Saturday, 10th May 2025

BBK 11: ಹ್ಯಾಟ್ರಿಕ್ ಕಳಪೆ: ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೊಸ ರೆಕಾರ್ಡ್

Chaithra Kundapura in Jail (2)

ಚೈತ್ರಾ ಕುಂದಾಪುರ (Chaithra Kundapura) ಅವರು ಹೊರಗಡೆ ಮಾತ್ರವಲ್ಲದೆ ಬಿಗ್ ಬಾಸ್ ಮನೆಯಲ್ಲೂ ಜೈಲಿಗೆ ಹೋಗುವ ಮೂಲಕ ಸುದ್ದಿಯಲ್ಲಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 12ನೇ ವಾರದಲ್ಲಿದೆ. ಮಹತ್ವದ ಘಟ್ಟಕ್ಕೆ ತಲುಪಿರುವ ಶೋನಲ್ಲಿ ಬಲಿಷ್ಠ ಸ್ಪರ್ಧಿಗಳಿದ್ದಾರೆ. ಈ ವಾರ ಎರಡು ಗುಂಪುಗಳಾಗಿ ನಡೆದ ಟಾಸ್ಕ್ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು. ಜೊತೆಗೆ ಬಹುತೇಕ ಎಲ್ಲ ಟಾಸ್ಕ್​ನಲ್ಲಿ ಜಗಳ ಕೂಡ ಅತಿರೇಕಕ್ಕೆ ಹೋಯಿತು.

ಟಾಸ್ಕ್ ಮಧ್ಯೆ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ ಕುಂದಾಪುರ ತೆಗೆದುಕೊಂಡ ಕೆಲವು ನಿರ್ಧಾರಗಳು ಅನೇಕ ಕೆಂಗಣ್ಣಿಗೆ ಕೂಡ ಗುರಿಯಾಯಿತು. ಇದರ ಪರಿಣಾಮ ಈ ವಾರದ ಕಳಪೆ ಪಟ್ಟ ಪಡೆದು ಜೈಲಿಗೆ ಹೋಗಿದ್ದಾರೆ. ಚೈತ್ರಾ ಕುಂದಾಪುರ ಜೈಲಿಗೆ ಹೋದ ಕೂಡಲೇ ಹೊಸ ರೆಕಾರ್ಡ್ ಕ್ರಿಯೇಟ್ ಆಗಿದೆ. ಅಂದರೆ ಚೈತ್ರಾ ಅವರು ಮೂರನೇ ಬಾರಿ ದೊಡ್ಮನೆಯಲ್ಲಿ ಜೈಲಿಗೆ ತೆರಳಿ ಹ್ಯಾಟ್ರಿಕ್ ಕಳಪೆ ಪಡೆದುಕೊಂಡಿದ್ದಾರೆ.

ಈ ವಾರ ಬಿಗ್‌ ಬಾಸ್‌ ನೀಡಿದ್ದ ಕೆಲವು ಟಾಸ್ಕ್‌ಗಳ ಉಸ್ತುವಾರಿಯಾಗಿದ್ದ ಚೈತ್ರಾ ಕುಂದಾಪುರ ತಂಡಗಳ ನಡುವೆ ಪಕ್ಷಪಾತಿ ನೀತಿ ಅನುಸರಿಸಿದರು ಎಂದು ಹೇಳಿರುವ ಮನೆಯ ಇತರ ಸ್ಪರ್ಧಿಗಳು ಈ ವಾರದ ಕಳಪೆ ಪಟ್ಟವನ್ನು ಚೈತ್ರಾ ಅವರಿಗೆ ನೀಡಿದ್ದಾರೆ. ಈ ಮೂಲಕ ಬಿಗ್‌ಬಾಸ್‌ ಮನೆಯಲ್ಲಿ ಮೂರನೇ ಬಾರಿಗೆ ಕಳಪೆ ಪಟ್ಟ ಹೊತ್ತು ಜೈಲು ಸೇರಿ ಅಪಖ್ಯಾತಿಗೆ ಒಳಗಾಗಿದ್ದಾರೆ.

ಅದರಲ್ಲೂ ಸದಾ ಸೈಲೆಂಟ್ ಆಗಿರುವ ಹನುಮಂತ ಈ ವಾರ ಕೊಂಚ ವೈಲೆಂಟ್ ಆಗಿದ್ದರು. ಇದು ಕಳಪೆ ನೀಡುವ ಸಂದರ್ಭ ಕೂಡ ಕಾಣಿಸಿಕೊಂಡಿದೆ. ಚೈತ್ರಾ ಅವರಿಗೆ ಕಳಪೆ ನೀಡುವಾಗ ಹನುಮಂತ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಾರ ಉಸ್ತುವಾರಿಯಲ್ಲಿ ಚೈತ್ರಾ ಪಕ್ಷಪಾತ ಮಾಡಿದರು ಎಂಬ ಕಾರಣಕ್ಕೆ ಹಲವರು ಕಳಪೆಯನ್ನು ಕೊಟ್ಟರು. ಈ ಬಗ್ಗೆ ಚೈತ್ರಾ ಅವರು ಗುಂಪು ಕಟ್ಟಿಕೊಂಡು ಕಳಪೆ ನೀಡುತ್ತೀದ್ದೀರಾ ಎಂದು ವಾದಿಸಿದರು. ಆದರೆ, ಹನುಮಂತ ಸ್ವಲ್ಪ ಗರಂ ಆಗಿ, ನಿನಗೆ ಪದೇ ಪದೇ ಕಳಪೆ ಕೊಡೋಕೆ ನೀನೇನು ದೊಡ್ಡಪ್ಪನ ಮಗಳು, ಅತ್ತೆ ಮಗಳಲ್ಲ ಎಂದಿದ್ದಾರೆ.

BBK 11: ಎಲಿಮಿನೇಷನ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್: ಏನದು?