ಬೆಂಗಳೂರು: ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು ಕ್ರಿಸ್ಮಸ್(Christmas) . ದೇವಮಾನವ ಯೇಸುಕ್ರಿಸ್ತ ಹುಟ್ಟಿದ ಸಂಭ್ರಮದ ದಿನವೇ ಕ್ರಿಸ್ಮಸ್. ಕ್ರಿಶ್ಚಿಯನ್ ಧರ್ಮದವರು ಮಾತ್ರವಲ್ಲದೆ ಬೇರೆ ಬೇರೆ ಧರ್ಮದವರು ಕೂಡ ಕ್ರಿಸ್ಮಸ್ ಹಬ್ಬವನ್ನ ಖುಷಿಯಿಂದ ಆಚರಿಸುತ್ತಾರೆ. ಜಗತ್ತಿನೆಲ್ಲೆಡೆ ಕ್ರಿಸ್ಮಸ್ ಹಬ್ಬವನ್ನ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಕನ್ನಡ ತಾರೆಯರು ಕೂಡ ಕ್ರಿಸ್ಮಸ್ ಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ(Yash-Radhika Pandit).
ರಾಕಿಂಗ್ ಸ್ಟಾರ್ ಯಶ್ (Yash) ಪತ್ನಿ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ನಟಿ ರಾಧಿಕಾ ಪಂಡಿತ್ (Radhika Pandit) ಕೂಡ ಕ್ರಿಸ್ಮಸ್ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ. ಕ್ರಿಸ್ಮಸ್ ಟ್ರೀ ಜೊತೆಗೆ ಪುತ್ರ ಯಥರ್ವ್(Yatharv Yash) , ಪುತ್ರಿ ಆಯ್ರಾ (Ayra Yash) ಜೊತೆಗೆ ರಾಧಿಕಾ ಪಂಡಿತ್ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನಟಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
ನಟಿ ರಾಧಿಕಾ ಪಂಡಿತ್ (Radhika Pandit) ಅವರು ಯಾವಾಗಲೂ ಹಬ್ಬ, ಶುಭ ಸಂದರ್ಭಗಳಲ್ಲಿ ಮರೆಯದೆ ಅಭಿಮಾನಿಗಳಿಗೆ (Fans) ವಿಶ್ ಮಾಡುತ್ತಾರೆ. ಈಗ ತಮ್ಮ ಮಕ್ಕಳನ್ನೂ ಹಬ್ಬಕ್ಕೆ ರೆಡಿ ಮಾಡಿಕೊಂಡು ಖುಷಿ ಖುಷಿಯಾಗಿ ಹಬ್ಬ ಆಚರಿಸಿಕೊಂಡು ವಿಡಿಯೋ (Video) ಹಾಗೂ ಫೋಟೋಗಳನ್ನು ಅಭಿಮಾನಿಗಳೊಂದಿಗೆ (Fans) ಹಂಚಿಕೊಳ್ಳುತ್ತಾರೆ.
ಈಗ ನಟಿ ಕ್ರಿಸ್ಮಸ್ ಹಬ್ಬದ ಆಚರಣೆಯ ಕುರಿತಾದ ಹೊಸದೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ತಮ್ಮ ಮಗಳು ಐರಾ ಯಶ್ (Ayra Yash) ಹಾಗೂ ಯಥರ್ವ್ ಯಶ್ (Yatharv Yash) ಅವರನ್ನು ಮಡಿಲಲ್ಲಿ ಕೂರಿಸಿಕೊಂಡು ವಿಡಿಯೋ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ – ಸ್ಯಾಂಡಲ್ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಮನೆಯಲ್ಲಿ ಪ್ರತಿ ವರ್ಷ ಕ್ರಿಸ್ಮಸ್ ಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಲಾಗುತ್ತದೆ. ಈ ವರ್ಷವೂ ಮನೆಯಲ್ಲಿ ಕ್ರಿಸ್ಮಸ್ ಟ್ರೀ ಡೆಕೊರೇಟ್ ಮಾಡಿ, ಕೇಕ್ ತಯಾರಿಸಿ ಮಕ್ಕಳೊಂದಿಗೆ ರಾಧಿಕಾ ಪಂಡಿತ್ ಸಂಭ್ರಮಿಸಿದ್ದಾರೆ. ಕ್ರಿಸ್ಮಸ್ ಟ್ರೀ ಅನ್ನು ರೆಡಿ ಮಾಡಿಸಿದ್ದು, ಅದರ ಮುಂದೆ ಸಾಂತಾ ಕ್ಲಾತ್ ಡ್ರೆಸ್ ಧರಿಸಿ ಮಕ್ಕಳೊಂದಿಗೆ ರಾಧಿಕಾ ಮಿಂಚಿದ್ದಾರೆ. ಈ ವೇಳೆ, ಯಶ್ ಕೂಡ ಜಾಯಿನ್ ಆಗಿದ್ದಾರೆ. ಕ್ರಿಸ್ಮಸ್ ಹಬ್ಬದ ತಯಾರಿಯ ಝಲಕ್ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ.
ಪ್ರತಿ ಹಬ್ಬವನ್ನು ಕುಟುಂಬದ ಜೊತೆ ಆಚರಣೆ ಮಾಡುವ ಯಶ್ (Yash), ಕ್ರಿಸ್ಮಸ್ ದಿನ ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಕ್ರಿಸ್ಮಸ್ ಟ್ರೀ ಪಕ್ಕ ಫ್ಯಾಮಿಲಿ ಫೋಟೋ ತೆಗೆದುಕೊಂಡಿದ್ದಾರೆ. ಜೊತೆಗೆ ರಾಧಿಕಾ, ಯಥರ್ವ್ ಮತ್ತು ಐರಾ ಕ್ರಿಸ್ಮಸ್ ಟ್ರೀ ಮುಂದೆ ವಿಭಿನ್ನ ಪೋಸ್ನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಐರಾ ಹಾಗೂ ಯಥರ್ವ್ ಎಲ್ಲರ ಗಮನ ಸೆಳೆದಿದ್ದಾರೆ. ಕ್ರಿಸ್ಮಸ್ ಟ್ರೀ ಮುಂದೆ ರಾಧಿಕಾ ಪೋಸ್ ಕೊಟ್ಟರೆ ಪಕ್ಕದಲ್ಲಿ ನಿಂತ ಪುತ್ರಿ ಐರಾ ಹಾಗೂ ಪುತ್ರ ಯಥರ್ವ್ ಕ್ಯಾಮೆರಾಗೆ ಸ್ಟೈಲ್ ಆಗಿ ನಿಂತು ಪೋಸ್ ಕೊಟ್ಟಿದ್ದಾರೆ.
ಈ ಸುದ್ದಿಯನ್ನು ಓದಿ: UI Movie: ಉಪ್ಪಿಯ ಯುಐ ಸಿನಿಮಾ ನೋಡಿ ಸ್ಯಾಂಡಲ್ವುಡ್ ಬಾದ್ ಷಾ ಹೇಳಿದ್ದೇನು…?