ಢಾಕಾ: ಬಾಂಗ್ಲಾದೇಶದಲ್ಲಿ (Bangladesh Unrest) ಸದ್ಯಕ್ಕೆ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಲ್ಲುವಂತೆ ಕಾಣಿಸುತ್ತಿಲ್ಲ. ಪದೇ ಪದೆ ಹಿಂದೂಗಳ ದೇವಾಲಯಗಳ (temples vandalised) ಮೇಲೆ ದಾಳಿ ನಡೆಯುತ್ತಿದೆ. ಒದೇ ವಾರದಲ್ಲಿ ಮೂರು ಹಿಂದೂ ದೇವಾಲಯಗಳಲ್ಲಿ ಇರಿಸಲಾಗಿದ್ದ ಎಂಟು ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಬಾಂಗ್ಲಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ (Bangladesh Government).
ದಿನಾಜ್ಪುರದಲ್ಲಿ ಐದು ವಿಗ್ರಹಗಳನ್ನು ಧ್ವಂಸಗೊಳಿಸಿದ್ದರೆ, ಮೈಮೆನ್ಸಿಂಗ್ನಲ್ಲಿ ಎರಡು ದೇವಾಲಯಗಳಲ್ಲಿ ಮೂರು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಲುಘಾಟ್ನ ಶಾಕುವಾಯ್ ಯೂನಿಯನ್ನಲ್ಲಿರುವ ಬೊಂಡರ್ಪಾರಾ ದೇವಾಲಯದ ಎರಡು ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಹಲುಘಾಟ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ (ಒಸಿ) ಅಬುಲ್ ಖಯೇರ್ ಹೇಳಿದ್ದಾರೆ. ಶುಕ್ರವಾರ ಮುಂಜಾನೆ ಹಲುಘಾಟ್ನ ಶಾಕುವಾಯ್ ಯೂನಿಯನ್ನಲ್ಲಿರುವ ಬೋಂಡರ್ಪಾರಾ ದೇವಾಲಯದ ಎರಡು ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಈ ಸಂಬಂಧ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಖಯೇರ್ ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಗುರುವಾರ ಮುಂಜಾನೆ ಹಲುಘಾಟ್ನ ಬೀಳ್ದೊರಾ ಯೂನಿಯನ್ನಲ್ಲಿರುವ ಪೊಲಾಷ್ಕಂಡನ ಕಾಳಿ ದೇವಸ್ಥಾನದಲ್ಲಿ ದುಷ್ಕರ್ಮಿಗಳು ವಿಗ್ರಹವನ್ನು ನಾಶಪಡಿಸಿದ್ದಾರೆ. ಘಟನೆ ಸಂಬಂಧ ಪೋಲಷ್ಕಂಡ ಗ್ರಾಮದ 27 ವರ್ಷದ ಯುವಕನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಲಾಲ್ ಉದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ, ಆತನ್ನನು ಶುಕ್ರವಾರ ಮಧ್ಯಾಹ್ನ ಮೈಮೆನ್ಸಿಂಗ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಒಸಿ ತಿಳಿಸಿದ್ದಾರೆ.
ಗುರುವಾರ ಮುಂಜಾನೆ ಪೋಲಷ್ಕಂಡ ಕಾಳಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸುವಾಶ್ಚಂದ್ರ ಸಾರ್ಕರ್ ಅವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಜ್ಪುರದ ಬಿರ್ಗಂಜ್ ಉಪಜಿಲ್ಲೆಯಲ್ಲಿ ಮಂಗಳವಾರ ಜರ್ಬರಿ ಶಶನ್ ಕಾಳಿ ದೇವಸ್ಥಾನದಲ್ಲಿ ಐದು ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಭಾರಿ ಅಧಿಕಾರಿ ಅಬ್ದುಲ್ ಗಫೂರ್ ತಿಳಿಸಿದ್ದಾರೆ.
ನಾಲ್ವರ ಬಂಧನ
ಕಳೆದ ವಾರ ಉತ್ತರ ಬಾಂಗ್ಲಾದೇಶದ ಸುನಮ್ಗಂಜ್ ಜಿಲ್ಲೆಯಲ್ಲಿ ಹಿಂದೂ ದೇವಾಲಯ ಮತ್ತು ಸಮುದಾಯದವರ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Bangla Unrest: ಭಾರತಕ್ಕೆ ಅನಧಿಕೃತ ಪ್ರವೇಶ; 10 ಬಾಂಗ್ಲಾದೇಶಿ ಹಿಂದೂಗಳು ಅಗರ್ತಲಾದಲ್ಲಿ ಪೊಲೀಸ್ ವಶಕ್ಕೆ