ಬಿಜೆಪಿ ಮಾಜಿ ಶಾಸಕ ಎನ್ ಮಹೇಶ್ ಭೇಟಿ : ಪ್ರತಿಮೆ ವಿವಾದ ಬಗೆಹರಿಯದಿದ್ದರೆ ಮುಂದಿನ ನಡೆ ಬೇರೆ ಹಂತ ಇರುತ್ತದೆ
ಚಿಂತಾಮಣಿ : ಚಿಂತಾಮಣಿ ನಗರ ಭಾಗದ ಸರಕಾರಿ ಶಾಲಾ ಆವರಣದಲ್ಲಿ ನಿರ್ಮಾಣ ಮಾಡಿರುವ ಅಂಬೇಡ್ಕರ್ ಪ್ರತಿಮೆ ವಿವಾದ ದಿನೇ ದಿನೇ ಹೆಚ್ಚಾಗುತ್ತಿದ್ದು 9ನೇ ದಿನವಾದ ಮಂಗಳವಾರ ಕೊಳ್ಳೇಗಾಲದ ಮಾಜಿ ಬಿಜೆಪಿ ಶಾಸಕ ಎನ್.ಮಹೇಶ್ ಭಾಗವಹಿಸಿದ್ದು ಇದೀಗ ಅದು ರಾಜಕೀಯ ತಿರುವ ಪಡೆದಿದೆ.
ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಅಂಬೇಡ್ಕರ್ ಪ್ರತಿಮೆಗೆ ಸುತ್ತಿರುವ ಕೊಳಕು ಬಟ್ಟೆಯನ್ನು ತೆರವು ಗೊಳಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ಮಾಡುವ ಎಚ್ಚರಿಕೆ ಕೊಟ್ಟಿದ್ದಾರೆ.
ಇದರ ಬೆನ್ನಲೆ ಇಂದು ಮಾಜಿ ಸಚಿವರು ಹಾಗೂ ಬಿಜೆಪಿ ಪಕ್ಷದ ರಾಜ್ಯ ಮುಖಂಡರಾದ ಎನ್ ಮಹೇಶ್ ರವರು ೯ನೇ ದಿನ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಹಾಗೂ ಅಂಬೇಡ್ಕರ್ ಪ್ರತಿಮೆ ಇಟ್ಟಿರುವ ನಿಷೇಧಿತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನಂತರ ಮಾತನಾಡಿರುವ ಅವರು ಎರಡು ದಿನಗಳಲ್ಲಿ ಅಂಬೇಡ್ಕರ್ ಪ್ರತಿಮೆ ವಿವಾದ ಬಗೆಹರಿಯದಿದ್ದರೆ ಹೋರಾಟದ ಹಂತ ಬದಲಾಗುತ್ತದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಅವರ ವಿರುದ್ಧ ಗುಡಿಗಿದ ಅವರು ಉನ್ನತ ಶಿಕ್ಷಣ ಸಚಿವರು ವಿದ್ಯಾ ವಂತರಾಗಿ ಉನ್ನತ ಶಿಕ್ಷಣ ಸಚಿವರು ಆಗಿದ್ದರಂದ್ರೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕಾರಣ ಅಂಬೇಡ್ಕರ್ ಪ್ರತಿಮೆ ಇಟ್ಟಿರುವ ಸ್ಥಳಕ್ಕೆ ಹೋದಾಗ ಪೊಲೀಸರು ತಡೆದರೂ ಎಂಬುದು ವಿವಾದವಲ್ಲ ಪೊಲೀಸರು ಸಚಿವರ ಕೈ ಗೊಂಬೆಗಳಾಗಿ ಕೆಲಸ ಮಾಡುತ್ತಿರುವದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸರ್ಕಾರಿ ಶಾಲಾ ಆವರಣದಲ್ಲಿ ಅಧಿಕೃತ ಅಂಬೇಡ್ಕರ್ ಪ್ರತಿಮೆ ಇಡಲು ತೊಂದರೆ ಮಾಡಿದ ಕಾರಣ ಯಾರೋ ಅನಧಿಕೃತವಾಗಿ ಅಂಬೇಡ್ಕರ್ ಪ್ರತಿಮೆ ಇಟ್ಟಿದ್ದಾರೆ,ಅಧಿಕೃತವಾಗಿ ಶಿಕ್ಷಣ ಇಲಾಖೆಯಿಂದ ಅಂಬೇಡ್ಕರ್ ಪ್ರತಿಮೆ ಇಡಲು ಅಪ್ಪಣೆ ನೀಡಲು ಅವಕಾಶ ಕಲ್ಪಿಸ್ಸಲ್ಲ ಎಂದು ಗೊತ್ತಾದಾಗ ಅನಧಿಕೃತವಾಗಿ ಇಟ್ಟಿದ್ದಾರೆ ಎಂದು ತಾಕತ್ತಿದ್ದರೆ ಸಚಿವರು ಜಿಲ್ಲಾ ಆಡಳಿತ ಅಂಬೇಡ್ಕರ್ ಪ್ರತಿಮೆಯನ್ನು ತೆಗೆಸಲಿ ಎಂದು ಸವಾಲ್ ಹಾಕಿದರು.
ಈ ಸಂದರ್ಭದಲ್ಲಿ ವಿಜಯ ನರಸಿಂಹ, ಜನಾರ್ಧನ್ ಬಾಬು,ವಕೀಲ ಗೋಪಿ,ಕವಾಲಿ ವೆಂಕಟರವಣಪ್ಪ, ಎಂ.ವಿ ರಾಮಪ್ಪ, ತಳಗವಾರ ರಮೇಶ್, ಜೈಪಾಲ್, ಸಿ ಹೆಚ್ ಶಂಕರ್, ಮದೇನಹಳ್ಳಿ ರಮೇಶ್, ಜಂಗಮಶಿಗೇ ಹಳ್ಳಿ ದೇವರಾಜ್, ವೆಂಕಟರಾಯಪ್ಪ, ಶ್ರೀನಿವಾಸ್,ನಾರಾಯಣಸ್ವಾಮಿ, ಬೈರಪ್ಪ, ಎಂ ಆರ್ ನಾರಾಯಣಸ್ವಾಮಿ, ಜನಾ, ರಾಜೇಂದ್ರ ಬಾಬು,ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.