ಚಿಕ್ಕಬಳ್ಳಾಪುರ: ಪ್ರಪಂಚದಲ್ಲಿ ಜ್ಞಾನಕ್ಕಿಂತ ದೊಡ್ಡ ವಸ್ತು ಬೇರಾವುದೂ ಇಲ್ಲ.ಇಂತಹ ಸುಜ್ಞಾನದ ನೆರಳಲ್ಲಿ ನಮ್ಮ ಮಕ್ಕಳು ಬೆಳೆದು ಉತ್ತಮ ಭವಿಷ್ಯ ಕಾಣಬೇಕಾದರೆ ಅವರನ್ನು ಬಾಲ್ಯದಿಂದಲೇ ಮೊಬೈಲ್ ಮತ್ತು ಟಿ.ವಿ.ಮೋಹದಿಂದ ದೂರವಿಡಬೇಕಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಕರೆ ನೀಡಿದರು.
ಚಿಕ್ಕಬಳ್ಳಾಪುರ ತಾಲೂಕು ಹೊಸಹುಡ್ಯ ಗ್ರಾಮದ ವಿಷ್ಣುಪ್ರಿಯ ಸ್ಕೂಲ್ ಆಫ್ ಎಕ್ಸಲೆನ್ಸ್ನಲ್ಲಿ ಆಯೋಜಿಸಿದ್ದ ಉದ್ಭವ್೨ಕೆ೨೫ ಹೆಸರಿನ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ದೇಶದ ಒಟ್ಟಾರೆ ಜನಸಂಖ್ಯೆ ೧೪೦ ಕೋಟಿಯಿದ್ದರೆ ಇದರ ಎರಡು ಮೂರು ಪಟ್ಟು ಅಂದರೆ ಸರಿಸುಮಾರು ೪೦೦ ಕೋಟಿ ಮೊಬೈಲ್ಗಳು ಇಟ್ಟುಕೊಂಡಿದ್ದೇವೆ ಎಂದು ಕೇಳಿದರೆ ಭಯವಾಗುತ್ತದೆ.ನಾವು ಯಾರ ಕೈಗೊಂಬೆಯಾಗಿದ್ದೇವೆ ಎನ್ನುವುದು ಇದರಿಂದ ಅರಿವಾಗುತ್ತಿದೆ.ಆದ್ದರಿಂದ ಇಲ್ಲಿರುವ ಪೋಷಕರು ಹಣಕ್ಕಿಂತ ಗುಣಕ್ಕೆ, ಪರಲೋಕಕ್ಕಿಂತ ಪ್ರಕೃತಿಗೆ ಹೆಚ್ಚಿನ ಒತ್ತು ನೀಡಬೇಕು ಮಕ್ಕಳಿಗೆ ಅದನ್ನೇ ಕಲಿಸಬೇಕು ಎಂದರು.
ಬಾಲ್ಯದಿAದಲೇ ಮಕ್ಕಳಿಗೆ ನೆಲಮೂಲವಾದ ವಿವೇಕ ಮತ್ತು ಅರಿವನ್ನು ಕಲಿಸಬೇಕು.ವಿಷ್ಣು ಪ್ರಿಯ ಶಾಲೆ ಇಂತಹ ವಿವೇಕದ ಹಾದಿಯಲ್ಲಿ ಸಾಗುತ್ತಿರುವುದು ಸಂತೋಷ ತಂದಿದೆ.ಜಗತ್ತು ಮಾಯಾಲೋಕದಲ್ಲಿ ತೇಲುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಧಾರಾವಾಹಿ, ಸಿನಿಮಾ ಲೋಕದಿಂದ ಕೊಂಚ ಕಾಲವಾದರೂ ಬಿಗುಗಡೆ ಹೊಂದಿ ನಮ್ಮ ಸುತ್ತಮುಯತ್ತಲ ಪರಿಸರವಾದ ಕೆರೆಕುಂಟೆ ಗೋಕಟ್ಟೆ,ಕಪಿಲೆಬಾನಿ,ಹಸು ಕುರಿ ಕೋಳಿ ಅಪ್ಪ ಅಮ್ಮ ಅಜ್ಜ ಅಜ್ಜಿಯ ಮಹತ್ವವನ್ನು ಯುವಪೀಳಿಗೆಗೆ ಕಲಿಸಲು ಚಿಂತಿಸುತ್ತಿದೆ ಎಂದು ತಿಳಿಸಿದರು.
ನಮ್ಮ ಪರಂಪರೆ ನಮ್ಮ ಊರು ನಮ್ಮ ಕೇರಿಯನ್ನು ನಮ್ಮ ತೇರನ್ನು ನಾವು ಮರೆತುಬಿಟ್ಟರೆ,ಯಾವ ಸಂಸ್ಕೃತಿಯನ್ನು ಅವರು ಕಲಿಯಲು ಸಾಧ್ಯ.ವಸಗೆ ಪದ, ನಾಟಿ ಪದ,ಸೋಬಾನೆ ಪದಗಳು ಇಂದು ಮಾಯವಾಗಿ ಆಜಾಗದಲ್ಲಿ ಅಮ್ಮ ಲೂಸಾ ಅಪ್ಪ ಲೂಸಾ, ಏನೋ ಒಂಥರಾ..ಹೊಡಿ ಮಗ, ಬಡಿಮಗ ಗೀತೆಗಳು ಬಂದುಕುತಿವೆ. ಇಂದು ಮಕ್ಕಳ ಮನಸ್ಸು ಇಂದು ಕಲುಶಿತಗೊಂಡಿವೆ.ಗುರುಗಳು, ಶಾಲಾ ಕಾಲೇಜುಗಳು ಮಕ್ಕಳನ್ನು ಇಂತಹ ಅಪಾಯದಿಂದ ದೂರಮಾಡಬೇಕಿದೆ.ಆಹಾರವನ್ನು ಹೇಗೆ ಆಯ್ಕೆ ಮಾಡಿ ತಿನ್ನುತ್ತೇವೋ, ಹಾಗೆ ಸದ್ವಿಚಾರ ಸನ್ನಡತೆಯ ಬದುಕನ್ನು ಆರಿಸಿ ಮಕ್ಕಳಿಗೆ ಕೊಡಬೇಕಿದೆ. ಇಲ್ಲದಿದ್ದರೆ ಅರೋಗ್ಯವಂತ ಸಮಾಜ ನಿರ್ಮಾಣ ಅಸಾಧ್ಯ ಎಂದು ಹೇಳಿದರು.
ಇದೇ ವೇಳೆ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರು ಮತ್ತು ಪ್ರೇಕ್ಷಕರ ಮನಸೂರೆಗೊಂಡವು.
ಈ ವೇಳೆ ವಿಷ್ಣುಪ್ರಿಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವೈ.ಎನ್.ರಾಮಚಂದ್ರರೆಡ್ಡಿ,ಕಾರ್ತಿಕ್ರೆಡ್ಡಿ, ಶ್ಯಾಮಲಾರೆಡ್ಡಿ ಮತ್ತಿತರರು ಇದ್ದರು.