ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ಪೂರ್ತಿ ಮನೆಯೊಳಗಿದ್ದ ಸದಸ್ಯರ ಫ್ಯಾಲಿಮಿಯವರು ಬಂದಿದ್ದರು. ಸ್ಪರ್ಧಿಗಳು ನಕ್ಕು-ಅತ್ತು ಮಸ್ತ್ ಮಜಾ ಮಾಡಿದರು. ಇದರ ಮಧ್ಯೆ ಮನೆಯಿಂದ ಬಂದ ಸದಸ್ಯರ ಸಮ್ಮುಖದಲ್ಲೇ ಆ ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ ಕೂಡ ನೀಡಲಾಗಿತ್ತು. ಮೂವರು ಸ್ಪರ್ಧಿಗಳ ಮಧ್ಯೆ ನಡೆದ ಈ ಟಾಸ್ಕ್ನಲ್ಲಿ ಗೆದ್ದ ಮೊದಲ ಎರಡು ಸ್ಪರ್ಧಿ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ ಎಂಬ ನಿಯಮವಿತ್ತು.
ಅದರಂತೆ ಶುಕ್ರವಾರ ಧನರಾಜ್ ಆಚಾರ್, ಹನುಮಂತ ಹಾಗು ಚೈತ್ರಾ ಕುಂದಾಪುರ ಅವರ ಫ್ಯಾಮಿಲಿ ಎದುರು ಈ ಮೂವರು ಸ್ಪರ್ಧಿಗಳು ವಿಶೇಷ ಟಾಸ್ಕ್ ಒಂದನ್ನು ಆಡಿದರು. ಅದರಂತೆ ಧನು, ಹನುಮಂತ ಹಾಗು ಚೈತ್ರಾ ಅವರಿಗೆ ಕಿಸ್ ಟಾಸ್ಕ್ ನೀಡಲಾಗಿದೆ. ಇಲ್ಲಿ ತುಟಿಗೆ ಲಿಪ್ಸ್ಟಿಕ್ ಹಂಚಿಕೊಂಡು ಎದುರಿಗೆ ಇರುವ ವೈಟ್ ಬೋರ್ಡ್ಗೆ ಮುತ್ತು ಕೊಡಬೇಕಾಗುತ್ತದೆ. ಧನರಾಜ್, ಚೈತ್ರಾ ಕುಂದಾಪುರ, ಸಿಂಗರ್ ಹನುಮಂತ ಮುತ್ತು ಕೊಡುವ ಟಾಸ್ಕ್ ಆಡಿದ್ದಾರೆ.
ಈ ಒಂದು ಟಾಸ್ಕ್ ಅಲ್ಲಿ ಹೆಚ್ಚಿನ ಮುತ್ತು ಕೊಟ್ಟವರೇ ವಿನ್ನರ್ ಅನ್ನೋದು ಒಟ್ಟು ಆಟದ ನಿಯಮ ಆಗಿದೆ. ಈ ಒಂದು ಆಟದಲ್ಲಿ ಯಾರು ವಿನ್ನರ್ ಆಗಿದ್ದಾರೆ ಅನ್ನುವ ಕುತೂಹಲ ಇದೆ. ಎಲ್ಲರೂ ಎಷ್ಟು ಸಾಧ್ಯವೋ ಅಷ್ಟು ಬೇಗ ಮುತ್ತು ಕೊಟ್ಟಿದ್ದಾರೆ. ಹಾಗಾಗಿಯೇ ಎಲ್ಲರ ಮುತ್ತಿನ ಸಂಖ್ಯೆಗಳು ಜಾಸ್ತಿನೇ ಇವೆ. ಹಾಗೇ ಕೋಲು ಹಿಡಿದು ಲಿಪ್ಸ್ಟಿಕ್ ಹಚ್ಚಿದ ಸ್ಪರ್ಧಿಗಳಿಗೂ ಮುತ್ತು ಕೊಡುವ ಚಾನ್ಸ್ ಸಿಗುತ್ತದೆ ಅಂತಲೇ ಸದ್ಯ ಗೆಸ್ ಮಾಡಬಹುದು. ಈ ಟಾಸ್ಕ್ ಮಧ್ಯೆ ಸಾಕಷ್ಟು ಕಾಮಿಡಿ ಕೂಡ ನಡೆದಿದೆ.
ಮುಖ್ಯವಾಗಿ ಧನರಾಜ್ ಆಚಾರ್ ಮಾಡಿದ ಕಾಮಿಡಿ ಎಲ್ಲರ ಹೊಟ್ಟೆಯನ್ನೂ ಹುಣ್ಣಾಗಿಸಿತು. ಈ ರೀತಿ ಟಾಸ್ಕ್ ಆಡುವಾಗ ಧನರಾಜ್ಗೆ ರಜತ್ ಕರೆಕ್ಟ್ ಆಗಿ ಕಿಸ್ಗಳು ಬರುತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾಮಿಡಿಯಾಗಿ ಉತ್ತರಿಸಿದ ಧನು, ಮೂರು ತಿಂಗಳು ಆಯಿತಾಲ್ಲ, ಕರೆಕ್ಟ್ ಆಗಿ ಬರುತ್ತಿಲ್ಲ ಎಂದಿದ್ದಾರೆ. ಇದನ್ನು ಕೇಳಿ ಮನೆಮಂದಿ ಎದ್ದೋ-ಬಿದ್ದೊ ನಕ್ಕಿದ್ದಾರೆ. ಇದಾದ ಮೇಲೆ ಮುತ್ತು ಕೊಡುವುದಿಲ್ವಾ ನನಗೆ, ನೀವು ಕೊಡುತ್ತೀರಾ ಎಂದು ಧನು, ಚೈತ್ರಾರನ್ನ ಓಡಿಸಿಕೊಂಡು ಹೋಗಿದ್ದಾರೆ.
BBK 11: ಈ ವಾರ ನೋ ಎಲಿಮಿನೇಷನ್: ಆದ್ರೆ, ಮುಂದಿನ ವಾರದ ಮಧ್ಯೆಯಿದೆ ಟ್ವಿಸ್ಟ್