Saturday, 10th May 2025

Jailer 2 Update: ಸೂಪರ್ ಸ್ಟಾರ್ ರಜನಿಕಾಂತ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಹೊಸ ವರ್ಷದ ಆರಂಭದಲ್ಲೇ ಸೆಟ್ಟೇರಲಿದೆ ‘ಜೈಲರ್ 2’

Rajinikanth Jailer 2

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಅವರಿಗೆ ಇಡೀ ದೇಶಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ. ರಜನಿಕಾಂತ್‌ ಅವರ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿರುತ್ತಾರೆ. ಅಂತಹವರಿಗೆಂದೇ ತಲೈವಾ 2025ರ ಹೊಸ ವರ್ಷದ ಆರಂಭಕ್ಕೂ ಮುನ್ನವೇ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದ್ದಾರೆ (Jailer 2 Update).

ರಜನಿಕಾಂತ್‌ ಅಭಿನಯದ ʼಜೈಲರ್ʼ ಸಿನಿಮಾ 2023ರಲ್ಲಿ  ಬಾಕ್ಸ್ ಆಫೀಸ್ ಧೂಳೆಬ್ಬಿಸಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ ʼಜೈಲರ್ 2ʼ ಸೆಟ್ಟೇರಲು ಸಿದ್ಧವಾಗಿದೆ. ‘ಜೈಲರ್‌’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ನೆಲ್ಸನ್ ದಿಲೀಪ್ ಕುಮಾರ್ ಇದೀಗ ‘ಜೈಲರ್ 2’ ಚಿತ್ರೀಕರಣಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ.  ಈ ಮೂಲಕ ಸೂಪರ್ ಸ್ಟಾರ್ ಜತೆ ನಿರ್ದೇಶಕ ನೆಲ್ಸನ್  ಅವರ ಎರಡನೇ ಸಿನಿ ಜರ್ನಿ ಆರಂಭವಾಗಲಿದೆ.

ಅಭಿಮಾನಿಗಳಿಗೆ ಕುತೂಹಲ

ʼಜೈಲರ್ʼ ಸಿನೆಮಾದಲ್ಲಿ ರಜನೀಕಾಂತ್ ಜತೆಗೆ ವಿನಾಯಕನ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣ, ವಸಂತ ರವಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌ ನಟ ಶಿವರಾಜ್ ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದರು. ಬಾಕ್ಸ್ ಆಫೀಸ್ 600 ಕೋಟಿ ಕೋಟಿ ರೂ. ದೋಚುವ ಮೂಲಕ ಇದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ‘ಜೈಲರ್ 2’ ಚಿತ್ರದಲ್ಲಿ ರಜನಿಕಾಂತ್‌ ಜತೆಗೆ ಯಾರೆಲ್ಲ ಸ್ಟಾರ್ ನಟ ನಟಿಯರು ತೆರೆ ಹಂಚಿಕೊಳ್ಳಬಹುದು ಎನ್ನುವ ಕುತೂಹಲ ಮೂಡಿದೆ. 2025ರಲ್ಲಿ ರಜನಿಕಾಂತ್‌ ಅಬಿನಯದ ʼಕೂಲಿʼ ಸಿನೆಮಾ ರಿಲೀಸ್ ಆಗಲಿದ್ದು, ಅದರ ಬೆನ್ನಿಗೆ ʼಜೈಲರ್ 2ʼ ಸೆಟ್ಟೇರಲಿದೆ ಎಂದು ಮೂಲಗಳು ತಿಳಿಸಿವೆ.

ತಲೈವಾ ಈಗ ಫುಲ್ ಬ್ಯುಸಿ

ಸೂಪರ್ ಸ್ಟಾರ್ ತಲೈವಾ ರಜನಿಕಾಂತ್‌ ಈ ಇಳಿವಯಸ್ಸಿನಲ್ಲಿಯೂ ಹಲವು ಚಿತ್ರಗಲಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ರಿಲೀಸ್‌ ಆದ ಟಿ.ಜೆ. ಜ್ಞಾನವೇಲ್ ಅವರ ನಿರ್ದೇಶನದ ʼವೆಟ್ಟೈಯನ್ʼನಲ್ಲಿ ಅಮಿತಾಭ್‌ ಬಚ್ಚನ್, ಫಹದ್ ಫಾಸಿಲ್, ರಾಣಾ ದುಗ್ಗುಬಾಟಿ, ಮಂಜು ವಾರಿಯರ್ ಜತೆ ಸಿನಿ ತೆರೆ ಹಂಚಿಕೊಂಡಿದ್ದರು. ಸದ್ಯ ರಜನಿಕಾಂತ್‌ ಅವರು ಲೋಕೇಶ್ ಕನಗರಾಜ್ ನಿರ್ದೇಶನದ ʼಕೂಲಿʼ ಸಿನೆಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಯಾವಾಗ ಆರಂಭ?

ʼಜೈಲರ್ʼ ಸಿನೆಮಾದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಜೀವನ, ನಾಪತ್ತೆಯಾದ ಮಗನ ಹುಡುಕಾಟ ಎಲ್ಲವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿತ್ತು. ಇದೀಗ ʼಜೈಲರ್ 2′ ಚಿತ್ರದಲ್ಲಿ ನಿರ್ದೇಶಕರು ಯಾವ ಎಳೆ ಬಿಚ್ಚಿಡಬಹುದು ಎನ್ನುವ ಕುತೂಹಲ ಮೂಡಿದೆ. ಜೈಲರ್ 2 ಚಿತ್ರೀಕರಣ 2025ರ ಮಾರ್ಚ್‌ನಿಂದ ಆರಂಭ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೊಸ ವರ್ಷ ಆರಂಭಕ್ಕೂ ಮುನ್ನವೇ ʼಜೈಲರ್ 2′ ಚಿತ್ರ ಕಲಾವಿದರು, ತಂತ್ರಜ್ಞರ ಮಾಹಿತಿ ಪ್ರಕಟಿಸುವ ಸಾಧ್ಯತೆ ಇದೆ. ಚಿತ್ರ 2025ರ ಕೊನೆಯಲ್ಲಿ ಅಥವಾ 2026ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

ಇದನ್ನು ಓದಿ: ಗಾಂಧೀಜಿಯ ಸರಳಂ, ಶಿವಂ, ಸುಂದರಂ