ಲಖನೌ: ಕೋತಿಯೊಂದು ಚಪಾತಿ ಲಟ್ಟಿಸುವ ಪಾತ್ರೆ ತೊಳೆಯುವ, ರೊಟ್ಟಿ ಮಾಡುವ ಇತ್ಯಾದಿ ದಿನ ನಿತ್ಯದ ಮನೆ ಕೆಲಸ ಮಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.ಈ ಮೂಲಕ ಈ ವಿಡಿಯೊ ನೋಡುಗರನ್ನೇ ಮಂತ್ರ ಮುಗ್ಧರನ್ನಾಗಿಸುತ್ತದೆ. ಕೋತಿಯ ಈ ವಿಡಿಯೊ ನೋಡುಗರ ಗಮನ ಸೆಳೆದಿದ್ದು ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ(Viral Video)
ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ರಾಣಿ ಎಂಬ ಕೋತಿಯ ಚಟುವಟಿಕೆ ಕಂಡು ಜನರು ಆಶ್ಚರ್ಯ ಪಟ್ಟಿದ್ದಾರೆ. ವಿಡಿಯೊದಲ್ಲಿ ಕೋತಿ ರೊಟ್ಟಿ ಮಾಡುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ದಿನ ನಿತ್ಯದ ಎಲ್ಲ ಮನೆಕೆಲಸಗಳನ್ನು ಮಾಡುತ್ತಿದೆ. ಮಂಗವಾಗಿ ಹುಟ್ಟಿದ್ದರೂ ತನ್ನ ಮಾನವೀಯ ಗುಣ ಮತ್ತು ಸಹಾಯ ಮಾಡುವ ಗುಣದಿಂದಾಗಿ ಇಡೀ ಹಳ್ಳಿಯಲ್ಲಿ ಈ ಕೋತಿ ಅಚ್ಚು ಮೆಚ್ಚಿನವಳಾಗಿದ್ದಾಳೆ.
#WATCH | यूपी के रायबरेली जिले में रानी नाम की बंदरिया का एक वीडियो सोशल मीडिया पर वायरल हो रहा है। वीडियो में बंदरिया रोटी बनाने से लेकर बर्तन धोने समेत घर के काम करते दिख रही है। वीडियो देख हर कोई हैरान है।#Raibareli pic.twitter.com/3UWY4izZ6N
— Hindustan (@Live_Hindustan) December 30, 2024
ರಾಣಿ ಎಂಬ ಕೋತಿ 8 ವರ್ಷಗಳ ಹಿಂದೆಯೇ ಈ ಗ್ರಾಮಕ್ಕೆ ಆಗಮಿಸಿ ಅಶೋಕ್ ಎನ್ನುವವರ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ದಿನ ನಿತ್ಯ ಪಾತ್ರೆಗಳನ್ನು ತೊಳೆಯುವುದು, ಚಪಾತಿ ಲಟ್ಟಿಸಿ ಕೊಡುವುದು ಮಸಾಲೆಗಳನ್ನು ರುಬ್ಬುವುದು ಇತ್ಯಾದಿ ಕೆಲಸದಲ್ಲಿ ನಿರತಳಾಗಿದ್ದಾಳೆ.ಮನೆಯ ಹೆಂಗಸರು ಅಡುಗೆ ಮಾಡುವಾಗಲೆಲ್ಲ ಅವರಿಗೆ ಸಹಾಯ ಮಾಡಲು ರಾಣಿ ಉತ್ಸಾಹದಿಂದ ಸೇರುತ್ತಾಳೆ.
ಈ ರಾಣಿ ಅಶೋಕ್ ಮನೆಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಯ ಇತರ ಮನೆಗಳಿಗೆ ಭೇಟಿ ಅಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತಾಳೆ. ಇಡೀ ಗ್ರಾಮ ರಾಣಿಯನ್ನು ಆರಾಧಿಸುತ್ತದೆ. ಅವಳು ಎಲ್ಲಿಗೆ ಹೋದರೂ ಜನರು ಅವಳನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಇದೀಗ ಈ ಕೋತಿಯ ಮನುಷ್ಯರಂತೆ ವರ್ತಿಸುವ ನಡವಳಿಕೆ ಕಂಡು ಜನರೇ ಶಾಕ್ ಆಗಿದ್ದಾರೆ. ರಾಣಿಯ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಯೂಟ್ಯೂಬ್‌ನಲ್ಲಿ ರಾಣಿಯ ವಿಡಿಯೊಗಳ ಮೂಲಕ ಕುಟುಂಬವು 5 ಲಕ್ಷ ರೂಪಾಯಿಗಳನ್ನು ಗಳಿಸಿದೆ ಎಂದು ಆ ಮನೆಯ ವ್ಯಕ್ತಿ ಅಶೋಕ್ ಉಲ್ಲೇಖಿಸಿದ್ದಾರೆ. ಇದೀಗ ಕೋತಿಯ ವೈರಲ್ ವಿಡಿಯೊ ಎಲ್ಲರ ಗಮನ ಸೆಳೆಯುತ್ತಿದ್ದು ಈ ವಿಡಿಯೊ ನೆಟ್ಟಿಗರನ್ನು ಸಖತ್ ರಂಜಿಸುತ್ತಿದೆ.
ಇದನ್ನು ಓದಿ:BBK 11: ಸೇಡಿಗೆ ಸೇಡು: ಬಿಗ್ ಬಾಸ್ ಮನೆಯಲ್ಲಿ ರಜತ್ಗೆ ಬೆವರಿಳಿಸಿದ ಚೈತ್ರಾ ಕುಂದಾಪುರ