ತಿರುವನಂತಪುರಂ: ಕೇರಳದ (Kerala) ಕಾಸರಗೋಡು (Kasaragodu) ಜಿಲ್ಲೆಯ ಪೆರಿಯಾ ಬಳಿ 5 ವರ್ಷಗಳ ಹಿಂದೆ ನಡೆದಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ)ನ 10 ಮಂದಿಗೆ ಜೀವಾವಧಿ ಮತ್ತು ಮಾಜಿ ಎಂಎಲ್ಎ ಒಬ್ಬನಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ನ್ಯಾಯಾಲಯ (CBI Court) ಆದೇಶ ನೀಡಿದೆ (Periya Murders).
Periya Murders: Kerala Court sentences 10 CPI(M) workers to life imprisonment; ex-MLA gets 5 years
— Bar and Bench (@barandbench) January 3, 2025
Read story: https://t.co/rm5bIOgwL1 pic.twitter.com/PEDArTU3CH
ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಪೆರಿಯ ಕಲ್ಯೊಟ್ ನಿವಾಸಿಗಳಾದ ಕೃಪೇಶ್ (19) ಮತ್ತು ಶರತ್ ಲಾಲ್(21) ಕೊಲೆ ಪ್ರಕರಣದ 10 ಮಂದಿ ಆರೋಪಿಗಳಿಗೆ ಅವಳಿ ಜೀವಾವಧಿ ಸಜೆ ಹಾಗೂ ಉದುಮ ಮಾಜಿ ಶಾಸಕ ಸಹಿತ ನಾಲ್ವರಿಗೆ ತಲಾ ಐದು ವರ್ಷ ಶಿಕ್ಷೆ ವಿಧಿಸಿ ಎರ್ನಾಕುಲಂ ಸಿಬಿಐ ನ್ಯಾಯಾಲಯ ಶುಕ್ರವಾರ(ಜ. 3) ತೀರ್ಪು ನೀಡಿದೆ. ಶಿಕ್ಷೆಗೊಳಗಾದವರಲ್ಲಿ ಮಾಜಿ ಶಾಸಕ ಮತ್ತು ಸಿಪಿಐ(ಎಂ) ಜಿಲ್ಲಾ ನಾಯಕ ಕೆ.ವಿ.ಕುಂಞಿರಾಮನ್, ಕಾಞಂಗಾಡ್ ಬ್ಲಾಗಾಡ್ಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಪೆರಿಯಾದ ಸಿಪಿಐಎಂನ ಮಾಜಿ ಸ್ಥಳೀಯ ಸಮಿತಿ ಸದಸ್ಯ ಎ. ಪೀತಾಂಬರನ್, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರಾಘವನ್ ವೆಲುತೋಳಿ ಸೇರಿದ್ದಾರೆ. ಸಿಪಿಐ(ಎಂ) ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಪ್ರೇರಿತ ದಾಳಿ ಮತ್ತು ಪ್ರತಿದಾಳಿಗಳ ಸಂದರ್ಭದಲ್ಲಿ ಕೊಲೆ ನಡೆದಿದ್ದವು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಕ್ರೈಂ ಬ್ರಾಂಚ್ ತನಿಖೆ ನಡೆಸಿತ್ತು. ಆದರೆ ಮೃತರ ಕುಟುಂಬಸ್ಥರು ಹೈಕೋರ್ಟ್ ಮೊರೆ ಹೋದ ನಂತರ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಸಿಪಿಐ – ಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ರಾಜಕೀಯ ವೈಷಮ್ಯದಿಂದ ಈ ಕೊಲೆಗಳು ನಡೆದಿವೆ ಎಂದು ಸಿಬಿಐ ಕಂಡುಕೊಂಡಿದೆ. ಕಾಸರಗೋಡಿನ ಪೆರಿಯಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮೃತರ ಕುಟುಂಬ ಸದಸ್ಯರು ಅವರ ಸ್ಮಾರಕ ಸ್ಥಳದಲ್ಲಿ ಜಮಾಯಿಸಿದ್ದರು.
ತೀರ್ಪನ್ನು ಕೇಳಿದ ನಂತರ ಮೃತ ಇಬ್ಬರ ಕುಟುಂಬಗಳ ಕೆಲವು ಮಹಿಳೆಯರು ಕಣ್ಣೀರು ಹಾಕುತ್ತಿರುವುದು ಕಂಡು ಬಂದಿದೆ. ತೀರ್ಪಿನ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಅಪರಾಧಿಗಳಲ್ಲಿ ಮಾಜಿ ಸಿಪಿಐ-ಎಂ ಶಾಸಕ ಮತ್ತು ಕಾರ್ಯಕರ್ತರಿರುವುದು ಗಮನಾರ್ಹ ಎಂದರು. “ಈ ಅಪರಾಧದಲ್ಲಿ ತಮ್ಮ ನಾಯಕರು ಅಥವಾ ಕಾರ್ಯಕರ್ತರ ಪಾತ್ರ ಇಲ್ಲವೆಂದು ಸಿಪಿಐ-ಎಂ ಪಕ್ಷ ಹೇಳುತ್ತಿತ್ತು. ಆದರೆ ಈಗ ಅವರಿಗೆ ಶಿಕ್ಷೆಯಾಗಿದೆ. ಸಿಪಿಐ-ಎಂ ಪ್ರಾಮಾನಿಕವಾಗಿ ಕೆಲಸ ಮಾಡುತ್ತದೆ” ಎಂದು ಸತೀಶನ್ ಹೇಳಿದರು.
ಈ ಸುದ್ದಿಯನ್ನೂ ಓದಿ:Self Harming: ಇನ್ಸ್ಟಾಗ್ರಾಮ್ ಲೈವ್ನಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ; ಫಾಲೊವರ್ಸ್ಗಳಲ್ಲಿ ಆತಂಕ!