ಬಾಗೇಪಲ್ಲಿ: ಕಸಬಾ ಹೋಬಳಿ ಸರ್ಕಾರಿ ಪ್ರೌಢಶಾಲೆ ಕೊಂಡರೆಡ್ಡಿ ಪಲ್ಲಿಯಲ್ಲಿ 2008 ರಲ್ಲಿ ಪ್ರಾರಂಭವಾಗಿ 17 ವರ್ಷ ತುಂಬಿದ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಉದ್ಘಾಟನೆ ಮಾಡಿ ಮಾತನಾಡಿ ಘಂಟಂ ವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಬಡ ಮಕ್ಕಳ ಹಾಗೂ ಗ್ರಾಮೀಣ ಭಾಗದಲ್ಲಿ ನಿರಂತರ ವಿದ್ಯಾರ್ಜನೆ ಸೇವೆಯಲ್ಲಿ ತೊಡಗಿಸಿಕೊಂಡು ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಕೊಡುಗೆ ಅಪಾರ ಇಲ್ಲಿ ವ್ಯಾಸಂಗ ಮಾಡಿ ವಿದ್ಯಾರ್ಥಿಗಳ ಉನ್ನತ ಮಟ್ಟದ ಸ್ಥಾನದಲ್ಲಿ ಇದ್ದಾರೆ ಹಾಗೂ ಉತ್ತಮ ಫಲಿತಾಂಶ ಬರಲು ಕಾರಣಕರ್ತರಾದ ಶಿಕ್ಷಕ ವರ್ಗವನ್ನು ಪ್ರಶಂಸಿದರು ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಎನ್.ಎನ್.ಸಂಧ್ಯಾ, ಕೆ.ಬಿ.ಆಂಜನೇಯ ರೆಡ್ಡಿ, ನಾರಾಯಣ ಸ್ವಾಮಿ, ಸಿ.,ಎಲ್.ರವಿ.,ಎಸ್. ವರಲಕ್ಷ್ಮೀ.ಎಸ್.ಜಿ.ವಿ.ಚಂದ್ರಶೇಖರ, ಉಷಾ, ಗೀತಶ್ರೀ, ಸಿಬ್ಬಂದಿ ವರ್ಗ ಹೆಚ್.ಆರ್.ರಘುನಾಥ್, ರಾಮಚಂದ್ರಪ್ಪ ಹಾಗೂ ವಿಧ್ಯಾರ್ಥಿಗಳ ಹಾಜರಿದ್ದರು.