ಕೇಪ್ಟೌನ್ (ದಕ್ಷಿಣ ಆಫ್ರಿಕಾ): ಪಾಕಿಸ್ತಾನ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ (SA vs PAK) ಪ್ರಥಮ ಇನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಓಪನಿಂಗ್ ಬ್ಯಾಟ್ಸ್ಮನ್ ರಯಾನ್ ರಿಕೆಲ್ಟನ್ ದ್ವಿಶತಕ ಬಾರಿಸಿದ್ದಾರೆ. ತಮ್ಮ ಚೊಚ್ಚಲ ದ್ವಿಶತಕವನ್ನು ಪೂರ್ಣಗೊಳಿಸಲು ಾವರು 266 ಎಸೆತಗಳನ್ನು ತೆಗೆದುಕೊಂಡಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ ದ್ವಿಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಹರಿಣ ಪಡೆಯ ಪರ ವೇಗದ ದ್ವಿಶತಕ ಸಿಡಿಸಿದ ಬ್ಯಾಟ್ಸ್ಮನ್ ಎಂಬ ದಾಖಲೆ ಮಾಜಿ ನಾಯಕ ಗ್ರೇಮ್ ಸ್ಮಿತ್ ಹೆಸರಿನಲ್ಲಿದೆ. ಅವರು 2008ರಲ್ಲಿ ಬಾಂಗ್ಲಾದೇಶ ವಿರುದ್ಧ 238 ಎಸೆತಗಳಲ್ಲಿ ದ್ವಿಶತಕವನ್ನು ಸಿಡಿಸಿದ್ದರು.ಬೆನ್ ಸ್ಟೋಕ್ಸ್ (258 ರನ್) ಹಾಗೂ ಹಾಶಿಮ್ ಆಮ್ಲಾ (2021) ಬಳಿಕ ದಕ್ಷಿಣ ಆಫ್ರಿಕಾ ಟೆಸ್ಟ್ನಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಕೀರ್ತಿಗೂ ರಿಕೆಲ್ಟನ್ ಭಾಜನರಾಗಿದ್ದಾರೆ.
ರಯಾನ್ ರಿಕೆಲ್ಟನ್ ಪಾಲಿಗೆ ಇದು ಅತ್ಯಂತ ಮಹತ್ವದ ದ್ವಿಶತಕವಾಗಿದೆ. ಏಕೆಂದರೆ, ಚೊಚ್ಚಲ ದ್ವಿಶತಕಕ್ಕೆ ಅವರ ಕುಟುಂಬ ಸದಸ್ಯರು ಕೂಡ ಸಾಕ್ಷಿಯಾಗಿದ್ದರು ಎಂಬುದು ಇಲ್ಲಿನ ವಿಶೇಷ. ದ್ವಿಶತಕ ಸಿಡಿಸಿದ ಬಳಿಕ ರಯಾನ್ ರಿಕೆಲ್ಟನ್ ಅವರು ತಮ್ಮ ಹೆಲ್ಮೆಟ್ ತೆಗೆದು ಬ್ಯಾಟ್ ಮೇಲೆತ್ತಿ ಸಂಭ್ರಮಿಸಿದರು. ಈ ವೇಳೆ ಗ್ಯಾಲರಿಯಲ್ಲಿ ಕುಳಿತಿದ್ದ ಅವರ ತಾಯಿ ಸೇರಿದಂತೆ ಕುಟುಂಬದ ಸದಸ್ಯರು ಎದ್ದು ನಿಂತು ಸಂಭ್ರಮಿಸಿದರು. 2025ರಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿನ ಮೊದಲ ದ್ವಿಶತಕ ಶತಕ ಇದಾಗಿದೆ.
Ryan Rickelton has been remarkable 🤩.
— Proteas Men (@ProteasMenCSA) January 4, 2025
He gets to 250, extending his record of his highest first-class score. Keep piling them on, Ryan! 👏🏼#WozaNawe #BePartOfIt #SAvPAK pic.twitter.com/6Y5j5WyIUv
ಟೆಸ್ಟ್ ಕ್ರಿಕೆಟ್ನಲ್ಲಿ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ ರಯಾನ್ ರಿಕೆಲ್ಟನ್ ದ್ವಿಶತಕ ಸಿಡಿಸುವ ಮೂಲಕ ಯಶಸ್ವಿಯಾಗಿದ್ದಾರೆ. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಓಪನಿಂಗ್ ಬ್ಯಾಟ್ಸ್ಮನ್ಗಳಾದ ಬೆಂಡನ್ ಕುರುಪ್ಪು, ಗ್ರೇಮ್ ಸ್ಮಿತ್ ಹಾಗೂ ಡೆವೋನ್ ಕಾನ್ವೇ ಅವರ ಜೊತೆಗೆ ಇದೀಗ ರಯಾನ್ ರಿಕೆಲ್ಟನ್ ಸೇರ್ಪಡೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ನೆಲದಲ್ಲಿ 19ನೇ ದ್ವಿಶತಕ
ದಕ್ಷಿಣ ಆಫ್ರಿಕಾ ನೆಲದಲ್ಲಿ ಇದು 19ನೇ ದ್ವಿಶತಕವಾಗಿದೆ. ಕೇಪ್ ಟೌನ್ನ ನ್ಯೂಲೆಂಡ್ಸ್ನಲ್ಲಿ ಏಳು ದ್ವಿಶತಕಗಳು ಮೂಡಿ ಬಂದಿವೆ. ಆ ಮೂಲಕ ಅತಿ ಹೆಚ್ಚು ದ್ವಿಶತಕಗಳು ಮೂಡಿ ಬಂದಿರುವ ದಕ್ಷಿಣ ಆಫ್ರಿಕಾದ ಕ್ರೀಡಾಂಗಣ ಎಂಬ ಖ್ಯಾತಿಗೆ ನ್ಯೂಲೆಂಡ್ಸ್ ಭಾಜನವಾಗಿದೆ. ಪಾಕಿಸ್ತಾನದ ಎದುರು ದಕ್ಷಿಣ ಆಫ್ರಿಕಾ ಬ್ಯಾಟ್ಸ್ಮನ್ ಗಳಿಸಿದ ನಾಲ್ಕನೇ ದ್ವಿಶತಕ ಇದಾಗಿದೆ. ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ಹಾಗೂ ಹರ್ಷಲ್ ಗಿಬ್ಸ್ ಕೂಡ ದ್ವಿಶತಕವನ್ನು ಬಾರಿಸಿದ್ದಾರೆ.
259 ರನ್ ಕಲೆ ಹಾಕಿದ ರಿಕೆಲ್ಟನ್
ಪಾಕಿಸ್ತಾನ ಎದುರು ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಒಟ್ಟು 343 ಎಸೆತಗಳನ್ನು ಎದುರಿಸಿದ ರಯಾನ್ ರಿಕೆಲ್ಟನ್ ಅವರು ಮೂರು ಸಿಕ್ಸರ್ ಹಾಗೂ 29 ಬೌಂಡರಿಗಳನ್ನು ಬಾರಿಸಿದರು. ಆ ಮೂಲಕ 259 ರನ್ಗಳನ್ನು ಕಲೆ ಹಾಕಿ ತಮ್ಮ ಇನಿಂಗ್ಸ್ ಅನ್ನು ಮುಗಿಸಿದರು. ಇದು ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲಾದ ಅತ್ಯಂತ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಇದಕ್ಕೂ ಮುನ್ನ ಗ್ರೇಮ್ ಸ್ಮಿತ್ 2013ರಲ್ಲಿ 234 ರನ್ಗಳನ್ನು ಸಿಡಿಸಿದ್ದರು.
ಈ ಸುದ್ದಿಯನ್ನು ಓದಿ: IND vs AUS: ಭಾರತಕ್ಕೆ 145 ರನ್ ಮುನ್ನಡೆ, ಸಿಡ್ನಿ ಟೆಸ್ಟ್ನಲ್ಲಿ ಅತ್ಯಂತ ಯಶಸ್ವಿ ರನ್ ಚೇಸ್ ಎಷ್ಟು?