Saturday, 10th May 2025

BBK 11: ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಕ್ಯಾಪ್ಟನ್ ಪಟ್ಟ ಅಲಂಕರಿಸಿದ ಭವ್ಯಾ ಗೌಡ

Bhavya Gowda Captain (1)

ಬಿಗ್ ಬಾಸ್ ಮನೆಗೆ (Bigg Boss Kannada 11) ಕಾಲಿಟ್ಟ ನಂತರ ಒಮ್ಮೆಯಾದರು ಕ್ಯಾಪ್ಟನ್ ಪಟ್ಟ ಅಲಂಕರಿಸಬೇಕು ಎಂಬುದು ಪ್ರತಿಯೊಬ್ಬ ಸ್ಪರ್ಧಿಯ ಕನಸು. ಹಾಗೆ ಒಂದು ವಾರದ ನಾಯಕನಾದರೆ ಆತನಿಗೆ ಕ್ಯಾಪ್ಟನ್ ರೂಮ್, ವಿಶೇಷ ಸೌಲಭ್ಯ ದೊರೆಯುತ್ತದೆ, ಇಮ್ಯುನಿಟಿ ಮತ್ತು ವಿಶೇಷ ಅಧಿಕಾರಗಳು ಸಿಗುತ್ತವೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಸದ್ಯ 10 ಸ್ಪರ್ಧಿಗಳಿದ್ದಾರಷ್ಟೆ. ಇವರಲ್ಲಿ ಇನ್ನೂ ಒಮ್ಮೆಯು ಕ್ಯಾಪ್ಟನ್ ಆಗದವರು ಇದ್ದಾರೆ. ಆದರೆ, ಇದೀಗ 13ನೇ ವಾರಕ್ಕೆ ಭವ್ಯಾ ಗೌಡ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ವಿಶೇಷ ಎಂದರೆ ಭವ್ಯಾ ಮನೆಯ ಕ್ಯಾಪ್ಟನ್ ಆಗಿರುವುದು ಇದು ಎರಡನೇ ಬಾರಿ. ಬಿಗ್​ ಬಾಸ್​ ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್​ನ್ನು ನೀಡುದ್ದರು. ಅದರಲ್ಲಿ ಗೌತಮಿ, ಐಶ್ವರ್ಯಾ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್​ ಆಯ್ಕೆಯಾಗಿದ್ದರು. ಇವರ ಪೈಕಿ ಕೊನೆಯ ಕ್ಷಣದಲ್ಲಿ ಐಶ್ವರ್ಯಾ ಹಾಗೂ ಭವ್ಯಾ ಗೌಡ ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್​ ಆಗಿದ್ದರು.

ಕ್ಯಾಪ್ಟನ್ ಆಗಲು ಭವ್ಯಾ ಹಾಗೂ ಐಶ್ವರ್ಯಾ ಅವರಿಗೆ ಬಿಗ್ ಬಾಸ್ ಕತ್ತಲೆ ಬೆಳಕಿನ ಆಟದ ಟ್ವಿಸ್ಟ್ ಕೊಟ್ಟಿದ್ದಾರೆ. ಆ್ಯಕ್ಟಿವಿಟಿ ರೂಮ್‌ನಲ್ಲಿ ಕಾಲ ಕಾಲಕ್ಕೆ ಲೈಟ್ ಆನ್ ಮತ್ತು ಆಫ್ ಆಗುತ್ತದೆ. ಆಗ ಒಂದೊಂದೇ ಬಣ್ಣಗಳನ್ನು ಆಯಾ ಬಣ್ಣವನ್ನು ಸೂಚಿಸುವ ಪೆಡಾಸ್ಟಲ್‌ಗಳ ಮೇಲೆ ಇಡಬೇಕು. ಈ ಕತ್ತಲೆ ಬೆಳಕಿನ ಆಟದಲ್ಲಿ ಭವ್ಯಾ ಗೌಡ ಗೆದ್ದು ಮನೆಯ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿದ್ದಾರೆ. ಈ ಮೂಲಕ ಮುಂದಿನ ವಾರದ ನಾಮಿನೇಷನ್​ನಿಂದ ಭವ್ಯಾ ಪಾರಾಗಿದ್ದಾರೆ.

ಚೈತ್ರಾ ಕುಂದಾಪುರ ಕಳಪೆ:

ಚೈತ್ರಾ ಕುಂದಾಪುರ ಬರೋಬ್ಬರಿ ನಾಲ್ಕನೇ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಕಳಪೆ ವೋಟ್ ಪಡೆದು ಜೈಲಿಗೆ ತೆರಳಿದ್ದಾರೆ. ಕಳಪೆಗೆ ಹೆಚ್ಚಿನ ಜನರು ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಅದರಲ್ಲೂ ಸದಾ ಸೈಲೆಂಟ್ ಆಗಿರುವ ಹನುಮಂತ ಈ ವಾರ ಕೊಂಚ ವೈಲೆಂಟ್ ಆಗಿದ್ದರು. ಇದು ಕಳಪೆ ನೀಡುವ ಸಂದರ್ಭ ಕೂಡ ಕಾಣಿಸಿಕೊಂಡಿದೆ. ಟಾರ್ಗೆಟ್ ಮಾಡಿಕೊಂಡು ಕಳಪೆ ಕೊಡಲು ನಾನು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಹನುಮಂತ ಡೈಲಾಗ್ ಹೊಡೆದಿದ್ದಾರೆ. ಧನರಾಜ್‌ ಹಾಗೂ ಮೋಕ್ಷಿತಾ ಅವರು ಕೂಡ ಪಕ್ಷಪಾತ ವಿಚಾರವಾಗಿ ಕಳಪೆ ಕೊಟ್ಟರು.

BBK 11: ನೀನು ನಮ್ಮ ಅತ್ತೆ ಮಗಳಲ್ಲ: ಚೈತ್ರಾ ವಿರುದ್ಧ ಮತ್ತೊಮ್ಮೆ ಸಿಡಿದೆದ್ದ ಹನುಮಂತ