ಚಿಕ್ಕಬಳ್ಳಾಪುರ : ಶಕ್ತಿ ಯೋಜನೆಯಡಿ ವಿಕಲಚೇತನರಿಗೆ ಉಚಿತ ಬಸ್‌ಪಾಸ್ ವಿತರಣೆ ಸೇರಿದಂತೆ ಇನ್ನಿತರೆ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜ.೨ರಂದು ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ವಿಕಲಚೇತನ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಹಲವು ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಲಿವೆ ಎಂದು ಕೆವಿಎಸ್‌ನ ಬಿ.ಕಿರಣ್ ನಾಯಕ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಹಿಳೆಯ ರಿಗೆ ಉಚಿತ ಸಾರಿಗೆ ವ್ಯವಸ್ಥೆ ಒದಗಿಸಿರುವ ರಾಜ್ಯಸರ್ಕಾರವು ಆದ್ಯತೆ ಮೇರೆಗೆ ವಿಕಲಚೇತನರಿಗೆ ಉಚಿತ ಬಸ್‌ಪಾಸ್ ವಿತರಿಸುವ ಬದಲಿಗೆ ಕೇವಲ ೧೦೦ ಕಿ.ಮೀ ವ್ಯಾಪ್ತಿಯ ಬಸ್‌ಪಾಸ್ ಪಡೆಯಲು ಜ.01ರಿಂದ 650 ರೂ ನಿಗಧಿಗೊಳಿಸಿ ನೋಂದಾಯಿಸಿಕೊಳ್ಳಲು ಸೂಚಿಸಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಕಲಾಂಗತೆಗೆ ತಕ್ಕಂತೆ ಗರಿಷ್ಠ 1400 ರೂಗಳವರೆಗೆ ಪಿಂಚಣಿ ನೀಡುತ್ತಿರುವ ರಾಜ್ಯಸರ್ಕಾರಕ್ಕೆ ಬಡವ ಶ್ರೀಮಂತ ರೆನ್ನದೆ ಮಹಿಳೆಯರ ಖಾತೆಗೆ 2 ಸಾವಿರ ರೂಗಳನ್ನು ತುಂಬುತ್ತಿರುವ ಯೋಜನೆ ವ್ಯಾಪ್ತಿಗೆ ವಿಕಲಚೇತನರು, ಲೈಗಿಂಕ ಅಲ್ಪಸಂಖ್ಯಾತರು, ಹೆಚ್‌ಐವಿ ಪೀಡಿತರನ್ನು ಪರಿಗಣಿಸದಿರುವುದು ದುರಂತ. ಇನ್ನಾದರೂ ಸರ್ಕಾರ ವಿಕಲಚೇತನ ರನ್ನು ಕಡೆಗಣಿಸುವ ಮನಸ್ಥಿತಿಯಿಂದ ಹೊರಬರಬೇಕಿದೆ ಎಂದು ಆಗ್ರಹಿಸಿದರು.
ಇನ್ನು ಸರ್ಕಾರಿ ಬಸ್‌ಗಳಲ್ಲಿ ವಿಕಲಚೇತನರಿಗೆ ಆಸನಗಳನ್ನು ಮೀಸರಿಸಿದ್ದರೂ ಶಕ್ತಿ ಯೋಜನೆಯಿಂದ ಬಸ್‌ಗಳು ಮಹಿಳೆಯರಿಂದ ತುಂಬಿ ತಳುಕುತ್ತಿರುವುದರಿಂದ ವಿಕಲಚೇತನರು ಪರದಾಡುವ ಸ್ಥಿತಿಯಿದೆ. ಇನ್ನು ಸರ್ಕಾರದ ಆದೇಶದಂತೆ ಬಸ್‌ಪಾಸ್‌ಗಾಗಿ ಆನ್‌ಲೈನ್ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಲು ವಿಕಲಚೇತನರೆಲ್ಲರಿಗೂ ಸಾಧ್ಯವಾಗುವುದಿಲ್ಲ ಎಂದು ನುಡಿದರು.
ಸರ್ಕಾರವು ವಿಕಲಚೇತನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಉವಿತ ಸಾರಿಗೆ ವ್ಯವಸ್ಥೆ ಒದಗಿಸುವುದು, ಪಿಂಚಣಿ, ನಿವೇಶನಗಳ ವಿತರಣೆ ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು, ವಿಕಲಚೇತನರು ಪ್ರತಿಭಟನೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಂದು ಹೇಳಿದರು.
ಒಕ್ಕೂಟದ ವೆಂಕಟಶಿವಪ್ಪ, ವೆಂಕಟರೆಡ್ಡಿ, ಕೆ.ಸಿ.ಮಮತ, ಟಿ.ಎಂ.ಲಕ್ಷ್ಮೀ, ಸೌಭಾಗ್ಯಮ್ಮ, ನರಸಿಂಹಮೂರ್ತಿ, ಎಚ್.ಎಸ್.ಕೃಷ್ಣಪ್ಪ, ಎಸ್.ಮುರಳೀಧರ್, ಕೆ.ಲಕ್ಷಿöÃ ಇದ್ದರು.