ಡೆಹ್ರಾಡೂನ್: ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ಆಸಕ್ತಿದಾಯಕ ಘಟನೆಗಳು ಕಂಡು ಬರುತ್ತವೆ. ಈ ಪೈಕಿ ಹಲವು ಗಮನ ಸೆಳೆಯುತ್ತವೆ. ಅದರಲ್ಲಿಯೂ ಕೆಲವು ತಮಾಷೆಯ ಘಟನೆಗಳನ್ನು ಎಡಿಟ್ ಮಾಡಿ ಟ್ರೋಲಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ಸಾಕಷ್ಟು ಮನರಂಜನೆ ಒದಗಿಸುತ್ತಾರೆ. ಕೆಲವೊಮ್ಮೆ ಸುಂದರ ಯುವತಿಯೊಂದಿಗೆ ಬಾಯ್‌ಫ್ರೆಂಡ್ ತಿರುಗಾಡುವುದು, ಇಬ್ಬರು ಗರ್ಲ್ ಫ್ರೆಂಡ್ ಜತೆ ಹುಡುಗನೊಬ್ಬ ಸುತ್ತಾಡುವ ವಿಡಿಯೊವನ್ನು ಹಂಚಿಕೊಂಡು ಸಿಂಗಲ್ ಹುಡುಗರು ಬೇಸರ ಪಟ್ಟುಕೊಳ್ಳುವಂತೆ ಚಿತ್ರಿಸಲಾಗುತ್ತದೆ. ʼಎಷ್ಟು ಹೊಟ್ಟೆ ಉರಿಸ್ತಾರೊʼ ಎನ್ನುವ ಡೈಲಾಗ್ ಹೇಳುವಂತೆ ಎಡಿಟ್ ಮಾಡುತ್ತಾರೆ. ಸದ್ಯ ಇಂತಹದ್ದೇ ಘಟನೆಯೊಂದು ವೈರಲ್ ಆಗಿದೆ (Viral Video).
ನಡು ರಸ್ತೆಯಲ್ಲಿ ಯುವತಿಯರಿಬ್ಬರು ಬಾಯ್‌ಫ್ರೆಂಡ್‌ಗಾಗಿ ಮೈಮರೆತು ಕಿತ್ತಾಡಿದ್ದಾರೆ. ಆತನಿಗಾಗಿ ಜಡೆ ಹಿಡಿದು ಹೊಡೆದಾಡಿಕೊಂಡ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೊವನ್ನು ನೋಡಿ ಸಿಂಗಲ್ ಹುಡುಗರು ಪೇಚಾಡಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳ ಎನ್ನುವುದನ್ನೂ ಲೆಕ್ಕಿಸದೆ ಇಬ್ಬರು ಯುವತಿಯರು ಪರಸ್ಪರ ಎಳೆದಾಡಿದ್ದಾರೆ. ಕೂದಲನ್ನು ಕಿತ್ತಿದ್ದಾರೆ. ಮಾತ್ರವಲ್ಲ ಹೊಡೆದು, ಒದ್ದುಕೊಂಡಿದ್ದಾರೆ. ಒಟ್ಟಿನಲ್ಲಿ ರೋಚಕ ಹಣಾಹಣಿಯೇ ನಡೆದಿದೆ. ರಸ್ತೆ ರಣಾಂಗಣವಾಗಿ ಬದಲಾಗಿದೆ.
देवभूमि की देवियां..
— Vivek K. Tripathi (@meevkt) December 17, 2024
बीच सड़क पर लड़ रही लड़कियों का ये वीडियो उत्तराखंड का है.. एक दूसरे को गिरा गिरा कर पीट रहीं.. एक से बढ़कर एक गालियां मुंह से निकल रहीं.. लड़ने में कपड़ों का भी ख्याल नहीं.. लोग तमाशा देख रहे.. ऐसी लड़ाई कि लड़के भी शरमा जाएं.. कहां जा रहा समाज?? pic.twitter.com/zlc7Tz4k4K
ವಿಡಿಯೊದಲ್ಲಿ ಏನಿದೆ?
ಈ ಘಟನೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನ ರಾಯ್‌ಪುರದಲ್ಲಿ ನಡೆದಿದೆ ಎನ್ನಲಾಗಿದೆ. ನಡು ರಸ್ತೆಯಲ್ಲಿ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿದ್ದ ಯುವತಿಯರಿಬ್ಬರು ಹೊಡೆದಾಡುವ ದೃಶ್ಯದ ಮೂಲಕ ವಿಡಿಯೊ ಅರಂಭವಾಗುತ್ತದೆ. ಬಳಿಕ ಇವರ ಜಗಳ ತಾರಕಕ್ಕೇರುತ್ತದೆ. ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಾರೆ. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ನೋಡುತ್ತ ಎಂಜಾಯ್ ಮಾಡುತ್ತಿದ್ದರೆ, ಹಲವರು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ. ಇವರ ಗಲಾಟೆಯಿಂದ ಕೆಲ ಹೊತ್ತು ರಸ್ತೆ ಬ್ಲಾಕ್ ಕೂಡ ಅಗಿದೆ. ಕೆಲ ವಾಹನ ಚಾಲಕರು ಸ್ವಲ್ಪ ಹೊತ್ತು ನಿಂತು ಈ ಜಗಳವನ್ನು ಆಸಕ್ತಿಯಿಂದ ಗಮನಿಸಿ ತೆರಳುತ್ತಿರುವುದೂ ಕಂಡು ಬಂದಿದೆ. ಕೊನೆಗೆ ಕೆಲವರು ಮುಂದೆ ಬಂದು ಜಗಳವನ್ನು ನಿಲ್ಲಿಸಲು ಯಶಸ್ವಿಯಾಗಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಸದ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊ ಹಲವರ ಗಮನ ಸೆಳೆದಿದೆ. ಈ ವಿಡಿಯೊ ನೋಡಿದ ಹಲವರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ʼʼಹುಡುಗರೇ ಯಾಕೆ ಎಲ್ಲ ಮೋಜನ್ನು ಅನುಭವಿಸಬೇಕು?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ʼʼಯುವ ಜನತೆ ಎತ್ತ ಸಾಗುತ್ತಿದೆ? ಇದು ಉತ್ತಮ ಬೆಳವಣಿಗೆಯಲ್ಲʼʼ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ʼʼಸ್ಥಳದಲ್ಲಿದ್ದವರು ಜಗಳ ಬಿಡಿಸಲು ಹೋಗದೆ ನಿಂತು ನೋಡುತ್ತಿದ್ದಾರೆ. ಇದು ಯಾಕೋ ಅತಿಯಾಯ್ತುʼʼ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ʼʼಇದು ಸೋಶಿಯಲ್ ಮೀಡಿಯಾದ ಸೈಡ್ ಎಫಕ್ಟ್ʼʼ ಎಂದು ಮಗದೊಬ್ಬರು ತಿಳಿಸಿದ್ದಾರೆ. ʼʼಇಂತಹ ಜನರಿಗೆ ಯಾವುದೇ ನಾಚಿಕೆಯಾಗಲೀ, ಮಾನ ಮರ್ಯದೆಯಾಗಲೀ ಇರುವುದಿಲ್ಲʼʼ ಎಂದು ನೆಟ್ಟಿಗರೊಬ್ಬರು ಕಿಡಿ ಕಾರಿದ್ದಾರೆ. ಇನ್ನು ಕೆಲವರು ಬಾಯ್‌ಫ್ರೆಂಡ್ ನಿಜಕ್ಕೂ ಲಕ್ಕಿ. ಇಬ್ಬರು ಯುವತಿಯರನ್ನು ಪಟಾಯಿಸಿದ್ದಾನೆ ಎಂದೆಲ್ಲ ಕಾಲೆಳೆದಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ಸದ್ಯ ಸಾಕಷ್ಟು ಗಮನ ಸೆಳೆಯುತ್ತಿದೆ.
ಈ ಸುದ್ದಿಯನ್ನೂ ಓದಿ:ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಿಡಿಗೇಡಿಗೆ ಬರೋಬ್ಬರಿ 26 ಬಾರಿ ಕಪಾಳಮೋಕ್ಷ ಮಾಡಿದ ಮಹಿಳೆ; ವಿಡಿಯೊ ಭಾರೀ ವೈರಲ್