Saturday, 10th May 2025

DHL QR CODE: ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡೋ ಮುನ್ನ ಎಚ್ಚರ…ಎಚ್ಚರ…! ಸ್ವಲ್ಪ ಯಾಮಾರಿದ್ರೂ ನಿಮ್ಮ ಹಣ ಮಂಗಮಾಯ

ಬೆಂಗಳೂರು: ಇಂದು ಆಧುನಿಕತೆ ತಂತ್ರಜ್ಞಾನ ಅಭಿವೃದ್ಧಿಯಾದಂತೆ ಮೋಸ ವಂಚನೆಗಳ ಜಾಲವು ಹೆಚ್ಚುತ್ತಿದೆ. ನಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಎಷ್ಟೇ ಗೌಪ್ಯವಾಗಿ ಇಟ್ಟುಕೊಂಡರೂ ಇದು ಸುರಕ್ಷತೆ ಎನ್ನುವ ನಂಬಿಕೆಯು ನಮ್ಮಲ್ಲಿಯೇ ಇಲ್ಲ. ಸೈಬರ್​  ಖದೀಮರು, ಸ್ಕಾಮ್ಯರ್ ಗಳು ನಮ್ಮೆಲ್ಲಾ ಮಾಹಿತಿಯನ್ನು ಬಳಸಿಕೊಂಡು ವಂಚನೆ ಮಾಡುವ  ಪ್ರಕರಣಗಳು ಇಂದು‌ ಅಷ್ಟರ ಮಟ್ಟಿಗೆ  ಹೆಚ್ಚಾಗಿದೆ. ಹಾಗಾಗಿ ಡಿಎಚ್ಎಲ್ (DHL QR CODE) ಸ್ಕಾಮ್ಯರ್ ಕುರಿತಾಗಿಯು ಇಂದು  ಜಾಗೃತರಾಗಬೇಕಿದೆ.

ಏನಿದು DHL QR CODE ಜಾಲ?

ಕೊರಿಯರ್ ವಿತರಣಾ ನೆಪ ಹೇಳಿ ಮೋಸಗೊಳಿಸುವ ಜಾಲ ಇದಾಗಿದೆ. ಐರ್ಲೆಂಡ್, ಸಿಂಗಾಪುರ್ ಮತ್ತು ಭಾರತದಂತಹ ದೇಶಗಳು ಈ ವಂಚನೆಯ ಪ್ರಕರಣಗಳ ಬಗ್ಗೆ  ವರದಿ ಮಾಡಿದೆ. ಈ ಹಗರಣದ ಬಗ್ಗೆ ತಿಳಿಯಪಡಿಸಲು  ಸಾರ್ವಜನಿಕ ಎಚ್ಚರಿಕೆ  ಸಲಹೆಗಳನ್ನು ನೀಡಿದೆ. ಯಾವುದೇ ವೆಬ್‌ಸೈಟ್‌ನೊಂದಿಗೆ ಸಂವಹನ  ಮಾಡುವ ಮೊದಲು ಆ ಲಿಂಕ್ ನ ದೃಢೀಕರಣವನ್ನು ಪರಿಶೀಲಿಸುವ ಮೂಲಕ ಜಾಗೃತ ಗೊಳ್ಳಿ ಎಂದು ಸಲಹೆ ನೀಡಿದೆ. ಯಾವುದೇ  ಅಪರಾಧವನ್ನು ತಡೆಯಲು ನೀವು ಯಾವುದೇ ಅಪರಿಚಿತ ವ್ಯಕ್ತಿಗಳೊಂದಿಗೆ ಸಂವಹನ ಮಾಡುವುದನ್ನು ತಪ್ಪಿಸಬೇಕು. ಯಾವುದೇ QR ಕೋಡ್ ಅನ್ನು ಸ್ಕ್ಯಾನ್ ಮಾಡುವ, ಯಾವುದೇ ಅನಗತ್ಯ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎನ್ನುವ ಸೂಚನೆಯನ್ನು  ನೀಡಿದೆ.

ಈ ಬಗ್ಗೆ ಖಚಿತಪಡಿಸಿಕೊಳ್ಳಿ

ಕೊರಿಯರ್ ಹಗರಣಗಳು ಇಂದು‌ ಹೆಚ್ಚುತ್ತಿದ್ದು ಸ್ಕ್ಯಾಮರ್‌ಗಳು  DHL ನ ಬ್ರ್ಯಾಂಡಿಂಗ್ ಅನ್ನು ಸಮರ್ಥವಾಗಿ ಅನುಕರಣೆ ಮಾಡಿ  ಮೋಸ ಮಾಡುತ್ತಾರೆ.ನೀವು ಯಾವುದೇ ಕೊರಿಯರ್ ಸೇವೆಗಳನ್ನು ಬಳಸಿದ್ದರೆ ಈ ಬಗ್ಗೆ ಖಚಿತ ಪಡಿಸಿಕೊಳ್ಳಿ. ಇಂದು ಫೆಡ್ಎಕ್ಸ್ ಕೊರಿಯರ್’ ಎಂಬ ವಂಚನೆಯು ಸದ್ದು ಮಾಡುತ್ತಿದ್ದು‌, ನಿಮ್ಮ ಹೆಸರು ಮತ್ತು ವಿಳಾಸದಲ್ಲಿ ಅಕ್ರಮ ಶಸ್ತ್ರಾಸ್ತ್ರ, ವಸ್ತುಗಳು ಬಂದಿವೆ ಎಂದು ತನಿಖಾ ಸಂಸ್ಥೆಗಳ ಹೆಸರಿನಲ್ಲಿ ಬೆದರಿಸಿ ಹಣ ವಸೂಲಿ ಮಾಡುವ ಪ್ರಕರಣಗಳು ನಡೆದಿದೆ.

ಈ ಪ್ರಕರಣ ನಡೆದಿತ್ತು

ಇತ್ತಿಚೆಗಷ್ಟೇ ಡಿ.ಎಚ್‌.ಎಲ್ ಕೊರಿಯರ್ ಕಂಪನಿ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ಕೊರಿಯರ್‌ ಪಾರ್ಸೆಲ್‌ನಲ್ಲಿ   ಪಾಸ್‌ಪೋರ್ಟ್, ಬ್ಯಾಂಕ್ ಕ್ರೆಡಿಟ್‌ ಕಾರ್ಡ್ಸ್‌, ಮಾದಕ ವಸ್ತುಗಳು ಇವೆ. ಸಿಬಿಐ ಅಧಿಕಾರಿಗಳು ತನಿಖೆ ಮಾಡುತ್ತಾರೆ,ತಾನು  ಸಿಬಿಐ ಅಧಿಕಾರಿ ಎಂದು ಹೇಳಿ ಬ್ಯಾಂಕ್ ಖಾತೆಯಿಂದ ಹಣ ದೋಚಿರುವ ಪ್ರಕರಣ ನಡೆದಿತ್ತು.ಹಾಗಾಗಿ ಕೊರಿಯರ್ ಸೇವಾ ಬಳಕೆದಾರರಲ್ಲಿ ಜಾಗರೂಕತೆಯ ಬಗ್ಗೆ ಹಾಗೂ  ಸಾರ್ವಜನಿಕರನ್ನು ಎಚ್ಚರಿಸಲು DHL  ಈ  ಸಲಹೆಗಳನ್ನು ನೀಡಿದೆ. 

ಇದನ್ನು ಓದಿ:Chikkaballapur News: ಕೀರ್ತಿ ಯಶಸ್ಸು ಬಂದಾಗ ನಿಭಾಯಿಸುವುದನ್ನು ಕಲಿತವರೇ ಉತ್ತಮ ಸಾಧಕ ರಾಗುತ್ತಾರೆ: ಚುಂಚಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ