ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ನಿಮಿತ್ತ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಪಾರ್ಮ್ ಕಂಡುಕೊಳ್ಳಲು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ಕಾಮೆಂಟೇಟರ್ ಸಂಜಯ್ ಬಾಂಗರ್ ಮಹತ್ವದ ಸಲಹೆಯನ್ನು ನೀಡಿದ್ದಾರೆ.
ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ, ನಂತರ ಆಡಿದ್ದ ಮೂರೂ ಇನಿಂಗ್ಸ್‌ಗಳಲ್ಲಿ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇದೀಗ ಉಭಯ ತಂಡಗಳ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಂದು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ತಯಾರಿಯನ್ನು ನಡೆಸುತ್ತಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಸಂಜಯ್ ಮಾಂಜ್ರೇಕರ್, ಮೆಲ್ಬರ್ನ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ವೇಳೆ ತಾಳ್ಮೆಯಿಂದ ಇರಬೇಕಾದ ಅಗತ್ಯವಿದೆ. ಅದರಲ್ಲಿಯೂ ವಿಶೇಷ ಆಫ್ ಸೈಡ್ ಹೊರಗಿನ ಎಸೆತಗಳನ್ನು ಆಡುವಾಗ ಬಹಳ ಎಚ್ಚರಿಕೆಯಿಂದ ಆಡಬೇಕಾಗುತ್ತದೆ. ಈ ದೌರ್ಬಲ್ಯವನ್ನು ಇಟ್ಟುಕೊಂಡು ಆಸ್ಟ್ರೇಲಿಯಾ ಬೌಲರ್‌ಗಳು ವಿರಾಟ್ ಕೊಹ್ಲಿಯನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿರಾಟ್ ಕೊಹ್ಲಿಗೆ ಸಂಜಯ್ ಬಾಂಗರ್ ಸಲಹೆ
“ಕೆಲವೊಮ್ಮೆ ಬ್ಯಾಟ್ಸ್‌ಮನ್ ಆಗಿ ನೀವು ನಿಮ್ಮ ಸಂಗತಿಗಳನ್ನು ನಿಯಂತ್ರಿಸಬೇಕಾಗುತ್ತದೆ. ನೀವು ಬ್ಯಾಟಿಂಗ್ ನಡೆಸಲು ಕ್ರೀಸ್‌ಗೆ ಹೋದಾಗ ಸ್ವಲ್ಪ ತಾಳ್ಮೆ ಮತ್ತು ಶಾಂತತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಆರಂಭದಲ್ಲಿ ಸ್ವಲ್ಪ ಸಮಯ ಕ್ರೀಸ್‌ನಲ್ಲಿ ಸಮಯ ಕಳೆಯಬೇಕು ಹಾಗೂ ಸಾಧ್ಯವಾದಷ್ಟು ಹೆಚ್ಚಿನ ಎಸೆತಗಳನ್ನು ಆಡಬೇಕು. ಈ ವೇಳೆ ನೀವು ಯಾವುದೇ ಕಾರಣ ಬೌಲರ್ ಮೇಲೆ ದಾಳಿ ನಡೆಸಬಾರದು ಹಾಗೂ ಅವರೇ ನಿಮ್ಮ ಬಳಿ ಬರಬೇಕು. ಇದು ದೊಡ್ಡ ಆಟಗಾರನ ಲಕ್ಷಣ,” ಎಂದು ಸಂಜಯ್ ಬಾಂಗರ್ ತಿಳಿಸಿದ್ದಾರೆ.
“ನಿಮ್ಮ ಫ್ರಂಟ್ ಫುಟ್ ಪ್ಯಾಡ್‌ಗೆ ಕ್ಲೋಸ್‌ಗೆ ಸಾಧ್ಯವಾದಷ್ಟು ಹೆಚ್ಚಿನ ಎಸೆತಗಳನ್ನು ಆಡಿ ಹಾಗೂ ನಿಮ್ಮನ್ನು ರನ್‌ಗಳು ಹಿಂಬಾಲಿಸುತ್ತವೆ. ಏಕೆಂದರೆ ಅವರು ಈ ಹಾದಿಯಲ್ಲಿ ರನ್ ಗಳಿಸುತ್ತಿಲ್ಲ. ಮೂರು ಇನಿಂಗ್ಸ್‌ಗಳಿಗೂ ಹಿಂದೆ ಅವರು ಶತಕವನ್ನು ಸಿಡಿಸಿದ್ದರು ಹಾಗೂ ನ್ಯೂಜಿಲೆಂಡ್ ಎದುರು ಬೆಂಗಳೂರಿನಲ್ಲಿ 70 ರನ್‌ಗಳನ್ನು ಗಳಿಸಿದ್ದರು,” ಎಂದು ಅವರು ಹೇಳಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಅವರು ಆಡಿದ್ದ ಐದು ಇನಿಂಗ್ಸ್‌ಗಳಿಂದ 30ರ ಸರಾಸರಿಯಲ್ಲಿ 126 ರನ್‌ಗಳನ್ನು ಗಳಿಸಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಅವರು ನಂತರ ಇನ್ನುಳಿದ ಐದು ಇನಿಂಗ್ಸ್‌ಗಳಿಂದ ಗಳಿಸಿದ್ದು ಕೇವಲ 26 ರನ್‌ಗಳು ಮಾತ್ರ.
ಈ ಸುದ್ದಿಯನ್ನು ಓದಿ: IND vs AUS: ವಿರಾಟ್ ಕೊಹ್ಲಿ ಅಲ್ಲ, ಭಾರತಕ್ಕೆ ಯಶಸ್ವಿ ಜೈಸ್ವಾಲ್ ಎಕ್ಸ್ ಫ್ಯಾಕ್ಟರ್ ಎಂದ ರವಿಶಾಸ್ತ್ರಿ!