ಬೆಂಗಳೂರು: ಕಲರ್ಸ್ ಕನ್ನಡ(colors kannada) ವಾಹಿನಿಯಲ್ಲಿ ನೂರು ಜನ್ಮಕೂ(Nooru Janmaku) ಅನ್ನೋ ಹೊಸ ಧಾರಾವಾಹಿ ಇಂದಿನಿಂದ ಶುರುವಾಗಲಿದೆ. ಗೀತಾ ಸೀರಿಯಲ್ ನಟ ಧನುಷ್ ಮತ್ತೆ ಈ ಸೀರಿಯಲ್ ಮೂಲಕ ಆಗಮಿಸಿದರೆ, ಅವರಿಗೆ ಇಬ್ಬರು ಹೊಸ ನಟಿ ಜತೆಯಾಗಿದ್ದು, ಪ್ರೋಮೋ ಮೂಲಕ ಗಮನ ಸೆಳೆಯುತ್ತಿರುವ ಈ ಸೀರಿಯಲ್ನ(Serial) ಮೋಹಿನಿ ಪಾತ್ರಧಾರಿ ಯಾಮಿನಿ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.
ಮಹಾನಟಿ(Mahanati) ಬೆಡಗಿ ಹೊಸ ಧಾರಾವಾಹಿ ಮೂಲಕ ಲಾಂಚ್ ಸೀರಿಯಲ್ ದುನಿಯಾಗೆ ಪಾದಾರ್ಪಣೆ ಮಾಡ್ತಿದ್ದಾರೆ. ವಿಶೇಷ ಅಂದ್ರೇ ಮೊದಲ ಸೀರಿಯಲ್ನಲ್ಲೇ ಭಯಾನಕ ಭೂತವಾಗಿ ಹಗಲು ರಾತ್ರಿ ಕಾಡಲಿದ್ದಾರೆ. ಹೌದು, ನೂರು ಜನ್ಮಕ್ಕೂ ಹೊಸ ಧಾರಾವಾಹಿ ಶೀಘ್ರದಲ್ಲೇ ತೆರೆಗೆ ಬರೋಕೆ ಸಜ್ಜಾಗಿದ್ದು, ಸದ್ಯ ಹೊಸ ಪ್ರೊಮೋ ಲಾಂಚ್ ಆಗಿದ್ದು, ಆ ಪ್ರೋಮೋದಲ್ಲಿ ಮಹಾನಟಿ ಖ್ಯಾತಿಯ ಚಂದನಾ ಗೌಡ(Chandhana Gowda) ಸೇರಿಕೊಂಡಿದ್ದಾರೆ. ಇನ್ನು ಅವರ ಕಿರುತರೆ ಪಯಣದ ಪ್ರಾರಂಭದ ಕುರಿತು ಸ್ವತ: ಚಂದನಾವೇ ಮಾತಾನಾಡಿದ್ದು, ಆ ಮಾಹಿತಿ ಇಲ್ಲಿದೆ ನೋಡಿ.

ಹೇಗಿದ್ದೀರಾ?
ನಾನು ಚನಾಗಿದ್ದೀನಿ. ಖುಷಿಯಾಗಿದ್ದೀನಿ
ಮಹಾನಟಿಯಲ್ಲಿ ಶೋ ನಲ್ಲಿ ಗುರುತಿಸಿಕೊಂಡಿದ್ರಿ.. ಈಗ ಕಲರ್ಸ್ ಮೂಲಕ ಎಂಟ್ರಿ ಕೊಡ್ತಿದ್ದೀರ.. ಏನು ಅನಿಸುತ್ತಿದೆ?
ನಾನು ಕುಲವಧು ಧಾರಾವಾಹಿಯಲ್ಲಿ ತಂಗಿಯ ಪಾತ್ರ ಮಾಡಿದ್ದೆ. ಅದಾದ್ಮೇಲೆ ನನಗೆ ಮಹಾನಟಿ ಶೋ ದಲ್ಲಿ ಪಾರ್ಟಿಸಿಪೇಟ್ ಮಾಡೋಕೆ ಅವಕಾಶ ಸಿಕ್ತು. ಒಳ್ಳೆಯ ಪರ್ಫಾರ್ಮ್ ಮಾಡಿ ಎಲ್ಲರಿಂಲೂ ಸೈ ಎನಿಸಿಕೊಂಡೆ. ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ನನಗೆ ಒನ್ ಆಫ್ ದಿ ಲೀಡ್ ರೋಲ್ ಸಿಕ್ಕಿರುವುದಕ್ಕೆ ಖುಷಿ ಇದೆ. ನನಗೆ ಆಕ್ಟಿಂಗ್ ಖುಷಿ ಕೊಡತ್ತೆ. ನಾನು ಕಲಾವಿದೆಯಾಗಬೇಕು, ಇದೇ ಕ್ಷೇತ್ರದಲ್ಲಿ ನಾನು ಇರ್ಬೇಕು. ಎಷ್ಟು ಕಷ್ಟ ಪಟ್ಟರೂ ಪರ್ವಾಗಿಲ್ಲ. ನಾನು ಇಲ್ಲಿ ಸರ್ವೈವ್ ಆಗ್ತೀನಿ.
ಧಾರಾವಾಹಿಯಲ್ಲಿ ನಟಿಸೋಕೆ ಮೊದಲ ಅವಕಾಶದಲ್ಲೇ ದೊಡ್ಡ ಆಫರ್ ಸಿಕ್ಕಿರೋದು ಹೇಗೆ ಅನಿಸುತ್ತೆ?
ನನ್ನ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ಗೆ ನಾನು ಧನ್ಯವಾದ ಹೇಳ್ಬೇಕು. ಇಷ್ಟು ಒಳ್ಳೆಯ ಅವಕಾಶ ನನಗೆ ಕೊಟ್ಟಿದ್ದಕ್ಕೆ. 18, 21 ವರ್ಷಕ್ಕೆ ನನಗೆ ಇಷ್ಟು ಒಳ್ಳೆಯ ಕೆಲಸ ಸಿಗ್ತಿದೆ ಅಂದ್ರೆ ನಾನು ನಿಜವಾಗಲು ಈ ಕ್ಷೇತ್ರಕ್ಕಾಗಿಯೇ ಬಂದವಳು ಎಂದು ಅನಿಸತ್ತೆ.
ಈ ಧಾರಾವಾಹಿಯಲ್ಲಿ ನಿಮ್ಮದು ದೆವ್ವದ ಪಾತ್ರ… ಎಷ್ಟು ಚಾಲೆಂಜಿಂಗ್ ಆಗಿ ಇದೆ ಇದು ನಿಮಗೆ?
ದೆವ್ವದ ಪಾತ್ರ ಮಾಡುವುದು ಅಷ್ಟು ಸುಲಭದ ಮಾತಲ್ಲ. ಮೆಕಪ್ ಜಾಸ್ತಿ ಮಾಡಬೇಕಾಗುತ್ತೆ. ಕಣ್ಣುಗಳನ್ನು ಅಗಲವಾಗಿ ತೆರೆದಿರಬೇಕಾಗುತ್ತೆ. ಜೋರಾಗಿ ಗಾಳಿಯನ್ನು ಮುಖಕ್ಕೆ ಬಿಟ್ಟಾಗ ಕಣ್ಣು ತೆಗೆಯುವುದಕ್ಕೂ ಆಗೋದಿಲ್ಲ.
ಮಹಾನಟಿಯಲ್ಲಿ ನಿಮ್ಮ ಕಣ್ಣಿನ ಎಕ್ಸ್ಪ್ರೆಷನ್ಗೆ ತುಂಬಾ ಜನ ಫಿದಾ ಆಗಿದ್ರು.. ಈಗ ಈ ಧಾರಾವಾಹಿಯಲ್ಲಿ ಪ್ರೋಮೋದಲ್ಲಿ ನಿಮ್ಮ ಎಕ್ಸ್ಪ್ರೆಸಿವ್ ಕಣ್ಣುಗಳೇ ಮೇನ್ ಅಟ್ರಾಕ್ಷನ್…
ನನಗೆ ಕಣ್ಣಿನಿಂದ ಆಕ್ಟಿಂಗ್ ತೆಗೆಯುವುದು ಅಷ್ಟೇನು ಕಷ್ಟ ಅನ್ನಿಸುವುದಿಲ್ಲ. ಅದಕ್ಕಾಗಿ ವಿಶೇಷವಾಗಿ ನಾನು ಪ್ರಾಕ್ಟೀಸ್ ಮಾಡಬೇಕು ಎಂದೇನಿಲ್ಲ.

ಕನ್ನಡದಲ್ಲಿ ಈ ರೀತಿಯ ದೆವ್ವದ ಧಾರಾವಾಹಿಗಳು ಜನರನ್ನು ಎಷ್ಟರ ಮಟ್ಟಿಗೆ ಸೆಳೆಯುತ್ತದೆ ಅನಿಸುತ್ತೆ ನಿಮಗೆ?
ಈಗಿನ ಜನರೇಷನ್ ಅವರಿಗೆ ಹಾರರ್ ಸೀರೀಸ್ ಮತ್ತು ಮೂವೀಸ್ ಮೊಬೈಲ್ ಆಪ್ ಗಳಲ್ಲಿ ನೋಡ್ತಾರೆ. ಆದ್ರೆ ಏಜ್ ಆದವ್ರಿಗೆ ಅದು ಆಗೋದಿಲ್ಲ. ಹಾಗಾಗಿ ಅವ್ರು ಕೂಡ ಹಾರಾರ್ ಧಾರಾವಾಹಿ ನೋಡೋದಕ್ಕೆ ಅವಕಾಶ ಸಿಗುತ್ತೆ. ಎಲ್ಲರನ್ನು ಕೂಡ ಈ ಧಾರಾವಾಹಿ ಮನರಂಜಿಸುವಲ್ಲಿ ಎರಡು ಮಾತಿಲ್ಲ.
ಹೊಸಬರಾಗಿ ಇಂಡಸ್ಟ್ರೀಗೆ ಬಂದಾಗ.. ಫೇಸ್ ಮಾಡಬೇಕಾದ ಚಾಲೆಂಜಸ್ ಏನು? ಯಾವ ರೀತಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತಿದ್ದೀರಿ?
ಹೊಸಬರಿಗೆ ತುಂಬಾ ಕಷ್ಟ ಆಗತ್ತೆ. ಆದ್ರೆ ಎಷ್ಟೇ ಕಷ್ಟ ಆದ್ರೂ ನಾನು ಎಲ್ಲವನ್ನು ಮೀರಿ ನಿಲ್ಲತ್ತೇನೆ. ನನ್ನ ಟ್ಯಾಲೆಂಟ್ ನನ್ನನ್ನು ಉತ್ತುಂಗಕ್ಕೆ ಕರ್ಕೊಂಡು ಹೋಗೇ ಹೋಗತ್ತೆ. ಹಾಗೆ ನಾನು ಫ್ರೆಶರ್ ಆಗಿದ್ರು ಕೂಡ ನನ್ನ ತಂಡ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೆ. ನಿಂದು ಸ್ಪೆಷಲ್ ರೋಲ್, ನೀನು ಕೂಡ ನಮಗೆ ಸ್ಪೆಷಲ್ ಅಂತ ಹೇಳ್ತಾರೆ ಹಾಗಾಗಿ ನನಗೆ ಇಲ್ಲಿ ಕಂಫರ್ಟ್ ಅನಿಸ್ತಿದೆ.
ಈ ಪಾತ್ರಕ್ಕೆ ನಿಮ್ಮನ್ನು ನೀವು ಹೇಗೆ ತಯಾರು ಮಾಡಿಕೊಳ್ಳುತ್ತಿದ್ದೀರಿ?
ಕಾಮಿನಿಯಾಗಿ ನಾನು ಪಾತ್ರ ಮಾಡುವಾಗ ನಾನು ಯಾವುದೇ ತಯಾರಿ ಮಾಡಿಕೊಳ್ಳುವುದಿಲ್ಲ. ಆದ್ರೆ ಆ ಪಾತ್ರದಿಂದ ಹೊರ ಬರುವುದಕ್ಕೆ ನನಗೆ ತುಂಬಾ ಸಮಯ ಬೇಕಾಗುತ್ತದೆ. ನಾರ್ಮಲ್ ರೋಲ್ ಮಾಡಿದ್ದರೆ ಈ ರೀತಿಯ ಸಮಸ್ಯೆ ಆಗುತ್ತಿರಲಿಲ್ಲ ಆದರೆ ನೆಗೆಟಿವ್ ಅಥವಾ ಇಂತಹ ರೋಲ್ ಮಾಡುವಾಗ ಸಮಸ್ಯೆ ಆಗುತ್ತದೆ.
ನೆಗೆಟಿವ್ ಪಾತ್ರಕ್ಕೆ ನೆಗೆಟಿವ್ ಆಗಿ ಮಾತಾಡ್ತಾರೆ. ಕೋಪಗೊಳ್ಳುತ್ತಾರೆ. ಬೈತಾರೆ. ಹೇಗೆ ಹ್ಯಾಂಡಲ್ ಮಾಡ್ಬೇಕು ಅಂದುಕೊಂಡಿದದ್ದೀರಾ?
ನೆಗೆಟಿವ್ ಪಾತ್ರಕ್ಲೆ ಎಷ್ಟು ಬೈತಾರೋ ಅಷ್ಟು ಒಳ್ಳೆಯದು ಅನ್ನೋದನ್ನು ನಾನು ಅರಿತುಕೊಂಡಿದ್ದೇನೆ. ಸ್ವಲ್ಪ ಬೈತಾರೆ ಆದನ್ನು ನಾನು ಸ್ಪೋರ್ಟಿವ್ ಆಗಿ ತೊಗೋತೀನಿ.
ನೀವು ಧಾರಾವಾಹಿಯಲ್ಲಿ ನಟಿಸುತ್ತಿದ್ದೀರಿ. ಮುಂದೆ ಸಿನಿಮಾಗಳಲ್ಲಿ ಅವಕಾಶ ಬಂದ್ರೆ ಹೋಗ್ತೀರಾ?
ಹೌದು.. ಈಗ ಧಾರಾವಾಹಿ ಮಾಡುತ್ತಲೇ ನನಗೆ ಸಿನಿಮಾ ಅವಕಾಶ ಬಂದ್ರೆ ನಾನು ಹೋಗುತ್ತೇನೆ. ನಾನು ಒಂದೊಂದೆ ಹೆಜ್ಜೆ ಮುಂದಿಡಬೇಕು ಎಂದುಕೊಂಡಿದ್ದೇನೆ. ಏನೇ ಆದ್ರೂ ನಾನು ಕೆಲಸವಿಲ್ಲದೇ ಹಾಗೆ ಕುಳಿತುಕೊಳ್ಳುವುದಕ್ಕೆ ಬಯಸೋದಿಲ್ಲ.
ಏನೇನು ಕನಸನ್ನು ಇಟ್ಟುಕೊಂಡು ಈ ಕ್ಷೇತ್ರಕ್ಕೆ ಬಂದಿದ್ದೀರಿ? ನಿಮ್ಮ ಗುರಿ ಏನು?
ಕನಸುಗಳು ತುಂಬಾ ದೊಡ್ಡದಿವೆ. ಅಭಿನೇತ್ರಿಯಾಗಬೇಕು ಎಂದು ನಾನು ಬಯಸುವುದು ಅದು ನನ್ನ ಜೀವನ ಪರ್ಯಂತ ಇರುತ್ತದೆ. ಸಿನಿಮಾಗಳಲ್ಲಿ ಕೂಡ ನಟಿಸಿ ನಾನು ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಎನ್ನುವುದು ನನ್ನ ಗುರಿ.
ಈ ಸುದ್ದಿಯನ್ನೂ ಓದಿ: Nooru Janmaku Serial: ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಪ್ರಸಾರವಾಗಲಿದೆ ಹಾರರ್ ಕಥೆಯುಳ್ಳ ಹೊಸ ಧಾರಾವಾಹಿ