Sunday, 11th May 2025

Mumbai Accident: SUV ಕಾರಿನ ಹಿಂಭಾಗ ಹಾರಿ ಬಂದು ಹಿಂಬದಿಯ ಕಾರಿಗೆ ಡಿಕ್ಕಿ- ಬಾಲಕ ಸ್ಥಳದಲ್ಲೇ ಸಾವು

Mumbai Horror

ಮುಂಬೈ: ಮಹಾರಾಷ್ಟ್ರದ ನವಿ ಮುಂಬೈನ ವಾಶಿ ಪ್ರದೇಶದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಅಪಘಾತದಲ್ಲಿ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಶನಿವಾರ ತಡರಾತ್ರಿ ಎಸ್‌ಯುವಿ ಕಾರು (SUV Car Accident) ರಸ್ತೆಯ ವಿಭಾಜಕಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕಾರಿನ ಬಾನೆಟ್‌ ಹಿಂಬದಿ ಬರುತ್ತಿರುವ ಕಾರಿನ ಮೇಲೆ ಬಿದ್ದಿದ್ದು, ಮತ್ತೊಂದು ಕಾರಿನಲ್ಲಿದ್ದ ಬಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. (Mumbai Accident)

ಮೃತನನ್ನು ಹರ್ಷ್ ಅರೆಥಿಯಾ ಎಂದು ಗುರುತಿಸಲಾಗಿದ್ದು, ಆತ ತನ್ನ ತಂದೆ ಮತ್ತು ಮೂವರು ಸೋದರ ಸಂಬಂಧಿಗಳೊಂದಿಗೆ ಪ್ರಯಾಣಿಸುತ್ತಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯಲ್ಲಿ ಉಳಿದವರು ಪಾರಾಗಿದ್ದಾರೆ. ಎಸ್‌ಯುವಿ ಕಾರೊಂದು ರಸ್ತೆಯ ವಿಭಾಜಕಕ್ಕೆ ಅಪ್ಪಳಿಸಿತು ಮತ್ತು ಅದರ ಹಿಂಭಾಗವು ಗಾಳಿಯಲ್ಲಿ ಸುಮಾರು 7 ಅಡಿಗಳಷ್ಟು ಗಾಳಿಯಲ್ಲಿ ಹಾರಿ ಮೃತ ಹರ್ಷ್ ಅರೆಥಿಯಾ ಅವರ ತಂದೆ ಮತ್ತು ಮೂವರು ಸೋದರ ಸಂಬಂಧಿಗಳೊಂದಿಗೆ ಪ್ರಯಾಣಿಸುತ್ತಿದ್ದ ಕಾರಿನ ಬಾನೆಟ್‌ಗೆ ಅಪ್ಪಳಿಸಿತು ಇದರಿಂದ ಎದುಗಡೆ ಸೀಟ್‌ ಕುಳಿತು ಪ್ರಯಾಣಿಸುತ್ತಿದ್ದ ಹರ್ಷ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಎಸ್‌ಯುವಿ ಕಾರು ಚಾಲಕನನ್ನು ಘನ್ಸೋಲಿ ನಿವಾಸಿ ವಿನೋದ್ ಪಚಾಡೆ ಎಂದು ಗುರುತಿಸಲಾಗಿದೆ. ನಿರ್ಲಕ್ಷ್ಯ ಮತ್ತು ಅಜಾಗರೂಕ ಚಾಲನೆಯಿಂದ ಸಾವಿಗೆ ಕಾರಣವಾದ ಪ್ರಕರಣವನ್ನು ಆತನ ಮೇಲೆ ದಾಖಲಿಸಲಾಗಿದೆ. ಎಂದು ವಾಶಿ ಪೊಲೀಸ್ ಠಾಣೆಯ ಅಧಿಕಾರಿ ದೀಪಕ್ ಗಾವಿತ್ ತಿಳಿಸಿದ್ದಾರೆ. 

ಪ್ರತ್ಯೇಕ ಘಟನೆಯಲ್ಲಿ, ವೇಗವಾಗಿ ಬಂದ ಟ್ರಕ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಾದಚಾರಿ ಮಾರ್ಗದ ಬಳಿಯ ತೆರೆದ ಪ್ರದೇಶದಲ್ಲಿ ಮಲಗಿದ್ದ ಕಾರ್ಮಿಕರ ಗುಂಪಿನ ಮೇಲೆ ಬಿದ್ದ ಪರಿಣಾಮ ಇಬ್ಬರು ಪುಟ್ಟ ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಪುಣೆಯ ವಘೋಲಿಯ ಫಾಟಾ ಬಳಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಂತ್ರಸ್ತರಲ್ಲಿ ಅಮರಾವತಿ ಮೂಲದ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಸೇರಿದ್ದಾರೆ. ಕಾರ್ಮಿಕರು ಕೆಲಸ ಅರಸಿ ಎರಡು ದಿನಗಳ ಹಿಂದೆ ಪುಣೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅತಿವೇಗದಲ್ಲಿ ಸಾಗುತ್ತಿದ್ದ ಟ್ರಕ್ ಏಕಾಏಕಿ ರಸ್ತೆಯಿಂದ 12 ಮಂದಿ ಮಲಗಿದ್ದ ಫುಟ್‌ಪಾತ್‌ಗೆ ಪಲ್ಟಿಯಾಗಿದೆ. ಒಂಬತ್ತು ಮಂದಿ ಮೇಲೆ ವಾಹನ ಬಿದ್ದಿದೆ. ಇತರರು ಪಾರಾಗಿದ್ದಾರೆ. ಟ್ರಕ್‌ ಚಾಲಕನನ್ನು ಗಜಾನನ ಶಂಕರ್ ತೋಟೆ (26) ಎಂದು ಗುರುತಿಸಲಾಗಿದ್ದು, ಆತ ಕುಡಿದು ವಾಹನ ಚಲಾಯಿಸುತ್ತಿದ್ದ ಎನ್ನಲಾಗಿದೆ. ಈಗಾಗಲೇ ಆತನನ್ನು ಪುಣೆ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ.

ಈ ಸುದ್ದಿಯನೂ ಓದಿ : Viral Video: ಮುಂಬೈಯ ಭೀಕರ ಬಸ್‌ ದುರಂತ: ವೈರಲ್‌ ಆಯ್ತು ಅಪಘಾತದ ವಿಡಿಯೊ