Sunday, 11th May 2025

Camp: ಡಿ.22 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಿಕ್ಕನಾಯಕನಹಳ್ಳಿ : ತುಮಕೂರಿನ ಶ್ರೀ ದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ, ರೋಟರಿ ಕ್ಲಬ್, ತಾಲ್ಲೂಕು ಆಸ್ಪತ್ರೆ ಸಹಯೋಗದಲ್ಲಿ ಡಿ.೨೨ ರಂದು ಇಲ್ಲಿನ ರೋಟರಿ ಶಾಲಾ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಅಡಿಟರ್ ಲಿಂಗದೇವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ ೧೧ ಗಂಟೆಯಿ0ದ ಮಧ್ಯಾಹ್ನ ೩ ಗಂಟೆಯವರೆಗೆ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಜನರಲ್ ಮೆಡಿಸನ್, ಹೃದಯ ಸಂಬ0ಧಿ ಕಾಯಿಲೆಗಳು, ನರರೋಗ, ಮೂತ್ರಪಿಂಡ ತೊಂದರೆಗಳ ತಪಾಸಣೆ ನಡೆಸಲಾಗುವುದು. ತಜ್ಞ ವೈದ್ಯರು ಉಚಿತ ತಪಾಸಣೆ ನಡೆಸಿ ಸಲಹೆ ನೀಡಲಿದ್ದಾರೆ.

ವೈದ್ಯರು ಸಲಹೆ ನೀಡಿದರೆ ಕೆಲವು ತಪಾಸಣೆಗಳನ್ನು ಸ್ಥಳದಲ್ಲಿ ಉಚಿತವಾಗಿ ಮಾಡಲಾಗುವುದು ಇದರ ಸದುಪ ಯೋಗ ಪಡೆಯಬೇಕು ಎಂದರು.

ಶ್ರೀ ದೇವಿ ಆಸ್ಪತ್ರೆ ಸಿಇಓ ಪ್ರದೀಪ್, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರಸನ್ನಕುಮಾರ್, ರೋಟರಿಯನ್ ಸುರೇಶ್, ಮಿಲಿಟರಿ ಶಿವಣ್ಣ, ಡಾ.ವಿಜಯರಾಘವೇಂದ್ರ ಇದ್ದರು.