Monday, 12th May 2025

Poor Road: ರಸ್ತೆ ಕಾಮಗಾರಿ ಧೂಳಿನಿಂದ ಬೆಳೆ ಹಾನಿ ಪರಿಹಾರಕ್ಕೆ ಅಧಿಕಾರಿಗಳ ಮೊರೆ ಹೋದ ರೈತರು

ಬಾಗೇಪಲ್ಲಿ: ತಾಲೂಕಿನ ಕಾರಕೂರು ಕ್ರಾಸ್‌ನಿಂದ ಅಚೇಪಲ್ಲಿ ಕ್ರಾಸ್‌ವರೆಗೂ ನಿರ್ಮಾಣವಾಗುತ್ತಿರುವ 20 ಕೋಟಿ ವೆಚ್ಚದ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಯ ವಿಷಪೂರಿತ ಧೂಳಿನಿಂದಾಗಿ ರಸ್ತೆ ಬದಿಯಲ್ಲಿರುವ ಕೃಷಿ ಜಮೀನುಗಳು ಕಲುಷಿತಗೊಂಡು  ಬೆಳೆಗಳು ನಾಶವಾಗುವುದರ ಜತೆಗೆ ಲಕ್ಷಾಂತರ ರೂ ನಷ್ಟ ಅನುಭವಿಸುವಾಂತೆ ಆಗಿದೆ. ಈ ಸಂಬAಧ ರೈತರಿಗೆ ನಷ್ಟ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ರೀತಿಯ ಪ್ರಯೋಜನ ಇಲ್ಲದಂತಾಗಿದೆ ಎನ್ನುವುದು ರೈತರ ಅಳಲಾಗಿದೆ.

ಬಾಗೇಪಲ್ಲಿ ತಾಲೂಕಿನ ಕಾರಕೂರು ಕ್ರಾಸ್ ನಿಂದ ಅಚೇಪಲ್ಲಿ ಕ್ರಾಸ್ ಮಾರ್ಗ ರಸ್ತೆ ಕಾಮಗಾರಿ ನಿಮಿತ್ತ ಕಳೆದ ೧೫ ದಿನಗಳ ಹಿಂದೆಯಷ್ಟೇ ಗುತ್ತಿಗೇದಾರ ರಸ್ತೆ ಹಾಕಿರುವ ಡಾಂಬರನ್ನು ಕಿತ್ತು ಹೊಸದಾಗಿ ಜಲ್ಲಿ ಕಲ್ಲಿನ ಮಿಶ್ರಣವನ್ನು ಹಾಕಿ ಹಾಗೇ ಬಿಟ್ಟಿರುತ್ತಾರೆ. ಜಲ್ಲಿ ಕಲ್ಲಿನ ರಸ್ತೆಯಲ್ಲಿ ಸಂಚರಿಸುವ ಬಸ್ ಮತ್ತು ಸರಕು ಸಾಗಾಣಿಕೆ ವಾಹನಗಳ ವೇಗದ ರಭಸಕ್ಕೆ ರಸ್ತೆ ಸಂಪೂರ್ಣ ಧೂಳು ಮಯವಾಗಿ ಹಿಂಬದಿ ಬರುವ ವಾಹನಗಳಿಗೆ ರಸ್ತೆ ಕಾಣದಂತಾಗಿ ಅಪಘಾತಗಳಿಗೆ ಕಾರಣವಾಗಿದೆ.

ಮತ್ತೊಂದು ಕಡೆ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿ ಗಾಯಗೊಳ್ಳು ತ್ತಿದ್ದಾರೆ. ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ ನಿತ್ಯ ರಸ್ತೆಗೆ ನೀರು ಸಿಂಪಡಣೆ ಮಾಡಿ ಕಿರಿಕಿರಿ ತಪ್ಪಿಸಬೇಕು, ಅದರೆ ಆನೆ ನಡೆದದ್ದೆ ದಾರಿ ಎಂಬAತೆ ಗುತ್ತಿಗೆದಾರ ನಡೆದುಕೊಳ್ಳು ತ್ತಿದ್ದಾನೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಲ್ಲಂಪಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ಮಾತನಾಡಿ, ಬಾಗೇಪಲ್ಲಿಯ ಕಾರಕೂರು ಕ್ರಾಸ್‌ನಿಂದ ಅಚೇಪಲ್ಲಿ ಕ್ರಾಸ್‌ವರೆಗೂ 20 ಕೋಟಿ ರೂ ವೆಚ್ಚದಲ್ಲಿ ನಿರ್ವಹಿಸುತ್ತಿರುವ ರಸ್ತೆ ಕಾಮಗಾರಿ ಅತ್ಯಂತ ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಿಂದ ಮಾಡುತ್ತಿದ್ದರೂ ಸಂಬ0ಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಣಮಟ್ಟದ ಬಗ್ಗೆ ಹರಿಸುತ್ತಿಲ್ಲ, ರಸ್ತೆಗೆ ಜಲ್ಲಿ ಕಲ್ಲು ಸುರಿದು 15 ರಿಂದ 20 ದಿನಗಳಾದರೂ ನೀರು ಹಾಕಿಲ್ಲ, ಮೆಟ್‌ಲಿಂಗ್ ಮಾಡಿಲ್ಲ ಇದರಿದಂದ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಧೂಳು ತಿನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕೃಷಿ ಬೆಳೆಗಳು ನಾಶಗೊಂಡು ರೈತರಿಗೆ ನಷ್ಠ ಸಂಭವಿಸುತ್ತಿದೆ. ಅಧಿಕಾರಿಗಳನ್ನು ಇನ್ನಾದರೂ ಎಚ್ಚೆತ್ತುಕೊಂಡು ಗುಣಮಟ್ಟದ ಕಾಮಗಾರಿಗೆ ಮುಂದಾಗಬೇಕಾಗಿದೆ ಎಂದು  ಆಗ್ರಹಿಸಿದ್ದಾರೆ.

ಹಿರಿಯ ನಾಗರೀಕ ನೀರುಗಂಟಿಪಲ್ಲಿ ನಾಗರಾಜು ಮಾತನಾಡಿ, ಬಾಗೇಪಲ್ಲಿಯ ಕಾರಕೂರು ಕ್ರಾಸ್‌ನಿಂದ ಅಚೇಪಲ್ಲಿ ಕ್ರಾಸ್‌ವರೆಗೂ ನಿರ್ವಹಿಸುತ್ತಿರುವ ಕಾಮಗಾರಿಯನ್ನು ಶೀಘ್ರ ಮುಗಿಸಿದರೆ ಜನರು ಆರೋಗ್ಯವಂತರಾಗಿರುತ್ತಾರೆ, ಧೂಳು ನಿಯಂತ್ರಿಸಲು ಕನಿಷ್ಠ ಎರಡು ಬಾರಿ ಆದರೂ ರಸ್ತೆಗೆ ನೀರು ಹಾಕಬೇಕು ಗುತ್ತಿಗೆದಾರ ಅದನ್ನು ಮಾಡು ತ್ತಿಲ್ಲ, ಜಲ್ಲಿಕಲ್ಲಿನ ರಸ್ತೆಯಲ್ಲಿ ನಿತ್ಯ ದ್ವಿಚಕ್ರ ವಾಹನದಲ್ಲಿ ಓಡಾಡುವಂತಹ ವೃದ್ದರಿಗೆ ಜ್ವರ ಬರುತ್ತಿದೆ, ಎದುರು ಗಡೆಯಿಂದ ವಾಹನಗಳು ಬಂದರೆ ದೂಳು ತುಂಬಿಕೊAಡು ರಸ್ತೆ ಕಾಣಿಸುವುದಿಲ್ಲ, ಇದರಿಂದ ಅಫಘಾತಗಳು ಸಂಭವಿಸುತ್ತಿದ್ದು ಅಧಿಕಾರಿಗಳು ಕಾಳಜಿವಹಿಸಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ಬೇಗ ಮುಗಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:chikkaballapur