ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ
ಅಹಿತಕರ ಘಟನೆಗಳಿಲ್ಲದೆ ಸುಗಮವಾಗಿ ಮುಗಿದ ಪೂರ್ವಭಾವಿ ಮರು ಪರೀಕ್ಷೆ
ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಭಾನುವಾರ ನಡೆದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರು ಪರೀಕ್ಷೆಗೆ ಒಟ್ಟು ೫೭೨೦ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು ಈ ಪೈಕಿ ಬೆಳಗಿನ ಪಾಳಿಯಲ್ಲಿ ಪತ್ರಿಕೆ ೧ಕ್ಕೆ ೨೯೩೪ ಪರೀಕ್ಷೆ ಬರೆದರೆ ಮದ್ಯಾಹ್ನ ನಡೆದ ಪತ್ರಿಕೆ ೨ರಲ್ಲಿ-೨೮೮೯ ಮಂದಿ ಯಶಸ್ವಿಯಾಗಿ ಪರೀಕ್ಷೆ ಬರೆದು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಒಡ್ಡಿದ್ದಾರೆ.
ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರದಲ್ಲಿ ಒಟ್ಟು ೧೨ ಪರೀಕ್ಷಾ ಕೇಂದ್ರಗಳಲ್ಲಿ ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಮರುಪರೀಕ್ಷೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಒಟ್ಟು ನೊಂದಾ ಯಿತ ೫೭೨೦ ಅಭ್ಯರ್ಥಿಗಳ ಪೈಕಿ ೧೦ ರಿಂದ ೧೨ ಗಂಟೆಯವರೆಗೆ ನಡೆದ ಬೆಳಗಿನ ಪಾಳಿಯಲ್ಲಿ -೨೯೩೪ ಮಂದಿ ಹಾಜರಾಗಿ ಪರೀಕ್ಷೆ ಬರೆದರೆ, ೨೭೮೬ ಮಂದಿ ಗೈರುಹಾಜರಾಗಿದ್ದರು.
ಮದ್ಯಾಹ್ನ ೨ ಗಂಟೆಯಿAದ ೪ ಗಂಟೆಯವರೆಗೆ ನಡೆದ ಪತ್ರಿಕೆ ೨ ರಲ್ಲಿ- ೨೮೮೬ ಮಂದಿ ಹಾಜರಾಗಿ ಪರೀಕ್ಷೆ ಬರೆದರೆ,೨೮೩೧ ಮಂದಿ ಗೈರು ಹಾಜರಾಗುವ ಮೂಲಕ ಪರೀಕ್ಷೆಯಿಂದ ಹೊರಗುಳಿದರು.
ಕರ್ನಾಟಕ ಲೋಕಸೇವಾ ಆಯೋಗ ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಯನ್ನು ಕಟ್ಟು ನಿಟ್ಟಾಗಿ ನಡೆಸಲು ನೀಡಿದ್ದ ನಿಯಮಗಳನುಸಾರ ಜಿಲ್ಲಾಡಳಿತ ಪರೀಕ್ಷೆಗೆ ಬೇಕಾದ ಸಕಲ ಸಿದ್ದತೆ ಮಾಡಿಕೊಂಡಿದ್ದು ಎಲ್ಲಾ ಪರೀಕ್ಷಾ ಕೇಂದ್ರಗಳ ೨೦೦ ಮೀಟರ್ ಸುತ್ತಳತೆಯಲ್ಲಿ ೧೪೪ ಸೆಕ್ಷನ್ ಜಾರಿ ಮಾಡಲಾಗಿತ್ತು. ಅಭ್ಯರ್ಥಿಗಳಿಗೆ ಕುಡಿಯುವ ನೀರು,ಶೌಚಾಲಯ,ಗಾಳಿ ಬೆಳಕು, ಮೇಜು ಕುರ್ಚಿ ಸೇರಿದಂತೆ ಸುಗಮವಾಗಿ ಪರೀಕ್ಷೆ ಬರೆಯಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಧ್ಯತೆ ನೀಡಲಾಗಿತ್ತು.
ಪ್ರತಿ ೨ ಪರೀಕ್ಷಾ ಕೇಂದ್ರಕ್ಕೆ ಒಬ್ಬೊಬ್ಬ ತಹಶೀಲ್ದಾರ್ ಅವರನ್ನು ರಿಟರ್ನಿಂಗ್ ಅಧಿಕಾರಿಯನ್ನಾಗಿ ನೇಮಿಸಿದ್ದು ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಪ್ರಶ್ನೆಪತ್ರಿಕೆ, ಉತ್ತರಪತ್ರಿಕೆಗಳನ್ನು ಆಯಾಯಾ ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ರವಾನಿಸಿ ಎಲ್ಲೂ ಲೋಪವಾಗದಂತೆ ಜಿಲ್ಲಾಡಳಿತ ನೋಡಿಕೊಂಡಿತ್ತು.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಜಾಮರ್ ಅಳವಡಿಸಲಾಗಿದ್ದು,ಅಭ್ಯರ್ಥಿಗಳನ್ನು ಲೋಹಶೋಧಕ ಯಂತ್ರಗಳಿAದ ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗಿತ್ತು.ವಿವಾಹಿತ ಹೆಣ್ಣು ಮಕ್ಕಳು ತಾಳಿ ಕಾಲುಂಗುರ ಹೊರತುಪಡಿಸಿ ಬೇರೆ ಯಾವುದೇ ಆಭರಣಗಳನ್ನು ಧರಿಸದಂತೆ ಆಯೋಗ ನಿರ್ದೇಶನ ನೀಡಿದ್ದರಿಂದ ಪರೀಕ್ಷೆ ಹಾಜರಾಗುವ ಅಭ್ಯರ್ಥಿಗಳು ಸ್ವಯಂಪ್ರೇರಣೆಯಿAದ ಇವುಗಳನ್ನು ತೆಗೆದು ಮನೆಯಲ್ಲಿಯೇ ಇಟ್ಟು ಬಂದಿದ್ದರು. ಪುರುಷ ಅಭ್ಯರ್ಥಿಗಳು ಅರ್ಧತೋಳಿನ ಶರ್ಟ್ ಧರಿಸಿ ಪರೀಕ್ಷೆ ಬರೆದರು.
ಜಿಲ್ಲಾ ಕೇಂದ್ರದಲ್ಲಿ ನಡೆದ ಮರು ಪರೀಕ್ಷೆಯು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಇಲ್ಲದಂತೆ ಅಚ್ಚುಕಟ್ಟಾಗಿ, ಪಾರದರ್ಶಕವಾಗಿ ಸುಗಮವಾಗಿ ನಡೆಯಿತು.ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಪಿಎನ್.ರವೀಂದ್ರ, ಅಪರ ಜಿಲ್ಲಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲಿನಲ್ಲಿ ಅಭ್ಯರ್ಥಿಗಳು ಅಚ್ಚುಕಟ್ಟಾಗಿ ಪರೀಕ್ಷೆಯನ್ನು ಬರೆದರು.
ಒಟ್ಟಾರೆ ಲೋಕಸೇವಾ ಆಯೋಗದ ಸೂಚಿತ ನಿರ್ದೇಶನದಂತೆ ಜಿಲ್ಲಾಡಳಿತ ಅತ್ಯಂತ ಯಶಸ್ವಿಯಾಗಿ ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಮರುಪರೀಕ್ಷೆ ನಡೆಸಿ ಸೈ ಎನಿಸಿಕೊಂಡಿದ್ದಲ್ಲದೆ ಅಭ್ಯರ್ಥಿ ಗಳ ಮೆಚ್ಚುಗೆಗೆ ಪಾತ್ರವಾಗಿದೆ.