ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ” ಬ್ರೇಕಿಂಗ್ ಬ್ಯಾರಿಯರ್ಸ್, ಬಿಲ್ಡಿಂಗ್ ಅವೇರ್ನೆಸ್ ” ಅಭಿಯಾನದೊಂದಿಗೆ ಕ್ಯಾನ್ಸರ್ ಜಾಗೃತಿಯನ್ನು ತರುತ್ತಿದೆ
ಅನೇಕ ಯುವ ಜನರಿಗೆ, ಕ್ಯಾನ್ಸರ್ ಇನ್ನೂ ಭಯಾನಕ ರೋಗವಾಗಿ ಕಂಡುಬರುತ್ತದೆ, ಮತ್ತು ಅದು ಅವರಿಗೆ ಜೀವನದ ಅಂತ್ಯದಂತೆ ಭಾಸವಾಗುತ್ತದೆ. ಜನರು ರೋಗದ ಬಗ್ಗೆ ಬಹಿರಂಗವಾಗಿ ಮಾತನಾಡದಿರುವ ಕಾರಣ ಈ ಆರೋಗ್ಯ ಸಮಸ್ಯೆಯು ಸಾಮಾನ್ಯವಾಗಿ ಭಯ, ಕಟ್ಟುಕತೆ ಮತ್ತು ಗೊಂದಲಗಳಿಂದ ತುಂಬಿರುತ್ತದೆ. ಇದು ಅವರ ಸ್ವಂತ ಆರೋಗ್ಯವನ್ನು ನೋಡಿಕೊಳ್ಳಲು ಅಥವಾ ಕ್ಯಾನ್ಸರ್ ಹೊಂದಿರುವ ಕುಟುಂಬ ಸದಸ್ಯರಿಗೆ ಸಹಾಯ ಮಾಡಲು ಕಷ್ಟವಾಗುವಂತೆ ಮಾಡಬಹುದು.
ಹೆಚ್ಚು ತಿಳುವಳಿಕೆಯುಳ್ಳ ಸಮಾಜವನ್ನು ರಚಿಸಲು ಮತ್ತು ಅದರ ಬಗ್ಗೆ ಮಾತನಾಡುವ ಭಯವನ್ನು ಭರವಸೆಗೆ ಬದಲಾಯಿಸಲು ಯುವಜನರಲ್ಲಿ, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳಲ್ಲಿ ಕ್ಯಾನ್ಸರ್, ಅದರ ಅಪಾಯಗಳು, ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಆಯ್ಕೆಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಈ ಸಮಸ್ಯೆಯ ಮಹತ್ವವನ್ನು ಅರ್ಥಮಾಡಿಕೊಂಡು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ಡಿಸೆಂಬರ್ 20 ಶುಕ್ರವಾರದಂದು “ಬ್ರೇಕಿಂಗ್ ಬ್ಯಾರಿಯರ್ಸ್, ಬಿಲ್ಡಿಂಗ್ ಅವೇರ್ನೆಸ್” ಎಂಬ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ನಡೆಸಿತು
ಸೇಂಟ್ ಫ್ರಾನ್ಸಿಸ್ ಕಾಲೇಜು, ಜ್ಯೋತಿ ನಿವಾಸ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ನ್ಯೂ ಹೊರೈಜನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮುಂತಾದ ಕಾಲೇಜುಗಳ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಯಿತು ಮತ್ತು ಕ್ಯಾನ್ಸರ್ ಅನ್ನು ಹೇಗೆ ತಡೆಯುವುದು ಎಂಬುದರ ಕುರಿತು ಅವರು ಕಲಿತುಕೊಂಡರು. ಮಣಿಪಾಲದ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್‌ನು ಅನುಭವಿ ತಜ್ಞರು ಕ್ಯಾನ್ಸರ್‌ನ ವಿವಿಧ ಅಂಶಗಳಾದ ಅಪಾಯಕಾರಿ ಅಂಶಗಳು, ತಂಬಾಕು ಸೇವನೆ, ಆರಂಭಿಕ ಹಂತದ ಪತ್ತೆ ಹಚ್ಚುವ ವಿಧಾನಗಳು ಮತ್ತು ಇತ್ತೀಚಿನ ಚಿಕಿತ್ಸೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದ ಉದ್ದೇಶವನ್ನು ವಿವರಿಸುತ್ತಾ, ಡಾ. ನಿತಿನ್ ಯಶಸ್ ಮೂರ್ತಿ, ಕನ್ಸಲೈಂಟ್ – ಮೆಡಿಕಲ್ ಆಂಕೊ ಲಾಜಿ ಮತ್ತು ಹೆಮಾಟೋ ಆಂಕೊಲಾಜಿ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಆರಂಭಿಕ ಹಂತದ ಪತ್ತೆ ಮತ್ತು ತಡೆಗಟ್ಟುವಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಕ್ಯಾನ್ಸರ್ ಆರೈಕೆಯನ್ನು ಸುಧಾರಿಸಲು, ನಮಗೆ ರೋಗದ ಬಗ್ಗೆ ಹೆಚ್ಚಿನ ಜ್ಞಾನ, ಅದನ್ನು ತಡೆಗಟ್ಟುವ ಮಾರ್ಗಗಳು, ಆರಂಭಿಕ ಹಂತದ ಪತ್ತೆ, ಉತ್ತಮ ಚಿಕಿತ್ಸಾ ಆಯ್ಕೆಗಳು ಮತ್ತು ಪ್ರತಿ ವ್ಯಕ್ತಿಗೆ ಅನುಗುಣವಾಗಿರುವ ಆರೈಕೆಯ ಅಗತ್ಯವಿದೆ.
ಡಾ. ಮಂಜುನಾಥ್ ಎನ್ ಎಮ್ ಎಲ್, ಕನ್ಸಲೆಂಟ್ – ಸರ್ಜಿಕಲ್ ಆಂಕೊಲಾಜಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿ, ತಂಬಾಕು ಕ್ಯಾನ್ಸರ್ ಗೆ ಹೇಗೆ ಸಂಬಂಧಿಸಿದ ಎಂದು ವಿವರಿಸಿದರು. ಅವರು ಮಾತನಾಡಿ, ‘ಕ್ಯಾನ್ಸರ್ ಗೆ ಕಾರಣವಾಗುವ ಕ್ಕೂ ಹೆಚ್ಚು ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುವ ತಂಬಾಕು ಕ್ಯಾನ್ಸರ್ ಗೆ ಅತ್ಯಂತ ಸಾಮಾನ್ಯವಾದ ಕಾರಣವಾಗಿದೆ. ಸುಮಾರು 81% ಶ್ವಾಸಕೋಶದ ಕ್ಯಾನ್ಸರ್‌ಗಳು ಧೂಮಪಾನದಿಂದ ಉಂಟಾಗುತ್ತವೆ ಮತ್ತು 5 ರಲ್ಲಿ 1 ಸಾವು ತಂಬಾಕು ಸೇವನೆಯಿಂದ ಉಂಟಾಗುತ್ತದೆ. ಆರೋಗ್ಯದ ಅಪಾಯಗಳ ಕಾರಣದಿಂದ, ನಾವು ಜನರನ್ನು ವ್ಯಸನಮುಕ್ತಗೊಳಿಸುವ ಕಾರ್ಯಕ್ರಮಗಳಿಗೆ ಸೇರಲು ಪ್ರೋತ್ಸಾಹಿಸುತ್ತೇವೆ ಮತ್ತು ಧೂಮಪಾನವನ್ನು ತ್ಯಜಿಸಲು ಮತ್ತು ಆರೋಗ್ಯಕರ ಜೀವನವನ್ನು ನಡೆಸಲು 5Rs – ರಿಲೆವನ್ಸ್ (ಪ್ರಸ್ತುತತೆ), ರಿಸ್ಟ್ (ಅಪಾಯಗಳು), ರಿವಾರ್ಡ್ಸ್ (ಬಹುಮಾನಗಳು), ರೋಡ್ ಬ್ಲಾಕ್ಸ್ (ಅಡೆತಡೆಗಳು) ಮತ್ತು ರಿಪಿಟೇಷನ್ (ಪುನರಾವರ್ತನೆಗಳನ್ನು) ಬಳಸುತ್ತೇವೆ,” ಎಂದರು.
ಕ್ಯಾನ್ಸರ್ ಯಾವಾಗಲೂ ಸಾವು ತರುವ ಕಾಯಿಲೆಯಲ್ಲ; ಇದನ್ನು ನಿರ್ವಹಿಸಬಹುದು ಮತ್ತು ಚಿಕಿತ್ಸ ನೀಡ ಬಹುದು, ವಿಶೇಷವಾಗಿ ಆರಂಭಿಕ ಹಂತದಲ್ಲಿ ಕಂಡುಹಿಡಿದರೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಆರೈಕೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡಿತು ಮತ್ತು ಆರೋಗ್ಯಕರ, ಹೆಚ್ಚು ಪೂರ್ವಭಾವಿ ಜೀವನವನ್ನು ನಡೆಸಲು ಅವರನ್ನು ಪ್ರೇರೇಪಿಸಿತು, ಇದು ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ.