Sunday, 11th May 2025

Celebrities Christmas Fashion 2024: ಹೀಗಿತ್ತು ಸೆಲೆಬ್ರೆಟಿಗಳ ಕ್ರಿಸ್‌ಮಸ್ ಫ್ಯಾಷನ್ ವೇರ್ಸ್

Celebrities Christmas Fashion 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ವರ್ಷದ ಕೊನೆಯ ಸೆಲೆಬ್ರೇಷನ್ ಹಬ್ಬವಾದ ಕ್ರಿಸ್‌ಮಸ್‌ನಲ್ಲಿ ತಾರೆಯರು, ಮಾಡೆಲ್‌ಗಳು ಸೇರಿದಂತೆ ಎಲ್ಲಾ ಕ್ಷೇತ್ರದ ಸೆಲೆಬ್ರೆಟಿಗಳು ತಮ್ಮದೇ ಆದ ನಾನಾ ಬಗೆಯ ಟ್ರೆಂಡಿ ಹಾಗೂ ವೈವಿಧ್ಯಮಯ ಇಂಡೋ-ವೆಸ್ಟರ್ನ್ ಫ್ಯಾಷನ್‌ವೇರ್‌ಗಳಲ್ಲಿ (Celebrities Christmas Fashion 2024) ಕಾಣಿಸಿಕೊಂಡು ಸಂಭ್ರಮಿಸಿದರು.

ನಭಾ ನಟೇಶ್, ನಟಿ
ಚಿತ್ರಗಳು: ಇನ್ಸ್‌ಸ್ಟಾಗ್ರಾಮ್

ಈ ಸೀಸನ್‌ನ ಇಯರ್ ಎಂಡ್ ಫ್ಯಾಷನ್‌ನಲ್ಲಿ ಎಲ್ಲಾ ಬಗೆಯ ಕ್ರಿಸ್‌ಮಸ್‌ ಫ್ಯಾಷನ್ ಕೂಡ ಸೇರಿಕೊಂಡಿತು. ಸ್ಥಳೀಯ ಸಿನಿಮಾ ತಾರೆಯರಿಂದಿಡಿದು, ಬಾಲಿವುಡ್ ತಾರೆಯರು ಕೂಡ ಮಕ್ಕಳೊಂದಿಗೆ ಆಕರ್ಷಕವಾಗಿ ಕಾಣಿಸಿಕೊಂಡು ಆಚರಿಸಿದರು.

ಮಾಲಾ ಶ್ರೀ, ನಟಿ

ಸ್ಯಾಂಡಲ್‌ವುಡ್-ಕಿರುತೆರೆ ಸೆಲೆಬ್ರೆಟಿಗಳ ಸಂಭ್ರಮ

ಸ್ಯಾಂಡಲ್‌ವುಡ್‌ನ ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಥೀಮ್ ಫೆಸ್ಟಿವ್‌ವೇರ್ ಧರಿಸಿ, ನಾನಾ ಬಗೆಯ ಫೋಟೋಶೂಟ್ ಮಾಡಿಸಿ, ಆಚರಿಸಿದ್ದು, ಹೈ ಲೈಟ್ ಆಗಿದೆ. ಇನ್ನು, ನಟಿ ನಭಾ ನಟೇಶ್ ಕ್ರಿಸ್‌ಮಸ್‌ ರೆಡ್ ರಫಲ್ 2 ಪೀಸ್ ಡ್ರೆಸ್‌ನಲ್ಲಿ ಕಾಣಿಸಿಕೊಂಡದ್ದು, ಪಡ್ಡೆ ಹುಡುಗರನ್ನು ಸೆಳೆಯಿತು. ನಟಿ ಮಾಲಾ ಶ್ರೀ, ಪ್ರಣೀತಾ, ಅದ್ವಿತಿ ಶೆಟ್ಟಿ, ಭೂಮಿಕಾ ಸೇರಿದಂತೆ ಸಾಕಷ್ಟು ಸೀನಿಯರ್ ಹಾಗೂ ಜೂನಿಯರ್ ನಟಿಯರು ಕ್ರಿಸ್‌ಮಸ್‌ ವೇರ್‌ನಲ್ಲಿ ಮಿಂಚಿದರು.

ಅದ್ವಿತಿ ಶೆಟ್ಟಿ, ನಟಿ

ಅಷ್ಟ್ಯಾಕೆ ! ಸ್ಟಾರ್ ಕಪಲ್ ಸಂಗೀತಾ ಭಟ್ ಹಾಗೂ ಸುದರ್ಶನ್ ಟರ್ಕಿಯ ಹಾಲಿಡೇಯಲ್ಲೆ ಕ್ರಿಸ್‌ಮಸ್‌ ಆಚರಿಸಿ, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡರು. ಹೀಗೆ ಸಾಕಷ್ಟು ಮಂದಿ ತಾರೆಯರು ತಮ್ಮದೇ ಆದ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡರು.

ಪ್ರಿಯಾಂಕಾ ಚೋಪ್ರಾ –ನಿಕ್ , ಸ್ಟಾರ್ ಕಪಲ್
ಕೃತಿ ಸನೂನ್, ನಟಿ
ರಣಬೀರ್ ಕಪೂರ್-ಅಲಿಯಾ, ಬಾಲಿವುಡ್ ಸ್ಟಾರ್ಸ್
ಫ್ಯಾಮಿಲಿ ಫ್ರೆಂಡ್ಸ್ ಜತೆಯಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್

ಬಾಲಿವುಡ್ ಸೆಲೆಬ್ರೆಟಿಗಳ ಕ್ರಿಸ್‌ಮಸ್‌ ಲುಕ್

ಬಾಲಿವುಡ್‌ನಲ್ಲಿ ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಚೋಪ್ರಾ, ಕೃತಿ ಸನೂನ್, ರಾಕಿ ಸಾವಂತ್, ಜಾನ್ವಿ ಕಪೂರ್, ಸಿದ್ಧಾರ್ಥ್ ಮಲ್ಹೋತ್ರಾ-ಕಿಯಾರಾ, ಮಲೈಕಾ, ರಣಬೀರ್ ಕಪೂರ್-ಅಲಿಯಾ, ಕತ್ರೀನಾ-ವಿಕ್ಕಿ ಸೇರಿದಂತೆ ಬಹುತೇಕ ತಾರೆಯರು ಫ್ಯಾಮಿಲಿಯೊಂದಿಗೆ ಕ್ರಿಸ್‌ಮಸ್‌ ವೇರ್‌ನಲ್ಲಿ ಕಾಣಿಸಿಕೊಂಡರು. ಕ್ರಿಕೆಟಿಗ ಧೋನಿ ಸೇರಿದಂತೆ ಕೆಲವರು ಸಾಂತಾ ಕ್ಲಾಸ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ಮಕ್ಕಳನ್ನು ರಂಜಿಸಿದರೆ, ಮತ್ತೆ ಕೆಲವರು ಹಾಲಿಡೇಯಲ್ಲೂ ಕೂಡ ಕ್ರಿಸ್‌ಮಸ್‌ ಆಚರಿಸಿದರು.

ಈ ಸುದ್ದಿಯನ್ನೂ ಓದಿ | Winter Fashion: ಚಳಿಗಾಲದ ಟ್ರಾವೆಲ್ ಫ್ಯಾಷನ್‌ನಲ್ಲಿ ಎಂಟ್ರಿ ಕೊಟ್ಟ ಕಲರ್‌ಫುಲ್ ಉಲ್ಲನ್ ಟೋಪಿಗಳು

ಕ್ರಿಸ್‌ಮಸ್‌ ವೇರ್ಸ್ ಬೇಡಿಕೆ

ಒಟ್ಟಾರೆ, ಸೆಲೆಬ್ರೆಟಿಗಳ ಕ್ರಿಸ್‌ಮಸ್‌ ವೇರ್‌ಗಳ ಶೋ ಆಫ್‌ನಿಂದಾಗಿ ಆನ್‌ಲೈನ್ ಹಾಗೂ ಶಾಪ್‌ಗಳಲ್ಲೂ ಕ್ರಿಸ್‌ಮಸ್‌ ವೇರ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿತ್ತು ಎನ್ನುತ್ತಾರೆ ಮಾರಾಟಗಾರರು. ಪರಿಣಾಮ, ತಾರೆಯರ ಫೆಸ್ಟಿವ್ ಸೀಸನ್‌ವೇರ್‌ಗಳು ಟ್ರೆಂಡ್ ಸೆಟ್ ಮಾಡಿದವಲ್ಲದೇ, ಅವುಗಳ ಡಿಮ್ಯಾಂಡ್ ಕೂಡ ಹೆಚ್ಚಿಸಿದ್ದವು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)