ಸೋಶಿಯಲ್ ಮೀಡಿಯಾದ ಕ್ರೇಜ್‌ಗಾಗಿ ಜನ ಏನೇನೋ ಮಾಡುತ್ತಾರೆ. ಈಗಂತೂ ಕ್ರಿಸ್ಮಸ್ ಹಬ್ಬದ ಸಡಗರ. ಏಸುಕ್ರಿಸ್ತರ ಹಬ್ಬದ ಪ್ರತೀಕವಾಗಿ ಕ್ರಿಸ್ಮಸ್ ಟ್ರೀಗಳು ಈಗಾಗಲೇ ಮನೆ ತುಂಬಿವೆ. ಈ ವಿಶೇಷ ವಿನ್ಯಾಸದ ಕ್ರಿಸ್ಮಸ್ ಟ್ರೀಗಳೂ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುತ್ತಿವೆ. ಇದರ ನಡುವೆ, ಹೊಸ ಟ್ರೆಂಡ್ ಒಂದು ಶುರುವಾಗಿದೆ. ಈ ಟ್ರೆಂಡ್‌ಗೆ ಲಲನೆಯರು ಫಿದಾ ಆಗಿದ್ದಾರೆ. ತಾನ್ಯಾ ಸಿಂಗ್ ಎಂಬಾಕೆ ತನ್ನ ಕೂದಲನ್ನು ಕ್ರಿಸ್ಮಸ್ ಟ್ರೀಯನ್ನಾಗಿ ಪರಿವರ್ತಿಸಿದ್ದಾಳೆ. ಹಾಗೇ ಇದಕ್ಕೆ ಆಭರಣಗಳು ಮತ್ತು ಹೊಳೆಯುವ ದೀಪಗಳಿಂದ ಅಲಂಕಾರ ಮಾಡಿದ್ದಾರೆ. ಈ ವಿಡಿಯೊ ನಾಲ್ಕು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಈ ವೈರಲ್ ವಿಡಿಯೊದಲ್ಲಿ ಕೂದಲನ್ನು ಕ್ರಿಸ್ಮಸ್ ಟ್ರೀಯನ್ನಾಗಿ ಪರಿವರ್ತಿಸಿದ ವಿಧಾನದ ಸಂಪೂರ್ಣ ವಿಡಿಯೊವನ್ನು ತೋರಿಸಲಾಗಿದೆ. ಖಾಲಿಯಾದ ಕೂಲ್ ಡ್ರಿಂಕ್ಸ್ ಬಾಟಲಿಯನ್ನು ಆಧಾರವಾಗಿ ಬಳಸಿಕೊಂಡು, ಅದನ್ನು ತಲೆಗೆ ಜೋಡಿಸಿಕೊಂಡು ಅದರ ಸುತ್ತಲೂ ಕೂದಲನ್ನು ಸುತ್ತಿದ್ದಾರೆ. ಅದನ್ನು ಕ್ರಿಸ್ಮಸ್ ಟ್ರೀಯ ಆಕಾರದಂತೆ ಮಾಡಿ ಮಿನಿಯೇಚರ್ ದೀಪಗಳು, ಸ್ಟಾರ್‌ಗಳು ಮತ್ತು ಇತರ ಆಭರಣಗಳಿಂದ ಅಲಂಕರಿಸಿದ್ದಾರೆ.
ತಾನ್ಯಾ ಅವರ ಹಬ್ಬದ ಕೇಶ ವಿನ್ಯಾಸವು ಸೋಶಿಯಲ್ ಮೀಡಿಯಾದ ಜನರನ್ನು ಆಕರ್ಷಿಸಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರು ತಮ್ಮ ಮಿಶ್ರ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಕೆಲವರು ಈ ಕೇಶ ವಿನ್ಯಾಸವನ್ನು ಹೊಗಳಿದರೆ, ಇನ್ನು ಕೆಲವರು ಅದನ್ನು ಇಷ್ಟಪಡಲಿಲ್ಲ.
ಈ ಸುದ್ದಿಯನ್ನೂ ಓದಿ:ಮೊಬೈಲ್‍ನಲ್ಲಿ ಆಮ್ಲೆಟ್ ವಿಡಿಯೊ ನೋಡಿ ಪಚೀತಿಗೆ ಸಿಲುಕಿದ ಓಲಾ ಕ್ಯಾಬ್ ಡ್ರೈವರ್!
ನೆಟ್ಟಿಗರೊಬ್ಬರು “ಇದರಲ್ಲಿ ಕಾಣೆಯಾದ ಏಕೈಕ ವಿಷಯವೆಂದರೆ ಸಾಂತಾ ಮರವನ್ನು ಹತ್ತುವುದು!” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು “ಇದು ನಾನು ವರ್ಷಪೂರ್ತಿ ನೋಡಿದ ಅತ್ಯಂತ ಸೃಜನಶೀಲ ವಿಷಯ” ಎಂದಿದ್ದಾರೆ. ಇನ್ನೊಬ್ಬರು ತಮಾಷೆಯಾಗಿ “ನಾನು ಇದನ್ನು ಪ್ರಯತ್ನಿಸಲು ಇಷ್ಟಪಡುತ್ತೇನೆ, ಆದರೆ ನನ್ನ ಬೆಕ್ಕುಗಳು ಬಹುಶಃ ಸೆಕೆಂಡುಗಳಲ್ಲಿ ಅದನ್ನು ನಾಶಪಡಿಸುತ್ತವೆ.” ಎಂದಿದ್ದಾರೆ.