Tuesday, 13th May 2025

Viral Video: ಏಕಾಏಕಿ ಕುಸಿದು ಬಿದ್ದ 533 ಮೀ. ಉದ್ದದ ಸೇತುವೆ; ಭೀಕರ ದೃಶ್ಯ ಭಾರೀ ವೈರಲ್‌

Viral Video

ಬ್ರೆಜಿಲ್ : ಬ್ರೆಜಿಲ್‍ನ ಮರನ್ಹಾವೊ ಮತ್ತು ಟೊಕಾಂಟಿನ್ಸ್ ಅನ್ನು ಪರಸ್ಪರ ಸಂಪರ್ಕಿಸುವ ಸೇತುವೆಯೊಂದು ಕುಸಿದು ಬಿದ್ದಿದೆ. ಆ ವೇಳೆ ಸೇತುವೆಯ ಮೇಲೆ ಸಲ್ಫ್ಯೂರಿಕ್ ಆಮ್ಲವನ್ನು ಸಾಗಿಸುತ್ತಿದ್ದ ಟ್ಯಾಂಕರ್‌ ಟ್ರಕ್‌ ಕೆಳಗಿರುವ ನದಿಗೆ ಬಿದ್ದು ಅದರಲ್ಲಿದ್ದ ಸಲ್ಫ್ಯೂರಿಕ್ ಆಮ್ಲ ನೀರುಪಾಲಾಗಿದೆ. ಇದರಿಂದ  ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

1960ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ 533 ಮೀಟರ್ ಉದ್ದದ ಸೇತುವೆಯು  164 ಅಡಿ ಆಳವಿದ್ದು, ಇದರ ಕುಸಿತದಿಂದ ಟ್ಯಾಂಕರ್ ಟ್ರಕ್, ಎರಡು ಟ್ರಕ್‍ಗಳು, ಒಂದು ಕಾರು ಮತ್ತು ಬೈಕ್ ನದಿಗೆ ಬಿದ್ದಿದೆ ಎನ್ನಲಾಗಿದೆ. ಹಾಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಆದರೆ ಆಸಿಡ್ ಸೋರಿಕೆ ಪತ್ತೆಯಾಗಿದ್ದು, ಈ ಘಟನೆಯಲ್ಲಿ ಈವರೆಗೆ ಕನಿಷ್ಠ ಒಂದು ಸಾವು ಸಂಭವಿಸಿದ್ದು, 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬ್ರೆಜಿಲ್ ಸೇತುವೆ ಕುಸಿತದ ಹಲವಾರು ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ  ವೈರಲ್‌ ಆಗಿದೆ. ಸ್ಥಳಕ್ಕೆ ಭೇಟಿ ನೀಡಿದ ನಗರದ ಕೌನ್ಸಿಲ್ ಸದಸ್ಯ ಎಲಿಯಾಸ್ ಜೂನಿಯರ್ ಅವರು ಈ ಭೀಕರ ಕುಸಿತವನ್ನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೊ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಪ್ರಯಾಣವನ್ನು  ಸುರಕ್ಷಿತವಾಗಿಸಲು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಸೇತುವೆಯು ಘನ ವಾಹನಗಳ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಎಲಿಯಾಸ್ ತನ್ನ ವಿಡಿಯೊದಲ್ಲಿ ಹೇಳಿದ್ದಾರೆ.

Viral Video

ಈ ಸುದ್ದಿಯನ್ನೂ ಓದಿ:ವಯಸ್ಕರ ಡೈಪರ್ಸ್‌ ರೇಟ್‌ ಕೇಳಿದ್ರೆ ಶಾಕ್‌ ಆಗ್ತಿರಾ! ಇದರ ಜಾಹೀರಾತು ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?

ವರದಿಗಳ ಪ್ರಕಾರ, ಕುಸಿದ ಈ ಸೇತುವೆಯನ್ನು ವರ್ಷಗಳ ಹಿಂದೆ, 1960 ರಲ್ಲಿ ನಿರ್ಮಿಸಲಾಗಿದೆ. ‘ಜುಸ್ಸೆಲಿನೊ ಕುಬಿಟ್ಸ್ಚೆಕ್ ಡಿ ಒಲಿವೇರಾ ಸೇತುವೆ’ ಎಂದು ಹೆಸರಿಸಲಾದ ಈ ಹಳೆಯ ಸೇತುವೆಯನ್ನು  ಉತ್ತಮ ಗುಣಮಟ್ಟದ  ಕಾಂಕ್ರೀಟ್‍ನಿಂದ ನಿರ್ಮಿಸಲಾಗಿತ್ತು ಎನ್ನಲಾಗಿದೆ.