Saturday, 10th May 2025

L P Kulkarni Column: ಕಾಂಕ್ರೀಟ್‌ ಗೊತ್ತು ಏನಿದು ಶುಗರ್‌ ಕ್ರೀಟ್?‌

ತಿಳಿಯೋಣ

ಎಲ್.ಪಿ.ಕುಲಕರ್ಣಿ

2023-24 ನೇ ಸಾಲಿನಲ್ಲಿ ಜಗತ್ತಿನಾದ್ಯಂತ ಒಂದು ಅಂದಾಜಿನಂತೆ 186 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಅಂದಾಜು ಒಂದು ಟ್ರಕ್‌ನಲ್ಲಿ 10 ಟನ್ ಸಕ್ಕರೆ ಲೋಡ್ ಮಾಡಬಹುದಾದರೆ 186 ಮಿಲಿಯನ್ ಮೆಟ್ರಿಕ್ ಟನ್‌ಗೆ 1 ಕೋಟಿ 86 ಲಕ್ಷ ಟ್ರಕ್‌ಗಳು ಬೇಕಾಗುತ್ತವೆ!

ಜಗತ್ತಿನ ಸಕ್ಕರೆ ಉತ್ಪಾದನೆಯಲ್ಲಿ ಏಷಿಯಾ ಖಂಡವೇ ಅತೀ ಹೆಚ್ಚು ಸಕ್ಕರೆ ಉತ್ಪಾದನೆ ಮಾಡಿದ ಖಂಡವೆನಿಸಿದೆ. ಸಕ್ಕರೆ ಉತ್ಪಾದನೆಯ ನಂತರ ಅಂದಾಜು 700 ಮಿಲಿಯನ್ ಟನ್ನಿನಷ್ಟು ತ್ಯಾಜ್ಯ ಬಿಡುಗಡೆಯಾಗುತ್ತದಂತೆ. ಈ ತ್ಯಾಜ್ಯದ ಸ್ವಲ್ಪ ಭಾಗವನ್ನು ಉಪಯುಕ್ತ ವಸ್ತುಗಳನ್ನಾಗಿ ತಯಾರಿಸಲು ಬಳಸುವುದನ್ನು ಬಿಟ್ಟರೆ ಇನ್ನುಳಿದ ಶೇಷ ಭಾಗ ಹಾಳಾಗೇ ಹೋಗುತ್ತದೆ. ಈ ಹಾಳಾಗಿ ಹೋಗುವ ಭಾಗವನ್ನೂ ಸಹ ಈಗ ಒಂದು ಉಪಯುಕ್ತ ವಸ್ತುವನ್ನಾಗಿ ತಯಾರಿಸಿzರೆ ವಿeನಿಗಳು. ಅದೇ ಈ ಕಬ್ಬಿನ ತ್ಯಾಜ್ಯವನ್ನು ಈಗ ಕಾಂಕ್ರೀಟ್ ಆಗಿ ಪರಿವರ್ತಿಸಿದ್ದಾರೆ. ಆ ವಸ್ತುವಿಗೆ ಅವರಿಟ್ಟ ಹೆಸರು ಶುಗರ್ ಕ್ರೀಟ.

ಈ ವಸ್ತುವನ್ನು ಮಣ್ಣಿನ ಮತ್ತು ಕಾಂಕ್ರೀಟ್ ಇಟ್ಟಿಗೆಗಳಂತಹ ಸಾಂಪ್ರದಾಯಿಕ ಕಟ್ಟಡ ಸಾಮಗ್ರಿಗಳಿಗೆ ಪರ್ಯಾಯ ವಾಗಿ ಬಳಸಬಹುದಾಗಿದೆ. ಅಲ್ಲದೇ ಈ ಕಬ್ಬಿನ ತ್ಯಾಜ್ಯ ಅಥವಾ ಬಗ್ಸ್ ಅನ್ನು ಖನಿಜ-ಆಧಾರಿತ ಬೈಂಡರ್‌ ಗಳೊಂದಿಗೆ ಸಂಯೋಜಿಸುವ ಮೂಲಕ ಸಕ್ಕರೆಯನ್ನು ತಯಾರಿಸಲಾಗುತ್ತದೆ. ಇದರ ಪರಿಣಾಮವಾಗಿ ಬ್ಲಾಕ್‌ ಗಳು(ಇಟ್ಟಿಗೆಗಳು) ಅವುಗಳ ಸಾಂಪ್ರದಾಯಿಕ ಕೌಂಟರ್ಪಾರ್ಟ್ಸ್‌ಗಳಿಗಿಂತ ಹಗುರವಾದ ಮತ್ತು ಅಗ್ಗವಾದವುಗಳು ಮಾತ್ರವಲ್ಲದೆ ಉತ್ತಮ ಬೆಂಕಿಯ ಪ್ರತಿರೋಧ, ಸಂಕುಚಿತ ಶಕ್ತಿ, ಉಷ್ಣ ವಾಹಕತೆ ಮತ್ತು ಹೆಚ್ಚು ಬಾಳಿಕೆ ಬರುವಂತಹುಗಳಾಗಿವೆ.

ಈ ಹೊಸ ವಸ್ತುವು ತ್ವರಿತ ಕ್ಯೂರಿಂಗ್ ಸಮಯ, ಕಡಿಮೆ ತೂಕ ಮತ್ತು ಕಡಿಮೆ ಉತ್ಪಾದನಾ ವೆಚ್ಚವನ್ನು ನೀಡುತ್ತದೆ. ಅಲ್ಲದೆ ಇದೊಂದು ಆಕರ್ಷಕ ಆಯ್ಕೆಯಾಗಿದೆ. ವಿಶೇಷವಾಗಿ ಕಬ್ಬು-ಉತ್ಪಾದಿಸುವ ಪ್ರದೇಶಗಳಲ್ಲಿ, ಇದು ಕೃಷಿ ತ್ಯಾಜ್ಯವನ್ನು ಅಮೂಲ್ಯವಾದ ನಿರ್ಮಾಣ ಸಂಪನ್ಮೂಲವಾಗಿ ಪರಿವರ್ತಿಸುತ್ತದೆ. ಶುಗರ್‌ಕ್ರೀಟ್ ಪರಿಸರ ಸ್ನೇಹಿ ಯಾಗಿದೆ ಮತ್ತು ಪುಟ್ಟ ಇಂಗಾಲದ ಹೆಜ್ಜೆಗುರುತನ್ನು ಹೊಂದಿದೆ, ಕಾಂಕ್ರೀಟ್‌ನ ಕೇವಲ ಶೇ.15 ರಿಂದ ಶೇ.20 ಭಾಗ ಮಾತ್ರ ಈ ವಿಷಾನಿಲವಿರುತ್ತದೆ ಎಂದು ಅಂದಾಜಿಸಲಾಗಿದೆ.

ಶುಗರ್‌ಕ್ರೀಟ್ ಬಳಸುವುದರಿಂದ ಜಾಗತಿಕ ಕಾರ್ಬನ್ ಡೈ ಆಕ್ಸೈಡ್ ವಿಷಕಾರಿ ಅನಿಲ ಹೊರಸೂಸುವಿಕೆಯನ್ನು
ಅಂದಾಜು 1.08 ಶತಕೋಟಿ ಟನ್‌ಗಳಷ್ಟು ಕಡಿತಗೊಳಿಸಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳು. ವಿಜ್ಞಾನಿಗಳು ಈಗ ಈ ವಸ್ತುವಿನ ಸಾಮರ್ಥ್ಯದ ಮೂಲಮಾದರಿಯನ್ನು ಮಾಡ್ಯುಲರ್ ನೆಲದ ಚಪ್ಪಡಿಗಳಲ್ಲಿ ಪ್ರದರ್ಶಿಸಿದ್ದಾರೆ.

ಇದಕ್ಕೆ ಕಾಂಕ್ರೀಟ್ ಪರ್ಯಾಯಗಳಿಗಿಂತ ಶೇ.90 ರಷ್ಟು ಕಡಿಮೆ ಉಕ್ಕಿನ(ಕಬ್ಬಿಣ) ಸಾಮಗ್ರಿಗಳ ಅಗತ್ಯವಿರುತ್ತದೆ ಮತ್ತು ಒತ್ತಡದಲ್ಲಿ ಅಷ್ಟೊಂದು ಬೇಗ ಬಿರುಕುಗೊಳ್ಳದೇ ಸುರಕ್ಷಿತವಾಗಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿ ದ್ದಾರೆ.

ಮತ್ತೊಂದೆಡೆ,ಈ ಸ್ವಯಂ-ಗುಣಪಡಿಸುವ ಕಾಂಕ್ರೀಟ್ ಮೂಲಸೌಕರ್ಯದ ಬಾಳಿಕೆಗೆ ಒತ್ತುಕೊಡುತ್ತದೆ. ಕಾಲಾ ನಂತರದಲ್ಲಿ ರೂಪುಗೊಳ್ಳುವ ಬಿರುಕುಗಳನ್ನು ಸ್ವಯಂಚಾಲಿತವಾಗಿ ಸರಿಪಡಿಸುವ ಸಾಮರ್ಥ್ಯದೊಂದಿಗೆ ತುಂಬಿದ ಈ ನವೀನ ವಸ್ತುವು ವಿಶೇಷ ಏಜೆಂಟ್‌ಗಳನ್ನು ಒಳಗೊಂಡಿರುತ್ತದೆ- ಉದಾಹರಣೆಗೆ ಸುಣ್ಣದ ಕಲ್ಲುಗಳನ್ನು ಉತ್ಪಾದಿ ಸುವ ಬ್ಯಾಕ್ಟೀರಿಯಾ ಅಥವಾ ಹೀಲಿಂಗ್ ಏಜೆಂಟ್ಗಳಿಂದ ತುಂಬಿದ ಮೈಕ್ರೊಕ್ಯಾಪ್ಸುಲ್‌ಗಳು-ಅವುಗಳು ಬಿರುಕು ಗೊಂಡಾಗ ಸಕ್ರಿಯಗೊಳಿಸಲ್ಪಡುತ್ತವೆ. ಈ ಏಜೆಂಟ್ ಗಳು ನಂತರ ಬಿರುಕುಗಳನ್ನು ತುಂಬಲು ಅವಕ್ಷೇಪಿಸು ತ್ತವೆ, ಅವುಗಳನ್ನು ಪರಿಣಾಮಕಾರಿಯಾಗಿ ಮುಚ್ಚುತ್ತವೆ; ನೀರು ಮತ್ತು ಇತರ ಕ್ಷೀಣಿಸುವ ಅಂಶಗಳಿಂದ ಉಂಟಾಗುವ ಹಾನಿಗಳನ್ನು ತಡೆಯುತ್ತವೆ.

ಈಗ ಭಾರತದ ದೊಡ್ಡ ಮಾರುಕಟ್ಟೆಗಳಲ್ಲಿ ಮಾತ್ರ ಸಿಗುತ್ತಿರುವ ಈ ‘ಶುಗರ್‌ಕ್ರೀಟ್’ ಮುಂದೆ ಸಾಮಾನ್ಯ ಮಾರುಕಟ್ಟೆ ಗಳಲ್ಲೂ ಸಿಗಬಹುದು.

ಇದನ್ನೂ ಓದಿ: Gururaj Kulkarni: ಅರ್ಧ ದಿನದ ಗಣಪ