Saturday, 17th May 2025

Naming Ceremony: ಕುವೆಂಪು ಜನ್ಮದಿನದಂದೇ ನೂತನ ಬಡಾವಣೆಗೆ ಕುವೆಂಪು ಹೆಸರು ನಾಮಕರಣ

ಚಿಕ್ಕಬಳ್ಳಾಪುರ: ದಿನ್ನೆ ಹೊಸಹಳ್ಳಿ ರಸ್ತೆಯಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತಕ್ಕೆ “”ರಾಷ್ಟ್ರಕವಿ ಕುವೆಂಪು ಬಡಾವಣೆ”” ಎಂದು ಹೊಸದಾಗಿ ನಾಮಕರಣ ಮಾಡಿ ನಾಮಫಲಕದ ಉದ್ಘಾಟನೆ  ಮಾಡುವ ಮೂಲಕ ಬಡಾವಣೆಯ ನಿವಾಸಿಗಳು ಸಿಹಿ ಹಂಚಿ ಸರಳವಾಗಿ ಕುವೆಂಪು ಜನ್ಮದಿನವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತಾಡಿದ ಸಾಹಿತಿ ಪಾತಮುತ್ತಕದಹಳ್ಳಿ ಚಲಪತಿಗೌಡ ಕವಿಯಾಗಿ ಸಾಹಿತಿಯಾಗಿ  ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿ ಹತ್ತು ಹಲವು ಪ್ರಥಮಗಳನ್ನು ದಾಖಲಿಸಿರುವ ಕೆ.ವಿ.ಪುಟ್ಟಪ್ಪ ಕು.ವೆಂ.ಪು ಎಂಬ ಕಾವ್ಯ ನಾಮದಿಂದಲೇ ಖ್ಯಾತರಾಗಿದ್ದಾರೆ.ಅವರು ಜಗತ್ತಿಗೆ ನೀಡಿರುವ ಸಾಹಿತ್ಯರಾಶಿಯಲ್ಲಿ ಕೊಂಚವಾದರೂ ತಮ್ಮದಾಗಿಸಿ ಕೊಂಡು ಓದುವ ಮೂಲಕ ಅವರ ವೈಚಾರಿಕ ಜಗತ್ತಿಗೆ ನಾವು ಪ್ರವೇಶ ಮಾಡಬೇಕಿದೆ ಎಂದು ಕರೆ ನೀಡಿದರು.

ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀನಪ್ಪ ಮಾತನಾಡಿ ಕನ್ನಡದ ಮೇರುಕವಿಯಾದ ಕುವೆಂಪು ಅವರ ಹೆಸರನ್ನು ಈ ಬಡಾವಣೆಗೆ ಇಟ್ಟಿರುವುದು ನಿಜಕ್ಕೂ ಸಂತೋಷ ತರುವ ಸಂಗತಿಯಾಗಿದೆ. ಸಾಹಿತ್ಯದ ಮೂಲಕ ಕರುನಾಡಿಗಷ್ಟೇ ಅಲ್ಲದೆ ದೇಶಕ್ಕೆ ಮಾದರಿಯಾಗಿ ನಿಲ್ಲುವ ಕುವೆಂಪು ಅವರಂತೆ ಈ ಬಡಾವಣೆಯೂ ಕೂಡ ಮಾದರಿಯಾಗಿ ಅಭಿವೃದ್ಧಿ ಆಗಲಿ.ಇಲ್ಲಿಗೆ ಬೇಕಾದ ಕುಡಿಯುವ ನೀರು, ಬೀದಿ ದೀಪಗಳು, ಯುಜಿಡಿ ಸಂಪರ್ಕ, ಸ್ವಚ್ಛತೆ ಬಗ್ಗೆ ಮೊದಲನೇ ಆದ್ಯತೆ ನಮ್ಮ ಪಂಚಾಯಿತಿಯಿAದ ನೀಡಲಾಗುವುದೆಂದು ತಿಳಿಸಿದರು.

ಪ್ರಾಸ್ತಾವಿಕ ನುಡಿಗಳನ್ನು  ಆಡಿದ ಬಡಾವಣೆ ನಿವಾಸಿ ಬಿಜೆಪಿ ಮುಖಂಡ ವಿ. ಮಧುಚಂದ್ರ ಮಾತನಾಡಿ ಚಿಕ್ಕಬಳ್ಳಾ ಪುರ ನಗರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ನಮ್ಮ ಬಡಾವಣೆಗೆ ಬರುವ ನಾಗರಿಕರು, ಶಾಲಾ ಕಾಲೇಜು ಮಕ್ಕಳು, ಪೋಸ್ಟ್ ಆಫಿಸ್ ಹಾಗೂ ಇತರೆ ಇಲಾಖೆಯವರಿಗೆ, ಆಟೋ ಹಾಗೂ ಟ್ಯಾಕ್ಸಿ ಡ್ರೈವರ್‌ ಗಳಿಗೆ ಬಡಾವಣೆಯ ವಿಳಾಸವನ್ನು ತಿಳಿಸಲು ಬಾರಿ ಕಷ್ಟ ಪಡಬೇಕಾಗಿತ್ತು.ಸುಮಾರು ನಾಲ್ಕೈದು ವರ್ಷಗಳ ಹಿಂದೆ ಬಡಾವಣೆ ನಿವಾಸಿಗಳ ಹಿರಿಯ ನಾಗರಿಕರಾದ ನಿವೃತ್ತ ಪೋಲಿಸ್ ಇನ್ಸ್ಪೆಕ್ಟರ್ ದಿವಂಗತ ಹನುಮಂತಪ್ಪ ನವರು ಹಾಗೂ ನಿವೃತ್ತ ಶಿಕ್ಷಕರಾದ ದಿವಂಗತ ನಾಗೇಂದ್ರಪ್ಪ ಹಾಗೂ ಎಲ್ಲಾ ಬಡಾವಣೆ ನಿವಾಸಿಗಳು ಸರ್ವಾನು ಮತಿದಿಂದ ರಾಷ್ಟ್ರಕವಿ ಕುವೆಂಪು ಬಡಾವಣೆ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಿದ್ದರು. ಅವರನ್ನು ಸ್ಮರಣಿಸುತ್ತಾ ಈ ದಿನ ಕುವೆಂಪು ಅವರ ಜಯಂತಿಯAದೇ ನಮ್ಮ ಬಡಾವಣೆಗೆ ರಾಷ್ಟ್ರಕವಿ ಕುವೆಂಪು ಬಡಾವಣೆ ಎಂದು ನಾಮಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಕುವೆಂಪು ಹುಟ್ಟಿದ ದಿನದ ಅಂಗವಾಗಿ ತಿಪ್ಪೇನಳ್ಳಿ ಪಂಚಾಯಿತಿ ಸಹಕಾರದೊಂದಿಗೆ ಭಾನುವಾರ ಅಧಿಕೃತಕವಾಗಿ “”ರಾಷ್ಟ್ರಕವಿ ಕುವೆಂಪು ಬಡಾವಣೆ”” ಎಂದು ನಾಮಕರಣ ಮಾಡಿ ಉದ್ಘಾಟನೆ ಮಾಡಲು ಸಹಕಾರ ನೀಡಿದ ಪಂಚಾಯಿತಿ ಅಧ್ಯಕ್ಷರಿಗೆ ಸದಸ್ಯರಿಗೆ ಮತ್ತು ೬ ನೇ ವಾರ್ಡಿನ ನಗರಸಭೆ ಸದಸ್ಯರಾದ ರುಕ್ಮಿಣಿ ಮುನಿರಾಜು ರವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಶಶಿಕುಮಾರ್, ಶಿವಕುಮಾರ್, ಉಪಸಿತರಿದ್ದರು. ಹಿರಿಯ ಮುಖಂಡ ರಾದ ಕೃಷ್ಣಮೂರ್ತಿ ರವರು, ಬಡಾವಣೆಯ ನಾಗರಿಕರಾದ ಪೋಲಿಸ್ ನಾರಾಯಣಪ್ಪ, ಉಮೇಶ್, ಅರುಣ್ ಕುಮಾರ್, ಗೋಪಾಲ್, ಇಮ್ರಾನ್ ಪಾಷಾ, ಶಂಕರಪ್ಪ, ರಸುಲ್, ಲಾಯರ್ ವೆಂಕಟ್ ರೋಣಪ್ಪ, ವೆಂಕಟರಾಮ್, ಆನಂದ್ ರಾವ್ ಹಾಗೂ ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.