ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾಗಿರುವ ಟಾಟಾ ಮೋಟಾರ್ಸ್ 2025ರ ಜನವರಿ 1ರಿಂದ ತನ್ನ ಟ್ರಕ್‌ಗಳು ಮತ್ತು ಬಸ್ ಪೋರ್ಟ್‌ಫೋಲಿಯೋದ ಬೆಲೆಯನ್ನು ಶೇ.2ರಷ್ಟು ಹೆಚ್ಚಿಸು ತ್ತಿರುವುದಾಗಿ ಇಂದು ಘೋಷಿಸಿದೆ.
ವಾಹನ ತಯಾರಿಕಾ ವೆಚ್ಚದಲ್ಲಿನ ಏರಿಕೆ ಉಂಟಾಗಿರುವುದರಿಂದ ಅದನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡಲಾ ಗಿದೆ. ವೈಯಕ್ತಿಕ ಮಾಡೆಲ್ ಮತ್ತು ವೇರಿಯೆಂಟ್ ಮೇಲೆ ಬೆಲೆ ಹೆಚ್ಚಳ ನಿರ್ಧಾರವಾಗಲಿದ್ದು, ಟ್ರಕ್ ಗಳು ಮತ್ತು ಬಸ್ ಗಳ ಸಂಪೂರ್ಣ ಶ್ರೇಣಿಯ ಉತ್ಪನ್ನಗಳ ಬೆಲೆ ಜಾಸ್ತಿಯಾಗಲಿದೆ.