ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಫಿನಾಲೆಗೆ ಹತ್ತಿರವಾಗುತ್ತಿದೆ. ಸದ್ಯ ಮನೆಯಲ್ಲಿ 10 ಮಂದಿಯಷ್ಟೆ ಉಳಿದುಕೊಂಡಿದ್ದಾರೆ. ಇವರ ಪೈಕಿ ಈ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಯಾಕೆಂದರೆ ಮನೆಯೊಳಗಿರುವ ಸ್ಪರ್ಧಿಗಳೆಲ್ಲರೂ ಅದ್ಭತವಾಗು ಆಡುತ್ತಿದ್ದಾರೆ. ಸದ್ಯ ದೊಡ್ಮನೆಯ ರೆಸಾರ್ಟ್ ಆಗಿ ಪರಿವರ್ತನೆಯಾಗಿದ್ದು, ಟಾಸ್ಕ್ಗಳು ನಡೆಯುತ್ತಿವೆ. ಇದಾದ ಬಳಿಕ ಇಂದು ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ.
ನಾಮಿನೇಷನ್ ಪ್ರಕ್ರಿಯೆ ವೇಳೆ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡುವೆ ದೊಡ್ಡ ಜಗಳ ನಡೆದಿದೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ವಿಶೇಷವಾಗಿ ನೀಡಿದ್ದಾರೆ. ಅದೇನೆಂದರೆ, ನಾಮಿನೇಟ್ ಆಗೋ ಸ್ಪರ್ಧಿಗೆ ಕೃತಕವಾಗಿ ತಯಾರಿಸಿರುವ ಬಾಟಲಿಗಳಿಂದ ಹೊಡೆದು ನಾಮಿನೇಟ್ ಮಾಡಬೇಕಿದೆ. ಮೊದಲು ನಾಮಿನೇಟ್ ಮಾಡಬೇಕು. ಸೂಕ್ತ ಕಾರಣ ಕೊಡಬೇಕು. ಆ ಮೇಲೆ ಬಾಟಲಿಯಿಂದ ತಲೆಗೆ ಹೊಡೆಯಬೇಕು. ಇದು ಈ ವಾರದ ನಾಮಿನೇಷನ್ ಪ್ರಕ್ರಿಯೆ ಆಗಿದೆ.
ಹಾಗೆ ಉಗ್ರಂ ಮಂಜುಗೆ ಮೋಕ್ಷಿತಾ ಪೈ ಬಾಟಲಿಯಿಂದ ಹೊಡೆದಿದ್ದಾರೆ. ಆಗ ಕೂಡಲೇ ಮಂಜಣ್ಣ ಆರಾಮಾಗಿದ್ದೀರಾ? ನೋವು ಆಗಿಲ್ಲ ಅಲ್ವಾ? ಅಂತಲೇ ವ್ಯಂಗ್ಯವಾಗಿಯೆ ಮೋಕ್ಷಿತಾ ಕೇಳಿದ್ದಾರೆ. ಇದನ್ನ ಗಮನಿಸಿದ ಉಗ್ರಂ ಮಂಜು ಸಿಟ್ಟಾಗಿದ್ದಾರೆ. ಬಳಿಕ ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿದ್ದಾರೆ. ಆಗ ಇಬ್ಬರ ಮಧ್ಯೆ ಟಾಕ್ ಫೈಟ್ ನಡೆದಿದೆ. ನಾಳೆಯಿಂದ ಈ ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿಮ್ಮ ಬಳಿ ಟ್ಯೂಷನ್ಗೆ ಬರ್ತೀನಿ ಎಂದು ಮಂಜು ಹೇಳಿದ್ದಾರೆ. ನಿಮಗೆ ನಾನು ಕಾಣಿಸಿಕೊಳ್ಳಲು ಏನಾದರೂ ತಂದುಕೊಡಬೇಕಾ ಎಂದು ಕೇಳಿದ್ದಾರೆ.
ಮಂಜು ಮಾತಿನಿಂದ ಕೆರಳಿದ ಮೋಕ್ಷಿ, ಅಂದರೆ ನೀವು ಮನೆಯಲ್ಲಿ ಕಾಣಿಸಿಕೊಳ್ಳೋದು ಒಬ್ಬರಿಗೆ ತೆಗೆದುಕೊಂಡು ಹೋಗಿ ಇಬ್ಬರಿಗೆ ಕೊಟ್ಟಾಗಲೇ ಅಂತಾನಾ? ನೀವು ಯಾರು ನನಗೆ ವೈಸ್ ರೈಸ್ ಮಾಡೋಕೆ ಎಂದು ರೊಚ್ಚಿಗೆದ್ದಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ನಾನು ನಾಮಿನೇಟ್ ಆಗಲ್ಲ ಎಂದ ಮಂಜುಗೆ, ನಿಮ್ಮನ್ನು ನಾಮಿನೇಟ್ ಮಾಡೋದು ನನ್ನಿಷ್ಟ. ನನ್ನ ನಿರ್ಧಾರ ಎಂದು ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ.
ಅತ್ತ ಭವ್ಯ ಗೌಡ ಅವರು, ಐಶ್ವರ್ಯ ಅವರ ತಲೆಗೆ ಬಾಟಲಿ ಹೊಡೆದಿದ್ದಾರೆ. ಮಂಜು ತರವೇ ತ್ರಿವಿಕ್ರಮ್ ಕೂಡ ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯ ಸಿಂಧೋಗಿ ನಾಮಿನೇಟ್ ಆಗಿದ್ದಾರೆ.
BBK 11: ಒಬ್ಬಂಟಿಯಾಗಿ ಬಾತ್ ರೂಮ್ ಏರಿಯಾ ಕ್ಲೀನ್ ಮಾಡಿದ ಚೈತ್ರಾ: ಅತಿಥಿಗಳು ಕೊಟ್ಟ ಟಾಸ್ಕ್ ಕಂಪ್ಲೀಟ್