Friday, 16th May 2025

MLA Century: ಶತಕ ದಾಟಿದ ಎಂಎಲ್‌ಎ ಪ್ರದೀಪ್ ಈಶ್ವರ್ ಅವರ ನಮ್ಮೂರಿಗೆ ನಮ್ಮ ಶಾಸಕ

ಸಾರ್ಥಕಭಾವದೊಂದಿಗೆ ಭರವಸೆ ಮೂಡಿಸುತ್ತಿರುವ ವಿಶಿಷ್ಟ ಕಾರ್ಯಕ್ರಮ

ಚಿಕ್ಕಬಳ್ಳಾಪುರ: ನಮ್ಮೂರಿಗೆ ನಮ್ಮ ಶಾಸಕ ಎಂಬ ನನ್ನ ಕನಸಿನ ಕಾರ್ಯಕ್ರಮ ಒಂದೊ0ದೇ ಸಾರ್ಥಕವಾದ ಹೆಜ್ಜೆಗಳನ್ನಿಡುತ್ತಾ ದಿನೇ ದಿನೇ ಜನಪರವಾಗುತ್ತಾ ಸಾಗಿ ಇಂದಿಗೆ ಶತಕದ ಹೊಸ್ತಿಲಲ್ಲಿ ನಿಂತಿರುವುದು ವೈಯಕ್ತಿವಾಗಿ ನನಗೆ ಅತ್ಯಂತ ಸಂತೋಷ ತಂದಿದೆ. ಇನ್ನಾರು ತಿಂಗಳಲ್ಲಿ ಎಲ್ಲಾ ಹಳ್ಳಿಗಳನ್ನು ಮುಗಿಸುತ್ತೇನೆ.೨೦೨೫ರಲ್ಲಿ ಇನ್ನಷ್ಟು ಹೊಸ ಚಿಂತನೆ ಆಲೋಚನೆಗಳೊಂದಿಗೆ ಜನಪರ ಕಾರ್ಯಯೋಜನೆಗಳೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯುತ್ತೇನೆ ಎನ್ನುವುದು ಶಾಸಕ ಪ್ರದೀಪ್ ಈಶ್ವರ್ ಅವರ ಆತ್ಮವಿಶ್ವಾಸದ ಮಾತು.

ತಾಲೂಕಿನ ಮಂಡಿಕಲ್ಲು ಹೋಬಳಿಯ ರೇಣುಮಾಕಲಹಳ್ಳಿ, ಉಪ್ಪುಗುಟ್ಟಹಳ್ಳಿ ಗ್ರಾಮಗಳಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮದ ನಡುವೆ ಮಾಧ್ಯದೊಂದಿಗೆ ಮಾತನಾಡಿದರು.

ಆರೋಗ್ಯ ತಪಾಸಣೆಗೆ ಒತ್ತು

ಗ್ರಾಮೀಣ ಪ್ರದೇಶದಲ್ಲಿ ರಸ್ತೆ,ಚರಂಡಿ,ಸಾರಿಗೆ ಸಮಸ್ಯೆ ಇದ್ದಂತೆ ಆರೋಗ್ಯ ಸಮಸ್ಯೆ ವಿಪರೀತ ಜನತೆಯನ್ನು ಕಾಡುತ್ತಿದೆ.ಇದೇ ಉದ್ದೇಶದಿಂದಲೇ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದ್ದೇನೆ.ಇಲ್ಲಿ ಪತ್ತೆಯಾಗುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಹೊಸ ಚೈತನ್ಯ ನೀಡು ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ.ಶಾಸಕರೊಬ್ಬರು ಹಳ್ಳಿಗಳಿಗೆ ಭೇಟಿ ನೀಡುವುದು ಅಪರೂಪ ಎಂಬ ಅಪವಾದವನ್ನು ನನ್ನ ಕ್ಷೇತ್ರದಲ್ಲಿ ದೂರ ಮಾಡಿದ್ದೇನೆ.ಹಳ್ಳಿಗಳಿಗೆ ನಾನಷ್ಟೇ ಭೇಟಿ ನೀಡುತ್ತಿಲ್ಲ,ಬದಲಿಗೆ ನನ್ನೊಂದಿಗೆ ೩೬ ಅಧಿಕಾರಿಗಳ ಇಡೀ ತಾಲೂಕು ಆಡಳಿತವನ್ನೇ ಕರೆದೊಯ್ಯುತ್ತಿದ್ದೇನೆ.ಈ ಮೂಲಕ ಜನತೆ ಅನುಭವಿಸುತ್ತಿರುವ ನೈಜ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆಯುತ್ತಿದ್ದೇನೆ.ನನ್ನ ಭೇಟಿಯ ಅವಧಿಯಲಿಯೇ ಪರಿಹರಿಸಬಹುದಾದ ಸಾಕಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಾಣಿಸಿದ್ದೇನೆ.ಯಾರು ಏನೇ ಹೇಳಿದರೂ ಜನಪರ ಕಾಳಜಿ ಮತ್ತು ಕಾರ್ಯಕ್ರಮ ನಿಲ್ಲಿಸುವ ಮಾತೇ ಇಲ್ಲ ಎಂದರು.

೨೫೦ ಕೋಟಿ ತರುವೆ
೨೦೨೫ರಲ್ಲಿ ಕ್ಷೇತ್ರಕ್ಕೆ ಕನಿಷ್ಟ ೨೫೦ಕೋಟಿ ಅನುದಾನ ತಂದೇ ತರುತ್ತೇನೆ.ಮೆಡಿಕಲ್ ಕಾಲೇಜಿನ ೩೦೦ ಕೋಟಿ ರೂಪಾಯಿ ಬಾಕಿಯಿದ್ದು ಅದನ್ನು ಬಿಡುಗಡೆಗೊಳಿಸಬೇಕಿದೆ.ಈವರ್ಷದ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ  ಫಲಿತಾಂಶ ಸುಧಾರಿಸಲು ಹೆಚ್ಚಿನ ಮುತುವರ್ಜಿ ವಹಿಸಿದ್ದೇನೆ.ವಿದ್ಯಾರ್ಥಿಗಳಿಗೆ ಎಂಎಲ್‌ಎ ಪ್ರದೀಪ್ ಈಶ್ವರ್ ಹೆಸರಿನಲ್ಲಿ ನೀಡುತ್ತಿರುವ ವಿದ್ಯಾರ್ಥಿವೇತನ ವಿತರಣೆಗೆ ಚಾಲನೆ ನೀಡಿದ್ದು ಪುರ ಪಂಚಾಯಿತಿ,ಮಿಣಕನಗುರ್ಕಿ ಪಂಚಾಯಿತಿ, ಮುದ್ದೇನಹಳ್ಳಿ ಪಂಚಾಯಿತಿಯಲ್ಲಿ ಮನೆಮನೆಗೆ ತೆರಳಿ ಕೊಟ್ಟಿದ್ದೇನೆ.ಉಳಿದ ಕಡೆ ೨ ತಿಂಗಳಲ್ಲಿ ಅವರಿದ್ದಲ್ಲಿಗೇ ಹೋಗಿ ನೀಡುತ್ತೇನೆ ಎಂದರು.

ಮAಗಳವಾರದ ಕಾರ್ಯಕ್ರಮದಲ್ಲಿ ರೇಣುಮಾಕಲಹಳ್ಳಿ ಗ್ರಾಮದ ಮುಸ್ಲಿಂ ಸಮುದಾಯ ಈದ್ಗಾಗೆ ರಸ್ತೆ ಮಾಡಿಕೊಡಲು ಮನವಿ ಮಾಡಿದ್ದಾರೆ.ಸುಮಾರು ೪೦ ಲಕ್ಷದಷ್ಟು ಅನುದಾನ ಬೇಕಿದೆ. ಇಲ್ಲಿ ಜಾಗದ ಸಮಸ್ಯೆಯಿದ್ದು ತಹಶೀಲ್ದಾರ್ ಅನಿಲ್, ಇ.ಒ ಮಂAಜುನಾಥ್ ಅವರು ಸ್ಪಂಧಿಸಿ ಪರಿಹಾರದ ಮಾರ್ಗ ಕಾಣಿಸಿದ್ದಾರೆ. ಉಪ್ಪು ಗುಟ್ಟ ಹಳ್ಳಿ ಗ್ರಾಮದಲ್ಲಿ ಚರಂಡಿ ಸಮಸ್ಯೆ,ಗಂಗಾಕಲ್ಯಾಣ ಬೋರ್‌ವೆಲ್ ಸಮಸ್ಯೆ, ನಿವೇಶನ ಸಮಸ್ಯೆ,ಹೇಳಿದ್ದಾರೆ. ಶೀಘ್ರದಲ್ಲಿಯೇ ಇವುಗಳಿಗೆ ಪರಿಹಾರ ತೋರಿಸಲಾಗುವುದು ಎಂದರು.

ವಿಶೇಷ ಎಂದರೆ ಇದೇ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲು ಸೂಚಿಸಿದ ಸಚಿವರು, ಪೊಲೀಸ್ ಸ್ಟೇಷನ್ ಸಮಸ್ಯೆ ಹೇಳಿಕೊಂಡ ನಿವಾಸಿಯೊಬ್ಬರಿಗೆ ಸ್ಥಳದಲ್ಲಿಯೇ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಕರೆ ಮಾಡಿ ಪರಿಹರಿಸಿ ಅವರ ಮೊಗದಲ್ಲಿ ಸಂತೋಷ ಉಂಟಾಗುವ0ತೆ ಮಾಡಿದರು.

ಸರಕಾರಿ ಭೂಮಿಯಲ್ಲಿ ಮನೆ ಕಟ್ಟಬಾರದು!

ಸ್ಥಳೀಯ ನಿವಾಸಿಯೊಬ್ಬರ ನಿವೇಶನದ ಸಮಸ್ಯೆಗೂ ತಹಶೀಲ್ದಾರ್,ಇಒ ಮಂಜುನಾಥ್ ಅವರನ್ನು ಕೇಳಿ ಸ್ಥಳದಲ್ಲಿಯೇ ಪರಿಹಾರದ ಮಾರ್ಗ ತೋರಿಸಿದರು.ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿದರೆ ಬಡವರೇ ಆಗಲಿ ಶ್ರೀಮಂತರೇ ಆಗಲಿ ಕಾನೂನಿನಲ್ಲಿ ಬಿಡುವ ಮಾತೇ ಇಲ್ಲ.ಒಂದು ವೇಳೆ ನಿಮಗೆ ಯಾರಾದರೂ ನಮ್ಮ ಅಧಿಕಾರಿಗಳು ತೊಂದರೆ ಕೊಟ್ಟಲ್ಲಿ ಕೋರ್ಟಿಗೆ ಹೋಗಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಿ,ಬೇಕಾದರೆ ನಿವೇಶನ ಕೊಡುತ್ತೇನೆ ಎಂದರು.

ಅವರ ಜೀವಕ್ಕೆ ನಾನು ಗ್ಯಾರೆಂಟಿ ?

ಸಿ.ಟಿ.ರವಿ ಪ್ರಕರಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರದೀಪ್ ಈಶ್ವರ್ ಸಿ.ಟಿ ರವಿ ಅವರು ಹಿರಿಯ ರಾಜಕಾರಣಿ,ಅವರನ್ನು ಎನ್‌ಕೌಂಟರ್ ಮಾಡಲು ಉಂಟೆ, ಸುಮ್ಮನೆ ಕಲ್ಪಿಸಿಕೊಳ್ಳುತ್ತಿದ್ದಾರೆ. ನಾನು ಅವರನ್ನು ಕೇಳುತ್ತೇನೆ, ೫ ವರ್ಷದ ಹಿಂದೆ ಅವರದೇ ಪಕ್ಷದಲ್ಲಿ ಎಂಎಲ್‌ಎ ಆಗಿದ್ದವರು ನನ್ನನ್ನ ಅರೆಸ್ಟ್ ಮಾಡಿಸಿ ೪ ಗಂಟೆ ಸುತ್ತಾಡಿಸಿ ಚದಲಪುರದ ಬಳಿ ಕೂಡಿಸಿ ನಂತರ ಸ್ಟೇಷನ್‌ಗೆ ಕರೆದುಕೊಂಡು ಬಂದರು.ಇದು ಪಾರ್ಟ್ ಆಫ್ ದ ಜರ್ನಿ ಸರ್.ನಾನು ಯಾರನ್ನೂ ಟೀಕಿಸಲಿಲ್ಲವಲ್ಲ.೨೪ ಗಂಟೆ ಒಳಗೆ ಕೋರ್ಟಿಗೆ ಹಾಜರುಪಡಿಸಬೇಕು ಎಂದಿದೆ.ಹೀಗೆ ಕರೆದೊಯ್ಯುವಾಗ ಅಲ್ಲೆಲ್ಲೋ ಅವರಿದ್ದ ವಾಹನವನ್ನು ಅಲ್ಲೇಲ್ಲೋ ಸೈಡಿಗೆ ಹಾಕಿರುತ್ತಾರೆ.ಅವರು ಅತಂಕ ಪಡುವುದು ಬೇಡ.ಅವರ ಜೀವಕ್ಕೆ ನಾನು ಗ್ಯಾರೆಂಟಿ ಕೊಡುತ್ತೇನೆ ಎಂದರು.