Saturday, 10th May 2025

Airodi Bhaskar H Shetty: ಉದ್ಯಮಿ ಐರೋಡಿ ಭಾಸ್ಕರ್ ಎಚ್. ಶೆಟ್ಟಿ ನಿಧನ

Airodi Bhaskar H Shetty

ಬ್ರಹ್ಮಾವರ: ಉದ್ಯಮಿಯಾಗಿದ್ದ ಐರೋಡಿ ಭಾಸ್ಕರ್ ಎಚ್. ಶೆಟ್ಟಿ (83) ಅವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಇವರು ಮೊದಲು ಮುಂಬೈನಲ್ಲಿ ಉದ್ಯಮಿಯಾಗಿದ್ದರು.

ಮೃತರು ಪತ್ನಿ, ಮೂವರು ಪುತ್ರಿಯರು, ಅಳಿಯಂದಿರು, 6 ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಡಿ.21 ರಂದು ಶನಿವಾರ ಕೊಕ್ಕರ್ಣೆ ಹಳ್ಳಿಯ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಇವರು ದುಬೈ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮಾವ.

ಈ ಸುದ್ದಿಯನ್ನೂ ಓದಿ | Jaipur Accident: ಗ್ಯಾಸ್‌ ತುಂಬಿದ್ದ ಟ್ರಕ್‌ಗಳು ಡಿಕ್ಕಿ – ಸ್ಫೋಟದ ರಣಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ- ಸಾವಿನ ಸಂಖ್ಯೆ 9ಕ್ಕೆ ಏರಿಕೆ