ಜೈಪುರ: ರಾಜಸ್ಥಾನದ (Rajasthan) ಭಾಂಕ್ರೋಟಾದ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಪೆಟ್ರೋಲ್ ಪಂಪ್ ಬಳಿ ಎಲ್ಪಿಜಿ ಮತ್ತು ಸಿಎನ್ಜಿ ಟ್ರಕ್ಗಳ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಅಪಘಾತದ ನಂತರ ಹಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ 5 ಮಂದಿ ಮೃತಪಟ್ಟಿದ್ದು, 30 ರಿಂದ 35 ಜನರು ಸುಟ್ಟಗಾಯಗಳಿಂದ ಗಂಭೀರವಾಗಿ (Fire Accident) ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸವಾಯಿ ಮಾನ್ ಸಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. (Jaipur Accident)
20ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲೇ ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಸಮೀಪದ ಮಾರ್ಗವನ್ನು ಬೇರೆಡೆಗೆ ತಿರುಗಿಸಲಾಗಿದೆ. ಅಜ್ಮೀರ್ ರಸ್ತೆಯಲ್ಲಿ ಮುಂಜಾನೆ 5:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಟ್ರಕ್ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಎನ್ಜಿ ಟ್ಯಾಂಕರ್ಗೆ ಬೆಂಕಿ ಹೊತ್ತಿಕೊಂಡಿದೆ.
A tanker full of chemicals exploded in front of Delhi Public School, causing a massive fire in Jaipur on Ajmer Highway. 4 people were killed, 30 others injured, and 20 vehicles, including a sleeper bus, were engulfed in flames.@NewIndianXpress @santwana99 @Shahid_Faridi_ pic.twitter.com/xKycQMJW6C
— Rajesh Asnani (@asnaniraajesh) December 20, 2024
ಘಟನಾ ಸ್ಥಳಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಬಗ್ಗೆ ವಿಚಾರಿಸಿದ್ದೇನೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
#WATCH | Bhankrota Fire incident | Rajasthan CM Bhajanlal Sharma says, "I visited the hospital and directed them to admit all the injured people. The government will provide all the necessary help…We have issued a helpline. This is a tragic incident… I have got the… https://t.co/mGXwXJAJcw pic.twitter.com/Jwvavku2y0
— ANI (@ANI) December 20, 2024
ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ : Fire Accident: ಸ್ಟೀಲ್ ಕಂಪನಿಯಲ್ಲಿ ಬೆಂಕಿ ಅವಘಡ; 16 ಕಾರ್ಮಿಕರ ಸ್ಥಿತಿ ಗಂಭೀರ