Saturday, 10th May 2025

Winter Travel Fashion Tips: ಚಳಿಗಾಲದ ಇಯರ್ ಎಂಡ್ ಟ್ರಾವೆಲ್ ಫ್ಯಾಷನ್ ಪ್ರೇಮಿಗಳಿಗೆ ಇಲ್ಲಿದೆ 5 ಸಿಂಪಲ್ ಐಡಿಯಾ

Winter Travel Fashion Tips

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಳಿಗಾಲದ ಇಯರ್ ಎಂಡ್ ಫ್ಯಾಷನ್‌ (Winter Travel Fashion Tips) ನೋಡಲು ಆಕರ್ಷಕವಾಗಿದ್ದರೆ ಸಾಲದು, ದೇಹವನ್ನು ಬೆಚ್ಚಗಿಡಲು ಬೇಕು! ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್. ಅವರ ಪ್ರಕಾರ, ವರ್ಷದ ಕೊನೆಯಲ್ಲಿ ಬಹುತೇಕರು ಹಾಲಿಡೇ ಹೋಗುತ್ತಾರೆ. ಇದಕ್ಕಾಗಿ ಕೆಲವರು ತಮ್ಮಲ್ಲೇ ಇರುವ ಲೇಯರ್ ಉಡುಪುಗಳನ್ನು ಧರಿಸಿದರೆ, ಇನ್ನು ಕೆಲವರು, ಶಾಪಿಂಗ್ ಮಾಡುತ್ತಾರೆ. ಅದೇನೇ ಇರಲಿ, ಈ ಚಳಿಗಾಲದಲ್ಲಿ ಹೊರಗೆ ಪ್ರಯಾಣಿಸುವಾಗ ಆರೋಗ್ಯವನ್ನು ಕಾಪಾಡುವಂತಹ ಫ್ಯಾಷನ್‌ಗೆ ಮೊರೆ ಹೋಗುವುದು ಉತ್ತಮ ಎನ್ನುತ್ತಾರೆ. ಇನ್ನು, ಟ್ರಾವೆಲ್ ಪ್ರಿಯರು, ಆರೋಗ್ಯದ ಕಾಳಜಿಯೊಂದಿಗೆ ತಮ್ಮಪ್ರತಿ ಟ್ರಾವೆಲ್‌ನಲ್ಲೂ ಹೇಗೆಲ್ಲಾ ಆಕರ್ಷಕವಾಗಿಯೂ ಕಾಣಿಸಬಹುದು, ಇದಕ್ಕಾಗಿ ಒಂದಿಷ್ಟು ಸಿಂಪಲ್ ಐಡಿಯಾ ಫಾಲೋ ಮಾಡಬೇಕು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್‌ ಜೆನ್.

ಚಿತ್ರಕೃಪೆ: ಪಿಕ್ಸೆಲ್

ಲೇಯರ್ ಲುಕ್ ಔಟ್‌ಫಿಟ್ಸ್ ಇರಲಿ

ನಿಮ್ಮ ಚಳಿಗಾಲದ ಟ್ರಾವೆಲ್ ಫ್ಯಾಷನ್‌ವೇರ್‌ಗಳಲ್ಲಿ ಲಾಂಗ್ ಜಾಕೆಟ್, ಕೋಟ್ ಅಥವಾ ಸ್ವೆಟರ್‌ನಂತಹ ತೀರಾ ಬೆಚ್ಚಗಿಡುವ ಮೇಲುಡುಗೆಗಳು ಇರುವುದು ಅಗತ್ಯ. ಲೇಯರ್ ಲುಕ್ ನೀಡುವ ಇವು ಧಿರಿಸಿನ ಮೇಲೆ ಸ್ಟೈಲಾಗಿ ಕಾಣಿಸುತ್ತವೆ.

ಕಂಫರ್ಟಬಲ್ ಲೇಯರ್ ವೇರ್ಸ್ ಇರಲಿ

ಈ ಸೀಸನ್‌ನಲ್ಲಿ ಟ್ರಾವೆಲ್ ಮಾಡುವಾಗ ಸ್ಲಿವ್ ಲೆಸ್, ಮಿನಿ, ಹಾಗೂ ತೀರಾ ತೆಳುವಾದ ಫ್ಯಾಬ್ರಿಕ್‌ನ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಕೂಡದು. ಗ್ಲಾಮರಸ್ ಉಡುಗೆಗಳು ಚಳಿಗೆ ಧರಿಸಿದಾಗ ತಕ್ಷಣಕ್ಕೆ ಆನಂದ ನೀಡಿದರೂ ನಂತರ ಚಳಿಗೆ ಆರೋಗ್ಯ ಹದಗೆಡಬಹುದು. ಅದಕ್ಕಾಗಿ ಆದಷ್ಟೂ ಲೇಯರ್ ಲುಕ್ ನೀಡುವ ಆರಾಮದಾಯಕ ಉಡುಪುಗಳ ಆಯ್ಕೆ ಮಾಡುವುದು ಬೆಸ್ಟ್.

ಥರ್ಮಲ್ ವೇರ್ಸ್ ಜತೆಗಿರಲಿ

ನೀವು ತೀರಾ ಥಂಡಿ ಇರುವ ಸ್ಥಳಗಳಿಗೆ ಹೋಗುತ್ತಿದ್ದಲ್ಲಿ, ಥರ್ಮಲ್‌ವೇರ್‌ಗಳನ್ನು ಒಳಗೆ ಧರಿಸಿ. ಅದರ ಮೇಲೆ ನೀವು ಧರಿಸಬಹುದಾದ ಸ್ಟೈಲಿಶ್ ಉಡುಪುಗಳನ್ನು ಹಾಕಿಕೊಳ್ಳಬಹುದು. ಥರ್ಮಲ್ ವೇರ್ ನಿಮ್ಮ ದೇಹವನ್ನು ಬೆಚ್ಚಗಿಡುತ್ತವೆ.

ಆರಾಮದಾಯಕವೆನಿಸುವ ಫುಟ್‌ವೇರ್

ಟ್ರಾವೆಲ್ ಮಾಡುವಾಗ ಹೈ ಹೀಲ್ಸ್, ವೆಡ್ಜೆಸ್‌ನಂತವನ್ನು ಆವಾಯ್ಡ್ ಮಾಡಿ. ಕಾಲು ನೋವಾಗಬಹುದು. ಹೆಚ್ಚು ನಡೆಯುವ ಸ್ಥಳವಾದಲ್ಲಿ, ಅತ್ಯುತ್ತಮ ಬ್ರಾಂಡ್‌ನ ಶೂಗಳನ್ನು ಧರಿಸಿ. ಇಲ್ಲವೇ ಫ್ಲಾಟ್ಸ್ ಅಥವಾ ಪ್ಲಿಪ್ ಫ್ಲಾಪ್ ತೆಗೆದುಕೊಂಡು ಹೋಗಿ.

ಈ ಸುದ್ದಿಯನ್ನೂ ಓದಿ | Year End Sale 2024: ಇಯರ್ ಎಂಡ್ ಸೇಲ್ ಶಾಪಿಂಗ್ ಪ್ರಿಯರಿಗೆ 5 ಸಿಂಪಲ್ ಟಿಪ್ಸ್ ಇಲ್ಲಿದೆ

ಗ್ಲೌವ್ಸ್-ಸಾಕ್ಸ್-ಆಕ್ಸೆಸರೀಸ್

ಕೈಗಳಿಗೆ ಉಲ್ಲನ್ ಗ್ಲೌವ್ಸ್ –ಪಾದಗಳಿಗೆ ಸಾಕ್ಸ್ ಧರಿಸಿ. ಟೋಪಿ, ಸ್ಕಾಫ್, ಮಫ್ಲರ್, ಸ್ಟೋಲ್‌ನಂತವು ಪ್ಯಾಕಿಂಗ್‌ನಲ್ಲಿ ಸೇರಿರಬೇಕು. ಟ್ರೆಂಡಿಯಾಗಿರುವುದನ್ನು ಕೊಂಡಲ್ಲಿ, ಇವುಗಳನ್ನೇ ಸ್ಟೈಲಾಗಿ ಧರಿಸಬಹುದು. ಚಳಿಯಲ್ಲಿ ಬಿಸಿಲಿದ್ದರೆ ಸನ್‌ಗ್ಲಾಸ್ ಧರಿಸಿ. ಫೋಟೋಗಳಲ್ಲಿ ಆಕರ್ಷಕವಾಗಿ ಕಾಣಿಸಬಹುದು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)