ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಪ್ರಸಾರ ಕಾಣಲಿದೆ. ಈ ವಾರದಲ್ಲಿ ನಡೆದ ಘಟನೆಗಳ ಕುರಿತು ಸುದೀಪ್ ಮನೆಮಂದಿ ಜೊತೆ ಮಾತನಾಡಲಿದ್ದಾರೆ. ಈ ವಾರ ಫ್ಯಾಮಿಲಿ ವೀಕ್ ಆಗಿತ್ತು. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ನಡೆಯಲಿದ್ದು, ಇದಕ್ಕೂ ಮುನ್ನ ಇರುವ 9 ಸ್ಪರ್ಧಿಗಳಿಗೆ ಜೋಶ್ ಬರಲು ಕುಟುಂಬದವರನ್ನು ಮನೆಯೊಳಗೆ ಕರೆಸಲಾಗಿತ್ತು. ಸ್ಪರ್ಧಿಗಳ ಅಮ್ಮಂದಿರು, ಅಪ್ಪಂದಿರು ಮಡದಿ, ಮಕ್ಕಳು ಬಿಗ್ ಬಾಸ್ಗೆ ಬಂದಿದ್ದರು. ಮನೆಯಲ್ಲಿರುವ 9 ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು.
ಮನೆಯವರು ಬಂದು ಸಲಹೆ ನೀಡಿದ ಕುರಿತು ಕಿಚ್ಚ ಸುದೀಪ್ ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಡಿಸ್ಕಸ್ ಮಾಡಲಿದ್ದಾರೆ. ಇದಕ್ಕೂ ಮುನ್ನ ಸುದೀಪ್ ಸೋಮವಾರ ನಡೆದ ಗ್ರಾಸರಿ ಟಾಸ್ಕ್ ಬಗ್ಗೆ ಮನೆಮಂದಿ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ದೊಡ್ಡ ಅವಘಡ ಸಂಬವಿಸಿದ್ದು, ಹನುಮಂತ ಹಾಗೂ ತ್ರಿವಿಕ್ರಮ್ ಮಾತುಕತೆ ಮಧ್ಯೆ ಕೋಪಗೊಂಡು ಕಿಚ್ಚ ಸುದೀಪ್ ಬಿಗ್ ಬಾಸ್ ವೇದಿಕೆ ಬಿಟ್ಟು ತೆರಳಿದ್ದಾರೆ.
ಗ್ರಾಸರಿ ಟಾಸ್ಕ್ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ ಹಾಗೂ ರಜತ್ ಆಚೆ ಉಳಿದುಕೊಂಡಿರುತ್ತಾರೆ. ಅಲ್ಲದೇ ಚೈತ್ರಾ, ಧನರಾಜ್, ಮಂಜು, ಮೋಕ್ಷಿತಾ, ಗೌತಮಿ ಹಾಗೂ ಹನುಮಂತ ಟಾಸ್ಕ್ ಆಡಲು ಓಕೆ ಅಂತ ಹೇಳಿತ್ತಾರೆ. ಆಗ ಧನರಾಜ್, ಹನುಮಂತನ ಮುಂದೆ ಬಂದ ತ್ರಿವಿಕ್ರಮ್ ಇಷ್ಟು ದಿನ ನಾವು ನಿಮಗೆ ಅನ್ನ ಹಾಕಿದ್ದೀವಿ, ಈಗ ನೀವು ನಮಗೆ ಹಾಕಿ ಎನ್ನುವ ಹೇಳಿಕೆ ನೀಡುತ್ತಾರೆ. ಇದೇ ವಿಚಾರವಾಗಿ ಕಿಚ್ಚನ ಪಂಚಾಯ್ತಿಯಲ್ಲಿ ಪ್ರಸ್ತಾಪ ಆಗಿದೆ.
ತ್ರಿವಿಕ್ರಮ್ ಹೇಳಿದ ಆ ಮಾತನ್ನು ಹನುಮಂತ ಅವರು ಕಿಚ್ಚ ಸುದೀಪ್ ಮುಂದೆ ಹೇಳಿದ್ದಾರೆ. ಆದರೆ, ಆಗ ಅಡ್ಡ ಬಾಯಿ ಹಾಕಿದ ತ್ರಿವಿಕ್ರಮ್ ನಾನು ಎಲ್ಲಿ ಹಾಗೇ ಹೇಳಿದ್ದೀನಿ ಅಂತ ವಾದ ಮಾಡಿದ್ದಾರೆ. ಹನುಮಂತನ ಬಳಿ ಮಾತನಾಡುತ್ತಿರುವಾಗ ತ್ರಿವಿಕ್ರಮ್ ಅಡ್ಡ ಬಾಯಿ ಹಾಕಿದ್ದಕ್ಕೆ ಹಾಗೂ ಸುಳ್ಳು ಹೇಳಿದ್ದಕ್ಕೆ ಕೋಪಗೊಂಡ ಕಿಚ್ಚ ಸುದೀಪ್ ವೇದಿಕೆಯಿಂದಲೇ ಹೊರಟು ಹೋಗಿದ್ದಾರೆ.
BBK 11: ಕಿಚ್ಚನ ವಾರದ ಪಂಚಾಯಿತಿಗೆ ಕ್ಷಣಗಣನೆ: ಮೈ ಮರೆತವರಿಗೆ ಸುದೀಪ್ ಪಾಠ