ಇಂಡಿ: ಈ ಭಾಗ ಶರಣ ,ಸಂತ ಮಹಾಂತರ ಹೃದಯವಂತರ ಬೀಡು ಮೇತ್ರಿ ಕಾಕಾ ನಂತಹ ಪುಣ್ಯವಂತರು ನ್ಯಾಯ ,ನೀತಿ, ಧರ್ಮದ ಬೆಳಕನ್ನು ಹಚ್ಚಿ ಜನರಿಗೆ ಒಳ್ಳೇಯ ಸಂಸ್ಕಾರ ನೀಡಿದ್ದಾರೆ ಇವರ ಆದರ್ಶಗಳು ಸಮಾಜ ಮುಖಿ ಕೆಲಸಗಳು ಇತರರಿಗೆ ಪ್ರೇರಣೆಯಾಗಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಡವಲಗಾ ಜೋಡ ಗುಡಿ ಹತ್ತಿರ ಸಮಾಜ ಮುಖಿ ಮೇತ್ರಿಕಾಕಾ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶ ಬೇರೆ ದೇಶಗಳು ಮ್ಯಾಕ್ಯಾನೀಜಮ್ ಬದುಕು ಕಂಟಿಕೊAಡರೆ ಭಾರತೀಯರಾದ ನಾವುಗಳು ಹೃದಯಶ್ರೀಮಂತಿಕೆಯ ಬದುಕು ಕಟ್ಟಿಕೊಂಡು, ಹಿಂದಿನ ಪೂರ್ವಜರು ನೀಡಿದ ಸಂಸ್ಕಾರ ಸ್ಮರಿಸಿ ಬದಕುತ್ತಿದ್ದೇವೆ. ನಡೇದಾಡುವ ದೇವರಾದ ಶ್ರೀಸಿದ್ದೇಶ್ವರ ಶ್ರೀಗಳು , ಭಂಥನಾಳದ ಶ್ರೀಸಂಗನಬಸವ ಮಹಾಸ್ವಾಮಿಗಳು ಜ್ಞಾನದ ಬೆಳಕು ನೀಡಿದ್ದಾರೆ. ಭೀಮಾತೀರ ಎಂಬ ಹೆಸರು ಇಂದು ಹೋಲಾಡಿಸಿ ಲಿಂಬೆ ನಾಡು ಹೃದಯವಂತರ ಬೀಡು ಎಂದಾಗಿದೆ ಶ್ರೀಮೇತ್ರಿ ಕಾಕಾ ಅವರ ಆದರ್ಶಗಳು ನಮ್ಮೇಲ್ಲರಿಗೂ ಶ್ರೀರಕ್ಷೆಯಾಗಲಿ ಎಂದರು.
ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ ಮನುಷ್ಯನ ಹುಟ್ಟು ಹಾಗೂ ಸಾವು ಸಹಜ ಇವುಗಳ ನಡುವೆ ಸಮಾಜ ಮುಖಿಯಾಗಿ ದೀನ, ದುರ್ಬಲರ ನೊಂದವರ ಧ್ವನಿಯಾಗಿ ಒಳ್ಳೇಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಜನರ ಪ್ರೀತಿಗೆ ಪಾತ್ರರಾದ ವ್ಯಕ್ತಿಗಳ ಸಾಲಿನಲ್ಲಿ ಮೇತ್ರಿ ಕಾಕಾ ಮಾತ್ರ , ಜಿಲ್ಲೆಯಲ್ಲಿ ರಮೇಶ ಜಿಗಜಿಣಗಿಯಂತ ಆದರ್ಶ ರಾಜರಾಣಿಯನ್ನು ಬೆಳೆಸಿರುವುದು ಸಣ್ಣದೇನಿಲ್ಲ ಇಂತಹ ಅನೇಕ ಬಡವರಿಗೆ ಮೆಲಕ್ಕೇತ್ತಿ ದ್ದಾರೆ ಇವರ ಅನುಕರಣೆ ಇರಲಿ ಎಂದರು.
ಗ್ರಂಥ ಬಿಡುಗಡೆ ಮಾಡಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ ನಾನು ರಾಜಕಾರಣದ ಕನಸು ಕಂಡವನಲ್ಲ ನನಗೆ ಮಲಕಣ್ಣಾಸಾಹುಕಾರ ಇಂಡಿ ತಾಲೂಕಿಗೆ ಪರಿಚಯ ಮಾಡಿದಾಗ ಮೇತ್ರಿಸಾಹುಕಾರ ಹಲಸಂಗಿ ಪಟೇಲ, ನಡಗೇರಿ ಕಾಕಾ, ಶ್ಯಾಮರಾಯರು ರಾಜಕೀಯವಾಗಿ ಬೆಳೆಸಿದ್ದಾರೆ ಇವರನ್ನು ನನ್ನ ಸಾವಿನ ಕೊನೆಗಳಿಗೆಯಲ್ಲಿ ಮರೆಯುವುದಿಲ್ಲ ಎಂದರು.
ಸಂಸದ ಪಿ.ಸಿ ಗದ್ದಿಗೌಡರ, ಮಾಜಿ ಸಚಿವ ಎಸ್. ಕೆ ಬೆಳುಬ್ಬಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಗ್ರಂಥ ಸಂಪಾದಕ ವ್ಹಿ.ಡಿ ಐಹೊಳಿ, ಡಾ.ವ್ಹಿ.ಎಂ ಭಾಗಾಯತ್ ಪ್ರಾಸ್ತಾವಿಕ ಮಾತನಾಡಿದರು. ಮುರುಘಾಮಠದ ಡಾ.ಜಯಬಸವಕುಮಾರ ಮಹಾಸ್ವಾಮಿಗಳು, ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಅಭಿನವ ಪುಂಡಲಿAಗ ಮಹಾಶಿವಯೋಗಿಗಳು, ಅಡವಿಲಿಂಗ ಮಹಾರಾಜರು, ಗುರುಪಾದೇಶ್ವರ ಶಿವಾಚಾರ್ಯರು, ಶ್ರೀರಾಚೋಟೇಶ್ವರ ಶಿವಾಚಾರ್ಯರು, ಶಂಕರಾನಂದ ಸ್ವಾಮಿಗಳು, ಸುಗಲಾದೇವಿ ತಾಯಿ, ಮಹಾಂತೇಶ ಹಿರೇಮಠ, ಸಿದ್ದಯ್ಯಾ ಹಿರೇಮಠ, ಶಿವಾನಂದ ಶಾಸ್ತ್ರಿಗಳು ಸಾನಿಧ್ಯ ವಹಿಸಿದರು.
ಬಾಬುಸಾಹುಕಾರ ಮೇತ್ರಿ, ಜಿ.ಎಸ್ ನ್ಯಾಮಗೌಡ, ಬಿ.ಜಿ ಪಾಟೀಲ, ಮಾಜಿ ಶಾಸಕ ರಮೇಶ ಭೂಸನೂರ, ಸಿದ್ದಣ್ಣಾ ಸಾಹುಕಾರ ಹತ್ತಳ್ಳಿ, ಭೀಮು ಗಡ್ಡದ, ನಾಗುಗೌಡ ಪಾಟೀಲ, ಬಿ.ಎಸ್ ಪಾಟೀಲ ಯಾಳಗಿ, ಕಲ್ಲನಗೌಡ ಪಾಟೀಲ, ಗುರುಶಾಂತ ನಿಡೋಣಿ, ಅಶೋಕ ವಾರದ,ತಮ್ಮಣ್ಣಾ ಪೂಜಾರಿ, ಎ.ಎಸ್ ಗಾಣಿಗೇರ ವೇದಿಕೆಯಲ್ಲಿದ್ದರು.
ಸಮಾಜ ಮುಖಿ ಶಿವಗೊಂಡಪ್ಪ ರಾಮಚಂದ್ರ ಮೇತ್ರಿಯವರ ಸಂಸ್ಮರಣ ಗ್ರಂಥ ಹಾಗೂ ಕವನ ಸಂಕಲನ ಪುಸ್ತಕ ಬಿಡುಗಡೆಯನ್ನು ಸಂಸದ ರಮೇಶ ಜಿಗಜಿಣಗಿ ಶಾಸಕ ಯಶವಂತರಾಯಗೌಡ ಪಾಟೀಲ, ಪಿ.ಸಿ ಗದ್ದಿಗೌಡರ, ಸಚಿವ ಶಿವಾನಂದ ªಪಾಟೀಲ ಬಿಡುಗಡೆ ಮಾಡಿದರು.