ವಿಶ್ಲೇಷಣೆ
ವಿನಯ್ ಸಹಸ್ರಬುದ್ದೆ
‘ಯಥಾಸ್ಥಿತಿಯ ಮುಂದುವರಿಕೆಯಾಗಲಿ’ ಎಂದು ಬಯಸುವುದೇ ಬಹುತೇಕ ವಿಪಕ್ಷಗಳ ಪಟ್ಟಭದ್ರ ಹಿತಾಸಕ್ತಿ ಯಾಗಿರುವುದರಿಂದ, ಅವು ಉನ್ನತ ಸುಧಾರಣೆಗಳನ್ನು ವಿರೋಧಿಸುವುದಕ್ಕೇ ಬದ್ಧವಾಗಿವೆ. ಹೀಗಾಗಿ ರಾಜಕೀಯ ಸುಧಾರಣೆಗಳು ಅದೆಷ್ಟು ಅಗತ್ಯ ಎಂಬುದನ್ನು ಅವಕ್ಕೆ ಮನವರಿಕೆ ಮಾಡಿಕೊಡ ಬೇಕಾಗಿದೆ.
ಏಕಕಾಲಿಕ ಚುನಾವಣೆಗಳಿಗೆ ಸಂಬಂಧಿಸಿದ ವಿಧೇಯಕವು ‘ಕಾನೂನು’ ಆಗುತ್ತಿದ್ದಂತೆ, ಭಾರತದ ರಾಜಕೀಯ ಚಿತ್ರಣವು ಈಗ ನಾವು ಕಾಣುತ್ತಿರುವುದಕ್ಕಿಂತ ಭಿನ್ನವಾಗಲಿದೆ. ಈ ವಿಧೇಯಕವು ಭಾರತದಲ್ಲಿನ ಎಲ್ಲ ಪ್ರಜಾ ಸತ್ತಾತ್ಮಕ ರಾಜಕೀಯ ಸುಧಾರಣೆಗಳ ತಾಯಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
ಇಂಥ ಪ್ರಸ್ತಾವನೆಯನ್ನು ಈ ಘಟ್ಟಕ್ಕೆ ತಂದು ನಿಲ್ಲಿಸುವಲ್ಲಿ ಪ್ರಧಾನಿ ಮೋದಿಯವರು ತೋರಿದ ದೃಢಸಂಕಲ್ಪ ಮತ್ತು ಇಟ್ಟಿದ್ದ ಗಾಢನಂಬಿಕೆಗಾಗಿ ಅವರಿಗೆ ನಮಿಸಲೇಬೇಕು. ಇದರ ಸಂಪೂರ್ಣ ಯಶಸ್ಸು ಅವರಿಗೆ ಸಲ್ಲಬೇಕು.
ಆದರೆ, ಇಂಥ ಸಾಧನೆಯನ್ನು ಜೀರ್ಣಿಸಿಕೊಳ್ಳಲಾಗದ ಮೋದಿಯವರ ಟೀಕಾಕಾರರು, ಈ ಕುರಿತು ತಾರ್ಕಿಕವಾಗಿ ವಾದಿಸುವ ಬದಲು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಅದೇನೇ ಇದ್ದರೂ, ಯಥಾಸ್ಥಿತಿಯ ಮುಂದುವರಿಕೆಯ
ಆಯ್ಕೆ ಇದ್ದುದರ ಹೊರತಾಗಿಯೂ ಮೋದಿ ಈ ಸವಾಲನ್ನು ಧೈರ್ಯವಾಗಿ, ನೇರವಾಗಿ ಮತ್ತು ದೃಢವಿಶ್ವಾಸ ದೊಂದಿಗೆ ಎದುರಿಸಲು ನಿರ್ಧರಿಸಿದ್ದಾರೆ ಎಂಬ ವಾಸ್ತವವನ್ನು ಈ ಟೀಕಾಕಾರರು ನಿರಾಕರಿಸಲಾರರು.
ಇದು ನಿಜಕ್ಕೂ ಗಮನಾರ್ಹ ಬೆಳವಣಿಗೆಯೇ. ಏಕೆಂದರೆ, 2014ಕ್ಕೂ ಮುಂಚಿನ ಕಾಲಘಟ್ಟದಲ್ಲಿ, “ರಾಜಕಾರಣ ದಲ್ಲಿ ಇಂಥ ವ್ಯವಸ್ಥಿತ ಸುಧಾರಣೆ ತರಲು ಯಾವುದೇ ರಾಜಕೀಯ ಪಕ್ಷದ ಯಾವ ರಾಜಕಾರಣಿಗೂ ಇಚ್ಛಾಶಕ್ತಿ ಯಿಲ್ಲ” ಎಂಬುದೇ ಅನೇಕ ಭಾರತೀಯರ ಗ್ರಹಿಕೆಯಾಗಿತ್ತು. ಈ ಕಾರಣಕ್ಕೇ ಇರಬೇಕು, ಎನ್.ಆರ್.ನಾರಾಯಣ ಮೂರ್ತಿ ಅವರಂಥ ಪ್ರಾಜ್ಞರು, “ನಮ್ಮ ರಾಜಕಾರಣಿಗಳಲ್ಲಿ ಮಡುಗಟ್ಟಿರುವ ಪಟ್ಟಭದ್ರ ಹಿತಾಸಕ್ತಿಗಳು, ಯಥಾಸ್ಥಿತಿ ಯನ್ನು ಕಾಯ್ದುಕೊಳ್ಳುವುದರ ಪರವಾಗಿ ಇರುವಂತೆ ಮಾಡಿಬಿಟ್ಟಿವೆ” ಎಂದು ಆರೋಪಿಸುವ ಮೂಲಕ ಒಂದಿಡೀ ರಾಜಕೀಯ ವಲಯವನ್ನು ಖಂಡಿಸಿದ್ದರು ಎನಿಸುತ್ತದೆ. ಆದರೆ ಇಂಥ ಆಮಿಷವೀಗ ನಿರಾಕರಿಸಲ್ಪಟ್ಟಿದೆ ಎಂಬು ದನ್ನು ಮೋದಿಯವರ ಸಮರ್ಥ ನಾಯಕತ್ವವೇ ಬಿಂಬಿಸಿದೆ.
ಒಟ್ಟಿನಲ್ಲಿ, ಏಕಕಾಲಿಕ ಚುನಾವಣೆ ಸಂಬಂಧಿತ ವಿಧೇ ಯಕವು ಪ್ರಸ್ತುತ ಅಂಗೀಕರಿಸಲ್ಪಟ್ಟಿರುವುದು ನಿಜಕ್ಕೂ ಹರ್ಷದಾಯಕ ಬೆಳವಣಿಗೆ. ಈ ಶಾಸನದಲ್ಲಿನ ನಿಬಂಧನೆಗಳು/ ಮುನ್ನೇರ್ಪಾಡುಗಳು, ಹಲವಾರು ಅಪೇಕ್ಷಣೀಯ
ಬದಲಾವಣೆಗಳಿಗೆ ಕಾರಣವಾಗುವುದಂತೂ ಹೌದು.
ಮೊದಲಿಗೆ, ಇದು ಚುನಾವಣಾ ರಾಜಕೀಯಕ್ಕೆ ಕಡಿಮೆ ಸಮಯವನ್ನೂ, ನಿಜವಾದ ಆಡಳಿತಕ್ಕೆ ಹೆಚ್ಚು ಸಮಯ ವನ್ನೂ ನೀಡುತ್ತದೆ. ಎರಡನೆಯದಾಗಿ, ದೇಶದ ಒಂದಲ್ಲಾ ಒಂದು ಭಾಗದಲ್ಲಿ ಏನಾದರೊಂದು ಚುನಾವಣಾ ಸೆಣಸಾಟವು ನಡೆಯುತ್ತಲೇ ಇರುವುದರ ಪರಿಣಾಮ, ಅದರಲ್ಲಿ ತೊಡಗಿಸಿಕೊಳ್ಳಲೇಬೇಕಾದ ಅನಿವಾರ್ಯತೆಯ ಹಿಡಿತದಿಂದ ರಾಜಕೀಯ ಪಕ್ಷಗಳು ಬಿಡಿಸಿಕೊಳ್ಳುವುದಕ್ಕೆ ಇದು ಮಹತ್ತರ ಅವಕಾಶವನ್ನು ಕಲ್ಪಿಸಲಿದೆ. ಮೂರನೆ ಯದಾಗಿ, ಏಕಕಾಲಿಕ ಚುನಾವಣೆಗಳಲ್ಲಿ ಹಲವು ಸುಧಾರಣೆಗಳು ಅಂತರ್ಗತವಾಗಿರುವು ದರಿಂದ, ಅವು ‘ಮಾನವ-ಆರ್ಥಿಕ-ವಸ್ತುರೂಪದ’ ಸಂಪನ್ಮೂಲಗಳ ಬಳಕೆಯನ್ನು ಮಹತ್ತರವಾಗಿ ತಗ್ಗಿಸುತ್ತವೆ/ ಉಳಿಸುತ್ತವೆ. ಇವೆಲ್ಲಕ್ಕಿಂತ ಪ್ರಾಯಶಃ ಹೆಚ್ಚು ಮುಖ್ಯವಾಗಿರುವ ಹಾಗೂ ಆ ಕಾರಣದಿಂದಾಗಿ ಅಪೇಕ್ಷಣೀಯ ವಾಗಿರುವ ಅಂಶವೆಂದರೆ, ಈ ನಿರ್ಣಾಯಕ ಸುಧಾರಣಾ ಕ್ರಮವು ಒಂದಷ್ಟು ಆರೋಗ್ಯಕರ ಚರ್ಚೆಗಳನ್ನು ಹುಟ್ಟು ಹಾಕುತ್ತದೆ ಮತ್ತು ಈ ಚರ್ಚೆಗಳು ಉತ್ತಮ ಆಡಳಿತಕ್ಕೆ ಸಂಬಂಧಿಸಿ ನಮ್ಮ ರಾಷ್ಟ್ರಕ್ಕೆ ತೀರಾ ಅವಶ್ಯವಿರುವ ಇತರ ಸರಣಿ ರಾಜಕೀಯ ಸುಧಾರಣೆಗಳ ಕುರಿತಾಗಿರುತ್ತವೆ ಎಂಬುದು ಗಮನಾರ್ಹ.
ಹೀಗೆ ಅತ್ಯಂತ ಅವಶ್ಯವಿರುವ ಸುಧಾರಣೆಗಳ ಸುದೀರ್ಘ ಪಟ್ಟಿಯಲ್ಲಿ, ಬಹುತೇಕ ರಾಜಕೀಯ ಪಕ್ಷಗಳು ತಂತಮ್ಮ
ಆಂತರಿಕ ವ್ಯವಹಾರ/ಚಟುವಟಿಕೆಗಳನ್ನು ನಿರ್ವಹಿಸುವ ಪರಿಯು ಮೊದಲ ಸ್ಥಾನದಲ್ಲಿರುತ್ತದೆ. ರಾಜಕೀಯ ಪಕ್ಷಗಳು ಅಕ್ಷರಶಃ ನಾಯಿಕೊಡೆಗಳಂತೆ ಹುಟ್ಟುತ್ತಿರುವುದು, ಅವುಗಳ ವರ್ತನೆ ಮತ್ತು ಧೋರಣೆಗಳು ತೀರಾ ಅವ್ಯವಸ್ಥಿತವಾಗಿರುವುದು, ಪದಾಧಿಕಾರಿಗಳ ನೇಮಕಾತಿ ಸಂಬಂಧಿತ ಕಾರ್ಯವಿಧಾನಗಳು ಪಾರದರ್ಶಕವಾಗಿಲ್ಲ ದಿರುವುದು, ಪಕ್ಷಕ್ಕೊಂದು ಸೈದ್ಧಾಂತಿಕ ತಳಹದಿಯಿಲ್ಲದಿರುವುದು ಹಾಗೂ ಇವೆಲ್ಲಕ್ಕಿಂತ ಮಿಗಿಲಾಗಿ ಈ ಪಕ್ಷಗಳನ್ನು ಕೆಲ ಕುಟುಂಬಗಳೇ ತಮ್ಮ ಬಿಗಿಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿರುವಂಥ ಆತಂಕಕಾರಿ ವಾತಾವರಣವಿರುವುದು ನಮ್ಮ ದೇಶದಲ್ಲಿ ಮುಖಕ್ಕೆ ರಾಚುವ ಅಪ್ರಿಯ ಸತ್ಯ. ಇದು ಅನೇಕ ರಾಜಕೀಯ ತಜ್ಞರ ಅಭಿಮತವೂ ಹೌದು.
‘ಯಥಾಸ್ಥಿತಿಯ ಮುಂದುವರಿಕೆಯಾಗಲಿ’ ಎಂದು ಬಯಸುವುದೇ ಬಹುತೇಕ ವಿಪಕ್ಷಗಳ ಪಟ್ಟಭದ್ರ ಹಿತಾಸಕ್ತಿ
ಯಾಗಿರುವುದರಿಂದ, ಅವು ಉನ್ನತ ರಾಜಕೀಯ ಸುಧಾರಣೆಗಳನ್ನು ವಿರೋಧಿಸುವುದಕ್ಕೇ ಬದ್ಧವಾಗಿವೆ. ಹೀಗಾಗಿ
ರಾಜಕೀಯ ಸುಧಾರಣೆಗಳು ಅದೆಷ್ಟು ಅಗತ್ಯ ಎಂಬುದನ್ನು ಅವಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ತುಂಬಾ ಹಿಂದಕ್ಕೆ ಹೋಗುವುದೇನೂ ಬೇಡ, ಕಳೆದ ಶತಮಾನದ ಕೊನೆಯ ದಶಕದಲ್ಲಿ, ಅಂದಿನ ಉಪರಾಷ್ಟ್ರಪತಿ ಕೃಷ್ಣ ಕಾಂತ್‌ರವರು ಈ ವಿಷಯದಲ್ಲಿ ಮುಕ್ತವಾಗಿ ಒಂದಷ್ಟು ಕಳವಳ ವ್ಯಕ್ತಪಡಿಸಿದ್ದರು; ಪಕ್ಷಗಳ ನಿರ್ವಾಹಕರು ಮತ್ತು ಅಧಿಕಾರ ದಲ್ಲಾಳಿಗಳಿಗೆ ಬಹುತೇಕ ರಾಜಕೀಯ ಪಕ್ಷಗಳು ಆಶ್ರಯ/ಪ್ರೋತ್ಸಾಹ ನೀಡುತ್ತಿರುವುದರ ಕುರಿತು ಅವರು ಕಳವಳಿಸುತ್ತಾ, “1950ರ ದಶಕದಲ್ಲಿ ಒಬ್ಬ ಸಂಸದ ಅಥವಾ ಶಾಸಕನನ್ನು ‘ಜನಪ್ರತಿನಿಧಿ’ ಎಂದು ಪರಿಗಣಿಸ ಲಾಗುತ್ತಿತ್ತು;
1960ರ ದಶಕದ ಹೊತ್ತಿಗೆ ಅವರು ‘ಜನಪರ ಸಮರ್ಥಕರು’ ಎಂದು ಕರೆಯಲ್ಪಟ್ಟರೆ, ಈಗ ‘ನಾವು ತಮ್ಮ ದಲ್ಲಾಳಿ ಗಳನ್ನು ಆಯ್ಕೆ ಮಾಡುತ್ತಿದ್ದೇವೆ’ ಎಂದು ಜನರು ಪರಿಭಾವಿಸುವಂತಾಗಿದೆ” ಎಂದು ನೇರವಾಗಿ ಹೇಳಿದ್ದರು.
ಇಲ್ಲಿ ಇನ್ನೊಂದು ಅಂಶ ಉಲ್ಲೇಖನೀಯ. 1985ರಲ್ಲಿ ಮುಂಬೈನಲ್ಲಿ ಕಾಂಗ್ರೆಸ್‌ನ ಶತಮಾನೋತ್ಸವ ಅಧಿವೇಶನ
ನಡೆದಾಗ, ರಾಜೀವ್ ಗಾಂಽಯವರು ಇದೇ ‘ಪರಿಭಾಷೆ’ ಬಳಸಿ, ‘ಅಧಿಕಾರದ ದಲ್ಲಾಳಿ’ಗಳಾಗಿ ಕಾರ್ಯನಿರ್ವಹಿಸುವ
ಪಕ್ಷದ ನಿರ್ವಾಹಕರ ಪ್ರವೃತ್ತಿಯನ್ನು ಖಂಡಿಸಿದ್ದರು.
ಆ ನೆಲೆಯಲ್ಲಿ ನೋಡಿದರೆ, ನಮ್ಮ ಪಕ್ಷ ರಾಜಕಾರಣಕ್ಕೆ ಅಮರಿಕೊಂಡಿರುವ ವ್ಯಾಧಿಯೇನು, ಒದಗಿರುವ ತೊಂದರೆ ಯೇನು ಎಂಬುದನ್ನು ಕೃಷ್ಣಕಾಂತ್ ಅವರು ಬಹಳ ಹಿಂದೆಯೇ ಸರಿಯಾಗಿ ನಿರ್ಣಯಿಸಿದ್ದರು ಎನ್ನಲಡ್ಡಿಯಿಲ್ಲ. “ರಾಜಕೀಯ ಸಿದ್ಧಾಂತ ಅಥವಾ ರಾಷ್ಟ್ರೀಯ ಕಾರ್ಯಕ್ರಮದೆಡೆಗಿನ ಪರಿಪೂರ್ಣ ಬದ್ಧತೆಯಿಲ್ಲದ ರಾಜಕೀಯ ಪಕ್ಷಗಳು, ಇಂಥ ಹಿತಾಸಕ್ತ ಗುಂಪುಗಳ ಒಂದು ಸಡಿಲ ಒಕ್ಕೂಟವಾಗಿಬಿಟ್ಟಿವೆ” ಎಂಬ ಕಹಿಸತ್ಯವನ್ನು ಕೃಷ್ಣಕಾಂತ್ ನೇರಾನೇರವಾಗಿ ಹೇಳಿದ್ದರು. ಬಿಜೆಪಿ ಮತ್ತು ಕಮ್ಯುನಿಸ್ಟರನ್ನು ಹೊರತುಪಡಿಸಿದ ಇತರ ರಾಜಕೀಯ ಪಕ್ಷಗಳಿಗೆ ಯಾವುದೇ ದೀರ್ಘಕಾಲೀನ ಸಿದ್ಧಾಂತವಿಲ್ಲ ಎಂಬ ಸಂಗತಿಯನ್ನು ಪರಿಗಣಿಸಿದರೆ, ಕೃಷ್ಣಕಾಂತ್‌ರ ಅಭಿಪ್ರಾಯಗಳು ಸುಳ್ಳಲ್ಲ ಎಂಬುದು ಮನವರಿಕೆಯಾಗುತ್ತದೆ.
ಏಕಕಾಲಿಕ ಚುನಾವಣೆಗಳಿಗೆ ಅನುವುಮಾಡಿಕೊಡುವ ಶಾಸನವು ಸಕಾಲದಲ್ಲಿ ಒದಗಿರುವ ಸರಿಹೆಜ್ಜೆಯಾಗಿದ್ದರೂ,
ಪ್ರಜಾಪ್ರಭುತ್ವದ ಗುಣಮಟ್ಟವನ್ನು ವಽಸಬಲ್ಲ ಇತರ ನಿರ್ಣಾಯಕ ಚರ್ಚಾವಿಷಯಗಳ ಕಡೆಗೂ ಇಂಥದೇ ಗಮನ
ಕೊಡಬೇಕಾದ ಅಗತ್ಯವಿದೆ. ಅವನ್ನು ಒಂದೊಂದಾಗಿ ಅವಲೋಕಿಸೋಣ.
ರಾಜಕೀಯ ಪಕ್ಷಗಳ ಕಾಯಚಟುವಟಿಕೆಗಳನ್ನು ನಿಯಂತ್ರಿಸುವ ಮತ್ತು ಶಿಸ್ತುಬದ್ಧಗೊಳಿಸುವ, ಅವುಗಳ ವರ್ತನೆ/ಧೋರಣೆಯನ್ನು ಹೆಚ್ಚು ಪಾರದರ್ಶಕ, ಉತ್ತರದಾಯಿ ಮತ್ತು ಪ್ರಜಾಸತ್ತಾತ್ಮಕವಾಗಿಸುವ ಒಂದು ಸಮಗ್ರ ಕಾನೂನಿನ ಬಗ್ಗೆ ಆಲೋಚಿಸಲು ಇದು ಸೂಕ್ತ ಸಮಯವಲ್ಲವೇ? ಸರಕಾರೇತರ ಸಂಸ್ಥೆಗಳ (ಅಂದರೆ ಎನ್ ಜಿಒಗಳ) ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವ ವೇಳೆ, ದೇಶದ ಅನೇಕ ಸರಕಾರಿ ಏಜೆನ್ಸಿಗಳು, “ಕುಟುಂಬ ಸದಸ್ಯರು
ಅಥವಾ ರಕ್ತಸಂಬಂಧಿಗಳು ಇಂಥ ಸಂಸ್ಥೆಗಳ ವ್ಯವಸ್ಥಾಪನಾ ಘಟಕದ ಭಾಗವಾಗಿರುವಂತಿಲ್ಲ” ಎಂಬ ಷರತ್ತನ್ನು
ಹಾಕುತ್ತವೆ.
ರಾಜಕೀಯ ಪಕ್ಷಗಳಿಗೂ ಇಂಥದೇ ಕಟ್ಟುಪಾಡು ಹೇರಲು ಸಾಧ್ಯವಿದೆಯಲ್ಲವೇ? ಬಹುತೇಕ ನಿಷ್ಕ್ರಿಯ ವಾಗಿರುವ ಅಥವಾ ತಾಂತ್ರಿಕವಾಗಷ್ಟೇ ಜೀವಂತವಾಗಿರುವ, 2700ಕ್ಕೂ ಹೆಚ್ಚಿನ ರಾಜಕೀಯ ಪಕ್ಷಗಳು ಭಾರತದಲ್ಲಿವೆ; ಅವು ಹೀಗೆ ನಾಯಿಕೊಡೆಗಳಂತೆ ಹುಟ್ಟುವುದನ್ನು ತಪ್ಪಿಸಲು, ಹೊಸ ರಾಜಕೀಯ ಪಕ್ಷದ ಸ್ಥಾಪನಾ ಪ್ರಕ್ರಿಯೆ ಯನ್ನು ಗಂಭೀರವಾಗಿಸಬೇಕಿದೆ ಮತ್ತು ವಿಸ್ತೃತವಾಗಿಸಬೇಕಿದೆ ಅಲ್ಲವೇ? ಪ್ರತಿಯೊಂದು ರಾಜಕೀಯ ಪಕ್ಷವೂ ತನ್ನ ಚಟುವಟಿಕೆಗಳ ವಾರ್ಷಿಕ ವರದಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ನಾವು ಮಾಡಬಹುದಲ್ಲವೇ? ಜರ್ಮನಿಯಲ್ಲಿ ಒಂದು ವಿಶಿಷ್ಟ ಪರಿಪಾಠವಿದೆ.
ಅಲ್ಲಿನ ರಾಜಕೀಯ ಪಕ್ಷಗಳು ತಮ್ಮ ಕಾರ್ಯನಿರ್ವಾಹಕರ/ ಕಾರ್ಯಕರ್ತರ ಸಾಮರ್ಥ್ಯ ನಿರ್ಮಾಣಕ್ಕಾಗಿ ಮತ್ತು ಕಾರ್ಯನೀತಿಯ ಸಂಶೋಧನೆಯನ್ನು ಕೈಗೊಳ್ಳುವುದಕ್ಕಾಗಿ ಪ್ರತಿಷ್ಠಾನಗಳು ಅಥವಾ ವಿಶ್ವಸ್ಥ ಮಂಡಳಿಗಳ (ಟ್ರಸ್ಟ್ ಗಳ) ರೂಪದಲ್ಲಿ ಗಟ್ಟಿ ತಳಹದಿಯನ್ನು ಹಾಕಿಕೊಳ್ಳುತ್ತವೆ. ಈ ಪರಿಪಾಠವನ್ನು ನಮ್ಮಲ್ಲೂ ಅನುಸರಿಸ ಬಹುದಲ್ಲವೇ? ಅವರು ಚುನಾಯಿತ ಪ್ರತಿನಿಧಿಗಳೇ ಇರಲಿ ಅಥವಾ ಪಕ್ಷದ ಪದಾಧಿಕಾರಿಗಳೇ ಆಗಿರಲಿ, ಮೊದಲ ಬಾರಿಗೆ ಕಾರ್ಯಕ್ಷೇತ್ರಕ್ಕೆ ಇಳಿದ ಇಂಥ ಎಲ್ಲರಿಗೂ ಕಡ್ಡಾಯವಾಗಿ ವ್ಯಾಪಕ ತರಬೇತಿ ನೀಡುವ ಸಾಧ್ಯತೆಯನ್ನೂ ನಾವು ಪರಿಶೀಲಿಸಬಹುದು.
ಮತದಾರರ ಸಮೂಹಕ್ಕೆ ಸಲ್ಲಿಸಬೇಕಾದ ವರದಿಯೊಂದನ್ನು ಪ್ರತಿವರ್ಷವೂ ಪ್ರಕಟಿಸುವಂತಾಗಲು ಚುನಾಯಿತ ಪ್ರತಿನಿಧಿಗಳನ್ನು ಪ್ರೋತ್ಸಾಹಿಸಲು ನಾವು ಆಲೋಚಿಸಬಹುದಲ್ಲವೇ? ವಿವಿಧ ಸ್ತರದ ಚುನಾವಣೆಗಳಲ್ಲಿ ಸ್ಪರ್ಧಿಸು ತ್ತಿರುವ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ಪ್ರಣಾಳಿಕೆಗಳನ್ನು ಕಡ್ಡಾಯವಾಗಿ ಪ್ರಕಟಿಸುವಂತಾಗುವ ಮತ್ತು ಅದರಲ್ಲಿನ ಭರವಸೆಗಳನ್ನು ಈಡೇರಿಸಲು ತರುವಾಯದಲ್ಲಿ ಕಡ್ಡಾಯ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದರ ಕುರಿತೂ ನಾವು ವಿಚಾರ-ವಿಮರ್ಶೆ ಮಾಡಬಹುದಲ್ಲವೇ? ಚುನಾವಣೆಯಲ್ಲಿ ಸೋತ ಪಕ್ಷಗಳನ್ನು ಕೂಡ, “ನೀವು ನೀಡಿದ ಭರವಸೆಗಳ ಈಡೇರಿಕೆಗೆ ಮಾಡಿದ ಯೋಜನೆಯ ಕುರಿತು ಮಾಹಿತಿ ನೀಡಿ” ಎಂದು ಕೇಳಬಹುದಲ್ಲವೇ? ಎಲ್ಲ ಸ್ತರಗಳಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ‘ಮತಕ್ಷೇತ್ರದ ಪ್ರಣಾಳಿಕೆ’ಯನ್ನು ಪ್ರಕಟಿಸುವುದನ್ನು, ತರುವಾಯದಲ್ಲಿ ಅದರ ಈಡೇರಿಕೆಗೆಂದು ಕೈಗೊಳ್ಳಲಾಗುವ ಕ್ರಮಗಳ ಕುರಿತು ಪ್ರಕಟಣೆ ನೀಡುವುದನ್ನು ಕಡ್ಡಾಯ ಗೊಳಿಸುವ ಬಗ್ಗೆಯೂ ನಾವು ಚಿಂತನೆ ನಡೆಸಬಹುದಲ್ಲವೇ? ರಾಜಕೀಯ ಸುಧಾರಣೆಗಳ ಅಗಾಧತೆಯ ಕುರಿತು ಚರ್ಚಿಸುವಾಗ, ಚುನಾಯಿತ ಪ್ರತಿನಿಧಿಗಳಿಗೆ ಮೀಸಲಾದ ನಮ್ಮ ಸದನಗಳು, ಮುಖ್ಯವಾಗಿ ನಮ್ಮ ಸಂಸತ್ತು ಕಾರ್ಯ ನಿರ್ವಹಿಸುವ ಪರಿಯಲ್ಲೂ ಸುಧಾರಣೆಯಾಗಬೇಕಿದೆ ಎಂಬ ಅಂಶವನ್ನೂ ನಾವು ಪರಿಗಣಿಸಬೇಕಾಗುತ್ತದೆ.
ಅಟಲ್ ಬಿಹಾರಿ ವಾಜಪೇಯಿ ಅವರು 1996ರಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನಿಲ್ಲಿ ನೆನೆಯಬೇಕು: “ಸಂಸತ್ತಾ ಗಲೀ, ರಾಜ್ಯ ವಿಧಾನಸಭೆಗಳಾಗಲೀ ತಾವು ಪ್ರಮುಖವಾಗಿ ಮಾಡ ಬೇಕಾದ ಕಾರ್ಯವನ್ನು, ಅಂದರೆ ಶಾಸಕಾಂಗದ ಜವಾಬ್ದಾರಿ ಯನ್ನು ದಕ್ಷತೆಯಿಂದಾಗಲೀ ಬದ್ಧತೆಯಿಂದಾಗಲೀ ನಿರ್ವಹಿಸುತ್ತಿಲ್ಲ; ಕೆಲವರನ್ನು ಹೊರತು ಪಡಿಸಿದರೆ, ಈ ಉನ್ನತ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಚುನಾಯಿಸಲ್ಪಟ್ಟವರು ‘ಕಾನೂನು ರೂಪಣೆ’ ವಿಷಯದಲ್ಲಿ ಔಪಚಾರಿಕ ಅಥವಾ ಅನೌಪಚಾರಿಕ ತರಬೇತಿ ಪಡೆದವರಾಗಿಲ್ಲ ಅಥವಾ ತಮ್ಮ ರಾಜಕೀಯ ವೃತ್ತಿಗೆ ಅಗತ್ಯವಿರುವ ಜ್ಞಾನ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂಥ ಒಲವೂ ಅವರಿಗೆ ಇದ್ದಂತಿಲ್ಲ”.
ರಾಜಕೀಯ ಸುಧಾರಣೆ ಸಂಬಂಧಿತ ಈ ಮಾತುಗಳ ಅನುಷ್ಠಾನ ಅಂದುಕೊಂಡಷ್ಟು ಸುಲಭವಲ್ಲವಾದರೂ,
ಪ್ರಜಾಪ್ರಭುತ್ವದ ಸುಧಾರಿತ ಗುಣಮಟ್ಟವನ್ನು ಬಯಸುವ ಭಾರತೀಯರಿಗೆ ಹಾಗೆಂದು ಆಶಿಸಲು ಬಲವಾದ ಕಾರಣವಿದೆ. ಅಷ್ಟಕ್ಕೂ, ಮೋದಿಯವರಿದ್ದರೆ ಎಲ್ಲವೂ ಸಾಧ್ಯವಿದೆ ಬಿಡಿ!
(ಲೇಖಕರು ಬಿಜೆಪಿಯ ಹಿರಿಯ ನಾಯಕರು)
ಇದನ್ನೂ ಓದಿ: #VinayKumarSaxena