರೆ.
Take cognizance immediately @PoliceBhagalpur @bihar_police@dmbhagalpur
— Tarun Agarwal (@AntiCrueltyCell) January 4, 2025
This boy has crossed all limits of brutality with his dog.From causing pain & horrifying acts like throwing the dog into fire & hanging it upside down from a tree etc this is nothing short of barbaric/crime pic.twitter.com/gIf1e4KKJK
ಬಳಕೆದಾರರೊಬ್ಬರು ಅವನನ್ನು ಕೂಡ ಇದೇ ರೀತಿ ಶಿಕ್ಷಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಈತ ಅನಾಗರಿಕ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಕರುಣೆಯಿಲ್ಲದ ನಾಚಿಕೆಗೇಡಿನ ವ್ಯಕ್ತಿ ಎಂದು ಗರಂ ಆಗಿದ್ದಾರೆ.
ಇದನ್ನು ಓದಿ:Janhvi Kapoor: ಬಾಯ್ ಫ್ರೆಂಡ್ ಜೊತೆ ನಟಿ ಜಾಹ್ನವಿ ಕಪೂರ್ ತಿರುಮಲ ದೇವಸ್ಥಾನಕ್ಕೆ ಭೇಟಿ- ವಿಡಿಯೊ ವೈರಲ್