Sunday, 11th May 2025

Mahadevayya Karadalli Column: ಹಿಂದುಗಳು ಸಂಘಟಿತರಾಗಿ ಬೆಳೆಯಬೇಕು

ಅಭಿಮತ

ಮಹಾದೇವಯ್ಯ ಕರದಳ್ಳಿ

ಕಬಡ್ಡಿ ಆಡುವಾಗ ಆಟದ ಮೈದಾನವನ್ನು, ತನ್ನ ತಂಡದ ಆಟಗಾರರನ್ನು ಮತ್ತು ಎದುರಾಳಿ ತಂಡದ
ಆಟಗಾರರನ್ನು ಸೂಕ್ಷ್ಮವಾಗಿ ಗಮನಿಸುವ ಆಟಗಾರ ಯಶಸ್ವಿ ಆಟಗಾರನಾಗುತ್ತಾನೆ. ತಾನು ಎದುರಿನ ತಂಡದ ಮೈದಾನದೊಳಗೆ ಪ್ರವೇಶಿಸುವಾಗ ತನ್ನ ಮೇಲಿರುವ ಏಳೂ ಜನರ ಕಣ್ಣುಗಳನ್ನು ಅವರ ನಡೆಗಳನ್ನು,
ಪಟ್ಟುಗಳನ್ನು ನೋಡುತ್ತ ಆಟ ಆಡಿ ಅಂಕ ಗಳಿಸಬೇಕು.

ಅಷ್ಟೇ ಅಲ್ಲ ಸತ್ತ (ಔಟಾಗಿರುವ) ಹೊರಗಿದ್ದ ತನ್ನವರನ್ನು ಮತ್ತೇ ಬದುಕಿಸಿ ಆಟಕ್ಕೆ ತೊಡಗಿಸಬೇಕು. ಕಬಡ್ಡಿ ಆಟಗಾರರಿಗೆ ಎರಡೂ ತಂಡಗಳ ಸದಸ್ಯರು ನಮ್ಮವರೇ ಎಂಬ ಅರಿವು ಇದ್ದಂತೆ ಹಿಂದುಗಳಿಗೆ ಎದುರಾಳಿ ತಂಡದ ಆಟಗಾರರು ಮುಸ್ಲಿಂರು, ಕ್ರಿಶ್ಚಿಯನ್ ಯಾರೇ ಆಗಿರಲಿ ಮೂಲತಃ ಹಿಂದುಗಳೇ ಆಗಿದ್ದವರು. ಯಾವುದೋ ಕಾರಣ ಕ್ಕಾಗಿ ಮತಾಂತರವಾಗಿ ಇಲ್ಲಿಯೇ ನೆಲೆಸಿದವರು ಮುಂದೆಯೂ ನಮ್ಮ ಜೊತೆ ಇರುವವರು ಮತ್ತು ಆಟಕ್ಕೋಸ್ಕರ ಬೇರೆ ಬೇರೆ ತಂಡಗಳಾಗಿ ಆಡುತ್ತಿದ್ದೇವೆ ಎಂಬ ಸಂಗತಿ ನೆನಪಿಡಬೇಕು ಮತ್ತು ಅನ್ಯಮತೀಯರಿಗೆ ಮನದಟ್ಟಾಗು ವಂತೆ ವ್ಯವಹರಿಸಬೇಕು. ಕಬಡ್ಡಿ ಆಟಗಾರ ಎದುರಾಳಿ ತಂಡದ ಶಕ್ತಿ ನೀಡುವ ಅಂಶಗಳು ಅಧ್ಯಯನ ಮಾಡುವಂತೆ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರ ರಚನಾತ್ಮಕ ಅಂಶಗಳತ್ತ ವಿಶೇಷ ಗಮನ ಹರಿಸಬೇಕು.

ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರಲ್ಲಿ ನೂರಾರು ಒಳಪಂಗಡಗಳಿದ್ದರೂ ಅವರು ತಮ್ಮನ್ನು ಅನ್ಯರಿಗೆ/ ಹೊರ ಜಗತ್ತಿಗೆ
ಪರಿಚಯಿಸಿ ಕೊಳ್ಳುವಾಗ ಒಳಪಂಗಡಗಳ ಹೆಸರು ಹೇಳುವ ಬದಲಾಗಿ ತಮ್ಮನ್ನು ತಾವು ಮುಸ್ಲಿಂ, ಕ್ರಿಶ್ಚಿಯನ್ ಎಂದೇ ಪರಿಚಯಿಸಿ ಕೊಳ್ಳುತ್ತಾರೆ. ಹಿಂದುಗಳು ಮಾತ್ರ ತಮ್ಮನ್ನು ಪರಿಚಯಿಸಿ ಕೊಳ್ಳುವಾಗ ಹಿಂದು ಎನ್ನದೇ ವೀರಶೈವ, ಬ್ರಾಹ್ಮಣ, ಕಬ್ಬಲಿಗ, ಕುರುಬ, ಹರಿಜನ ಮುಂತಾದ ಒಳ ಪಂಗಡಗಳ ಹೆಸರಿನಲ್ಲಿ ಪರಿಚಯಿಸಿ ಕೊಳ್ಳುತ್ತಾರೆ. ಹಿಂದುಗಳು ತಮ್ಮನ್ನು ತಾವು ಹಿಂದು ಎಂದು ಪರಿಚಯಿಸಿಕೊಳ್ಳಬೇಕು.

ಮುಸ್ಲಿಂರು ಮಸೀದಿಗಳಿಗೆ, ಕ್ರಿಶ್ಚಿಯನ್‌ರು ಚರ್ಚಗಳಿಗೆ ಬಂದಾಗ ಅಲ್ಲಿನ ಪಾವಿತ್ರ್ಯತೆ ಕಾಯ್ದುಕೊಳ್ಳುವ ಎಲ್ಲ
ನಿಯಮಗಳನ್ನು ಸ್ವಇಚ್ಛೆಯಿಂದ ಪಾಲಿಸುತ್ತಾರೆ. ಯಾರೊಬ್ಬರೂ ಕುಡಿದು ಬರುವುದಿಲ್ಲ. ಅಪ್ಪಿತಪ್ಪಿ ಆಕಸ್ಮಿಕವಾಗಿ ಕುಡಿದದ್ದು ಕಂಡು ಬಂದರೆ ಕಂಡವರು ಬಾಗಿಲಲ್ಲಿ/ ದ್ವಾರದಲ್ಲಿ ಕುಡುಕನನ್ನು ತಡೆದು ಆಚೆ ಹಾಕುತ್ತಾರೆ.

ಮಕ್ಕಳಿರಲಿ, ಮುದುಕರಿರಲಿ ಕೈಕಾಲು ತೊಳೆದು ಕೊಂಡು ಮಸೀದಿ ಒಳಗೆ ಪ್ರವೇಶ ಮಾಡುತ್ತಾರೆ. ಪುಟ್ಟ ಮಕ್ಕಳ ಕಾಲಿಗೆ ಚಪ್ಪಲಿ, ಬೂಟು, ಪಾದರಕ್ಷೆ ಸಹಿತ ಒಳಗೆ ಕರೆದುಕೊಂಡು ಬರುವುದಿಲ್ಲ. ಮಕ್ಕಳಿಗೂ ಒಂದು, ಎರಡು ಮಾಡಲು ಬಿಡುವುದಿಲ್ಲ. ಮಸೀದಿಯಲ್ಲಿ, ಚರ್ಚಗಳಲ್ಲಿ ಯಾರೂ ಬೀಡಿ ಸಿಗರೇಟ, ಗುಟಕಾ ಬಳಸುವುದಿಲ್ಲ.
ಹಿಂದೂ ದೇವಸ್ಥಾನಗಳಲ್ಲಿ, ಮಠ ಮಂದಿರಗಳಲ್ಲಿ ಸೂಕ್ತ ಶೌಚಾಲಯ, ಸ್ನಾನಗೃಹ, ಕುಡಿಯುವ ನೀರು, ವಿಶ್ರಾಂತಿ
ಸ್ಥಳ ಇಲ್ಲ . ಹಿಂದುಗಳು ತಾವೇ ಎಲ್ಲೆಂದರಲ್ಲಿ ತಿಂದ ಊಟದ ಎಲೆಗಳು, ಪ್ರಸಾದ, ತೆಂಗಿನ ಚಿಪ್ಪುಗಳನ್ನು ಬಿಸಾಡು ತ್ತಾರೆ.

ಪುಟ್ಟಮಕ್ಕಳ ಕಾಲಿಗೆ ಚಪ್ಪಲಿ, ಬೂಟು, ಪಾದರಕ್ಷೆ ಸಹಿತ ಒಳಗೆ ತರುತ್ತಾರೆ. ಮಕ್ಕಳು ಒಂದು, ಎರಡು ಮಾಡಿರುವು ದನ್ನು ಸ್ವಚ್ಛ ಮಾಡದೇ ಲಕ್ಷ್ಯ ಮಾಡುತ್ತಾರೆ. ಜನರಂತಿರಲಿ, ಪೂಜಾರಿಗಳೇ ಬೀಡಿ ಸಿಗರೇಟ, ಗುಟಕಾ ಬಳಸುತ್ತಾರೆ. ಗ್ರಾಮಗಳಲ್ಲಿನ ದೇವಸ್ಥಾನಗಳು ಕುಡುಕರ, ಜೂಜುಕೋರರ ಅಡ್ಡೆಗಳಾಗಿರುತ್ತವೆ. ದೇವಾಲಯಗಳ ವಸ್ತುಗಳನ್ನು ಸ್ವಂತಕ್ಕೆ ಬಳಸುತ್ತಾರೆ. ಇವೆಲ್ಲ ನಿಲ್ಲಿಸಬೇಕು.

ಮುಸ್ಲಿಂ ಕ್ರಿಶ್ಚಿಯನ್‌ರು ತಮ್ಮ ಮಾಂಸ, ಮಧ್ಯದ ಅಂಗಡಿಗಳಿಗೆ ಮಹ್ಮದ ಪೈಗಂಬರ, ಕುರಾನ, ಆಥವಾ ಬೈಬಲ್, ಏಸು ಕ್ರಿಸ್ತನ ಹೆಸರಿಡುವುದಿಲ್ಲ. ಆದರೆ ಹಿಂದುಗಳು ದೇವರ ಹೆಸರು ಇಡುತ್ತಾರೆ. ಈ ಎಲ್ಲ ಮಾಡಬಾರದ ಸಂಗತಿ ಗಳನ್ನು ತಕ್ಷಣ ನಿಲ್ಲಿಸಬೇಕು. ಒಟ್ಟಿನಲ್ಲಿ ದೇವಾಲಯಗಳು ಸ್ವಚ್ಛ ಸುಂದರ ತಾಣಗಳಾಗ ಬೇಕು. ಭಕ್ತಿಭಾವ
ಚಿಗರೊಡೆಯುವಂತಾಗಬೇಕು. ಮುಸ್ಲಿಂರು ವಾರಕ್ಕೊಮ್ಮೆ ಶುಕ್ರವಾರ, ಕ್ರಿಶ್ಚಿಯನ್‌ರು ರವಿವಾರ ಪ್ರಾರ್ಥನೆ ಮಾಡಲು ಹೋಗುತ್ತಾರೆ. ಪ್ರತಿ ಬಡಾವಣೆಯಲ್ಲಿರುವ ದೇವಾಲಯದಲ್ಲಿನ ಅಲ್ಲಿರುವ ದೇವರಿಗೆ ತಕ್ಕಂತೆ ಹಿಂದುಗಳು ಒಟ್ಟಾಗಿ ವಾರಕ್ಕೊಮ್ಮೆ ಮಂಗಳಾರತಿ ಪ್ರಾರ್ಥನೆ ಮಾಡಬೇಕು.

ಮುಸ್ಲಿಂರು ಹಣ, ಆಭಿವೃದ್ಧಿ ಕೆಲಸ ನೋಡಿ ಮತ ಹಾಕುವುದೂ ಇಲ್ಲ. ಮುಸ್ಲಿಂ ಹಿತ ಬೆಂಬಲಿಸುವ ಪಕ್ಷಕ್ಕೆ ಮಾತ್ರ ಮತ ಹಾಕುತ್ತಾರೆ. ಅದೇ ರೀತಿ ಹಿಂದೂ ಹಿತಕ್ಕೆ ಮತ ಹಾಕಬೇಕು. ಮುಸ್ಲಿಂರು, ಕ್ರಿಶ್ಚಿಯನ್‌ರ ಮನೆಗಳಲ್ಲಿನ ಹಿರಿಯರು ಕಿರಿಯರಿಗೆ ಅಥವಾ ದೊಡ್ಡ ಮಕ್ಕಳು ಚಿಕ್ಕಮಕ್ಕಳಿಗೆ ಕುರಾನ್, ಬೈಬಲ್‌ಗಳನ್ನು ನಿತ್ಯ ಬಾಯಿಪಾಠ ಮಾಡಿಸುತ್ತಾರೆ. ಹಿಂದುಗಳೂ ಸಹ ಧಾರ್ಮಿಕ, ಪುರಾಣಗ್ರಂಥಗಳನ್ನು, ವಚನಗಳನ್ನು, ದಾಸರ ಹಾಡುಗಳನ್ನು ಅವರವರ ನಂಬಿಕೆ ಯಂತೆ ದೇವರ ನಾಮ ನಿತ್ಯ ಪಾರಾಯಣ ಮಾಡಿಸಬೇಕು.

ಬಡಾವಣೆಯಲ್ಲಿ ಮುಸ್ಲಿಂರದ್ದು ಒಂದೇ ಮನೆ ಇದ್ದರೂ ಹಿಂದುಗಳ ಸಹಕಾರದಿಂದ ದರ್ಗಾ/ಮಸೀದಿ ಕಟ್ಟಿ ಕೊಳ್ಳುತ್ತಾರೆ. ಅಜಾನ್ ಕೂಗುತ್ತಾರೆ. ಆದರೆ ಹಿಂದುಗಳು ಮುಸ್ಲಿಂ ಬಡಾವಣೆಯಲ್ಲಿ ಇರಲು ಇಚ್ಛಿಸುವುದಿಲ್ಲ. ಅಷ್ಟೇ ಅಲ್ಲ ಮುಸ್ಲಿಂಬಹುಸಂಖ್ಯಾತ ಪ್ರದೇಶಗಳನ್ನು ಮಿನಿ ಪಾಕಿಸ್ತಾನ ಎಂದು ಹೆಸರಿಸಿ ಅವುಗಳಿಗೆ ಭೇಟಿ ನೀಡುವು ದಂತಿರಲಿ ನೋಡುವ ಸಾಹಸ ಮಾಡುವುದಿಲ್ಲ.

ಮುಸ್ಲಿಂ ಬಡಾವಣೆಯ ಹಿಂದುಗಳಿಗೆ ಬೆಂಬಲ ಮನೋಬಲ ಹೆಚ್ಚಿಸಲು ಸಂಘಟಿತ ಪ್ರಯತ್ನ ಮಾಡಬೇಕು. ಮತ್ತು ಹಿಂದು ಬಡಾವಣೆಯಲ್ಲಿರುವ ಮುಸ್ಲಿಂ ಕ್ರಿಶ್ಚಿಯನ್ರಿಗೆ ಬಡಾವಣೆಯಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳು, ಜಾತ್ರೆಗಳಂತಹ ಧಾರ್ಮಿಕ ಸಮಾವೇಶಗಳು ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸ ಬೇಕು.

ಸರಕಾರ ಬಿಜೆಪಿ ಕಾಂಗ್ರೆಸ್ ಬಿಜೆಡಿ ಯಾವುದೇ ಇರಲಿ ಸರಕಾರದವತಿಯಿಂದ ಪುಗಸಟ್ಟೆ ನೀಡುವ ಸೌಲಭ್ಯಗಳು ಉದಾಹರಣೆಗೆ ಸರಕಾರಿ ಆಸ್ಪತ್ರೆ, ಸರಕಾರಿ ಶಾಲೆ, ಉಚಿತ ತರಬೇತಿ, ವಾಹನ ಖರೀದಿಯಲ್ಲಿ ಶೇ.50 ಸಬ್ಸಿಡಿ, ಉಚಿತ
ಐಎಸ್ ಐಪಿಎಸ್ ತರಬೇತಿ ಸೇರಿದಂತೆ ಎಲ್ಲೆಡೆ ಅಲ್ಪಸಂಖ್ಯಾತರು ಇರುತ್ತಾರೆ. ಬಡ, ಆರ್ಥಿಕವಾಗಿ ಹಿಂದುಳಿದ ಹಿಂದುಗಳ ಮಾತ್ರ ಅವುಗಳನ್ನು ಬಳಸಿಕೊಳ್ಳುವುದಿಲ್ಲ. ಆದ್ದರಿಂದ ರಾಜ್ಯ ಕೆಂದ್ರ ಸರಕಾರಗಳು ನೀಡುವ ಉಚಿತ ಅನುದಾನ, ಸೌಲಭ್ಯಗಳ ಮಾಹಿತಿ ನೀಡಿ ಬಡ ಹಿಂದುಗಳಿಗೆ ಸುಲಭವಾಗಿ ಸಿಗುವಂತೆ ಜಾಗೃತಿ ಮೂಡಿಸಬೇಕು.
ದಿನದ ಬದುಕಿಗಾಗಿ ತಾವು ನಂಬದ ದೇವರ ದೇವಸ್ಥಾನದ ಮುಂದೆ ಪೂಜಾ ಸಾಮಗ್ರಿಗಳಾದ ಕುಂಕುಮ, ಅರಿಶಿನ, ಹೂ, ಹಾರ, ಟೆಂಗು, ಬೆಂಡು ಬತ್ತಾಸು, ಚಹಾ, ಭಜಿ, ಆಟದ ಸಾಮಾನು ಮುಂತಾದ ವಸ್ತುಗಳನ್ನು ಮಾರುತ್ತಾರೆ.

ಆದರೆ ಹಿಂದುಗಳು ದರ್ಗಾಗಳ ಉರಸ್‌ನಲ್ಲಿ ಯಾವುದೇ ಅಂಗಡಿ ಹಾಕುವುದಿಲ್ಲ. ಮೀಸಲಾತಿಯನ್ನು, ಸವಲತ್ತು ಗಳನ್ನು, ಅನುದಾನವನ್ನು ನೀಡುವಾಗ, ವೋಟ್ ಶೇರ್ ಲೆಕ್ಕ ಹಾಕುವಾಗ, ಹಿಂದುಗ ಳನ್ನು ಮಾತ್ರ ಜಾತಿಉಪಜಾತಿ ಗಳ ಹೆಸರಲ್ಲಿ ಗುರುತಿಸುವ ಸರ್ಕಾರ, ಮಾಧ್ಯಮಗಳು, ರಾಜಕಾರಣಿಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್‌ರ ಒಳಪಂಗಡ ಗಳ ಜನಸಂಖ್ಯೆಗೆ ತಕ್ಕಂತೆ, ಉಪಪಂಗಡಗಳ ಬಡವರಿಗೆ ಅನುಕೂಲವಾಗುವಂತೆ ಸಹಾಯಧನ, ಅನುದಾನ ಬಿಡುಗಡೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಬೇಕು.

ಮುಸ್ಲಿಂ, ಕ್ರಿಶ್ಚಿಯನ್ ಹೆಣ್ಣುಮಕ್ಕಳು ಲವ್‌ಜಿಹಾದ್, ಲಿವಿಂಗ್ ಟುಗೆದರ್‌ಗಳಂತಹ ಸಾಮಾಜಿಕ ಪಿಡುಗಳಿಗೆ ಬಲಿ ಯಾಗುವುದಿಲ್ಲ. ಪ್ರಚೋದನಕಾರಿ ಬಟ್ಟೆ ಧರಿಸುವುದು, ಅಂಗಾಂಗ ಪ್ರದರ್ಶನ ಮಾಡುವ ಬಟ್ಟೆ ಧರಿಸಿ ಸ್ಟೇಟಸ್
ಇಡುವುದು ಮಾಡುವುದಿಲ್ಲ. ಅಕಾಲಿಕ ಸಮಯದಲ್ಲಿ, ನಿರ್ಜನ ಪ್ರದೇಶಗಳಲ್ಲಿ ಓಡಾಡುವುದಿಲ್ಲ. ಈ ಎಲ್ಲ ಸಂಗತಿ
ಗಳನ್ನು ಹಿಂದು ಹೆಣ್ಣುಮಕ್ಕಳು ಮಾಡುತ್ತಾರೆ. ಮತ್ತು ಅತ್ಯಾಚಾರಕ್ಕೆ ಒಳಗಾಗುತ್ತಾರೆ.ಎಲ್ಲ ಹೆಣ್ಣುಮಕ್ಕಳು ತಮ್ಮ
ಅಕ್ಕತಂಗಿಯರಂತೆ, ತಾಯಿಂದರಂತೆ ಭಾವಿಸುವ ಹಿಂದೂ ಗಳು ತಮ್ಮ ಗಂಡುಮಕ್ಕಳು ಅತ್ಯಾಚಾರ ಅನಾಚಾರ ಗಳಂತಹ ತಪ್ಪುಗಳನ್ನು ಮಾಡದಂತೆ ಸರಿಯಾದ ತಿಳುವಳಿಕೆ ನೀಡಬೇಕು.

ಕಳೆದ 75 ವರ್ಷಗಳಲ್ಲಿ ಸರಕಾರ, ಸಮುದಾಯದಿಂದ ಸಹಾಯ ಪಡೆಯುವ ಬಹುತೇಕ ಮುಸ್ಲಿಂರು ಸಾರ್ವಜನಿಕ ರಿಗಾಗಿ ಉಚಿತ ಆಸ್ಪತ್ರೆ, ಉಚಿತ ಧರ್ಮಶಾಲೆ, ದೇಶ ಹಿತ ಸಮಾಜಮುಖಿ ಕಾರ್ಯಗಳು ನಡೆಸುತ್ತಿಲ್ಲ ಎಂಬುದನ್ನು ಗಮನಿಸಬೇಕು. ಪ್ರಜ್ಞಾವಂತ ಮುಸ್ಲಿಂರೂ ಸಹ ಸಮಾಜಮುಖಿ ಕಾರ್ಯಮಾಡುವಂತೆ ಪ್ರೋತ್ಸಾಹಿಸಬೇಕು.

ಕಬಡ್ಡಿ ಆಡುವಾಗ ಕಬಡ್ಡಿ ಆಟಗಾರ ಔಟಾದ ತನ್ನ ತಂಡದ ಸದಸ್ಯರನ್ನು ಪುನಃ ಬದುಕಿಸಿ ಆಟ ಆಡಲು ಮಾಡು ವಂತೆ ಮತಾಂತರವಾದ ಹಿಂದುಗಳು, ದಶಕಗಳಿಂದ ಭಾರತದವರೇ ಆಗಿರುವ ಮುಸ್ಲಿಂರು, ಕ್ರಿಶ್ಚಿಯನ್‌ರು ಸಹ ಮತ್ತೇ ಭಾರತದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳುವಂತೆ ಮಾಡಬೇಕು. ಭಯೋತ್ಪಾದಕರು, ಉಗ್ರರು, ಅತ್ಯಾಚಾರಿ ಗಳನ್ನು ಹಿಂದು, ಮುಸ್ಲಿಂ ಮತ್ತು ಕ್ರೈಸ್ತರೆಂದು ಗುರುತಿಸದೇ ಕೇವಲ ಅಪರಾಧಿಗಳೆಂದು ಗುರುತಿಸಬೇಕು.

ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಪೂಜಾಪದ್ಧತಿಗಳ ವೈಯುಕ್ತಿಕ ನೆಲೆಯಲ್ಲಿ, ಸಮುದಾಯದ ನೆಲೆಯಲ್ಲಿ ಪಾಲಿಸ ಬೇಕು. ಜೊತೆಗೆ ಅವರಿಗೆಲ್ಲ ನಾವೆಲ್ಲರೂ ಭಾರತೀಯರೆಂಬ ಭಾವ ಬೆಳೆಸಿಕೊಳ್ಳುವ ರೀತಿಯಲ್ಲಿ ಪ್ರತಿ ನಾಗರೀಕರು ಅವರೊಂದಿಗೆ ನಡೆದು ಕೊಳ್ಳಬೇಕು.

(ಲೇಖಕರು: ರಾಷ್ಟ್ರೀಯ ಮತ್ತು ಸ್ವದೇಶಿ ವಿಷಯಗಳ ಚಿಂತಕರು)

ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ